Vistara flights: ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ಸೇವೆ
ವಿಸ್ತಾರಾ ಏರ್‌ಲೈನ್ಸ್ ಟಾಟಾ ಸಮೂಹ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ನ ಜಂಟಿ ಉದ್ಯಮವಾಗಿದೆ.
ಬೆಂಗಳೂರು, ಫೆಬ್ರವರಿ. 15: ವಿಸ್ತಾರಾ ಮಂಗಳವಾರ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆಗಳನ್ನು ಪ್ರಾರಂಭಿಸಿದೆ. ಇಲ್ಲಿಂದ ನೇರವಾಗಿ ಬೆಂಗಳೂರಿಗೆ ದೈನಂದಿನ ವಿಮಾನಗಳು ಹಾರಾಟ ನಡೆಸಲಿವೆ.
ಬೆಂಗಳೂರಿನ ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೈನಂದಿನ ವಿಮಾನ ಸೇವೆ ಜೊತೆಗೆ ಆರು ಸಾಪ್ತಾಹಿಕ ವಿಮಾನಗಳು ಮುಂಬೈನಿಂದ ಸೇವೆ ನೀಡಲಿದೆ ಎಂದು ವಿಸ್ತಾರ ತಿಳಿಸಿದೆ.
ವಿಸ್ತಾರಾ ಏರ್‌ಲೈನ್ಸ್ ಟಾಟಾ ಸಮೂಹ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ನ ಜಂಟಿ ಉದ್ಯಮವಾಗಿದೆ. ವಿಸ್ತಾರಾ ಪ್ರಸ್ತುತ ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ (ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಸೇವೆ ನೀಡುತ್ತಿದೆ.

"ವಿಸ್ತಾರಾದಿಂದ ನಮ್ಮ ದೇಶೀಯ ನೆಟ್‌ವರ್ಕ್ ಅನ್ನು ದೃಢೀಕರಿಸುವ ಮೂಲಕ ನಮ್ಮ ಗ್ರಾಹಕರಿಗೆ ಉತ್ತಮ ಸಂಪರ್ಕವನ್ನು ನೀಡಲು ನಾವು ಬದ್ಧರಾಗಿದ್ದೇವೆ. ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾವು ಕಾರ್ಯಾಚರಣೆಯ ಪ್ರಾರಂಭ ಮಾಡಿರುವುದು ಗೋವಾದಲ್ಲಿ ನಮ್ಮ ಹೆಜ್ಜೆಗುರುತನ್ನು ಹೆಚ್ಚಿಸಲಿದೆ. ಜೊತೆಗೆ ಹೆಚ್ಚುತ್ತಿರುವ ಟ್ರಾಫಿಕ್ ಅನ್ನು ಸುಗಮಗೊಳಿಸಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ವಿಸ್ತಾರಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನೋದ್ ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಉತ್ತರ ಗೋವಾಕ್ಕೆ ನೇರ ಸಂಪರ್ಕವನ್ನು ಬಯಸುವ ಗ್ರಾಹಕರು ನಮ್ಮ ವಿಮಾನ ಸೇವೆಯನ್ನು ಹೆಚ್ಚು ಆಯ್ಕೆ ಮಾಡುತ್ತಾರೆ" ಎಂಬ ವಿಶ್ವಾಸವನ್ನು ವಿನೋದ್ ಕಣ್ಣನ್ ವ್ಯಕ್ತಡಿಸಿದ್ದಾರೆ.

ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿಯ ಗೌರವಾರ್ಥವಾಗಿ ಗೋವಾದ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೊಪಾವನ್ನು ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಇದಕ್ಕೆ ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿತ್ತು.
ಮೊಪಾದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.












Click it and Unblock the Notifications