ವೈರಲ್ ವಿಡಿಯೋ: ನೆಲಮಂಗಲದಲ್ಲಿ ಪವಾಡಸದೃಶವಾಗಿ ಅಪಘಾತದಿಂದ ಪಾರಾದ ಮಗು

Recommended Video

      ವೈರಲ್ ವಿಡಿಯೋ: ನೆಲಮಂಗಲದಲ್ಲಿ ಪವಾಡಸದೃಶವಾಗಿ ಅಪಘಾತದಿಂದ ಪಾರಾದ ಮಗು | Oneindia Kannada

      ಬೆಂಗಳೂರು, ಆಗಸ್ಟ್ 22: ಭೀಕರ ವಾಹನಾಪಘಾತವೊಂದರಲ್ಲಿ ಮಗುವೊಂದು ಪವಾಡಸದೃಶವಾಗಿ ಬದುಕಿದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      ಬೆಂಗಳೂರಿನ ಚನ್ನಪರಮೇಶ್ವರ ಮತ್ತು ಅವರ ಪತ್ನಿ ರೇಣುಕಾ ಎಂಬುವವರು ತಮ್ಮ ಐದು ವರ್ಷದ ಮಗುವನ್ನು ಬೈಕಿನ ಮುಂಭಾಗದಲ್ಲಿ ಕೂರಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ನೆಲಮಂಗಲದ ಬಳಿ ವೇಗವಾಗಿ ಬರುತ್ತಿದ್ದ ಚನ್ನಪರಮೇಶ್ವರ ಅವರು ಪಕ್ಕದಲ್ಲಿದ್ದ ಮತ್ತೊಂದು ಬೈಕಿಗೆ ಅಚಾನಕ್ಕಾಗಿ ಗುದ್ದಿದ್ದಾರೆ.

      ಈ ಸಂದರ್ಭದಲ್ಲಿ ದಂಪತಿ ಅಲ್ಲಿಯೇ ಬಿದ್ದಿದ್ದು, ಬೈಕಿನಲ್ಲಿ ಮುಂದೆ ಕೂತಿದ್ದ ಮಗುವಿನ ಸಮೇತ ಬೈಕು ಮುಂದೆ ಎಷ್ಟೋ ದೂರ ಚಲಿಸಿದೆ. ನಂತರ ರಸ್ತೆ ಬದಿಯ ಹುಲ್ಲಿನ ಮೇಲೆ ಬಿದ್ದಿದೆ! ಮಗು ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದೆ.

      ಅಚ್ಚರಿ ಎಂದರೆ ಮಗುವಿದ್ದ ಬೈಕು ತನ್ನಷ್ಟಕ್ಕೇ ಮುಂದೆ ಚಲಿಸುತ್ತಿರುವಾಗ ರಸ್ತೆಯಲ್ಲಿ ಹಲವು ವಾಹನಗಳಿದ್ದರೂ, ಬೈಕಿನ ಬಳಿಯೇ ದೊಡ್ಡ ಲಾರಿಯೊಂದು ಚಲಿಸುತ್ತಿದ್ದರೂ ಮಗು ಯಾವ ಪ್ರಾಣಾಪಾಯವಿಲ್ಲದೆ ಪಾರಾದದ್ದು ನಿಜಕ್ಕೂ ಪವಾಡವೆನ್ನಿಸಿದೆ.

      Viral video: Child miraculously escaped from an accident in Bengaluru

      ಈ ಪವಾಡ ಸದೃಶ ಘಟನೆ ಕ್ಯಾಮರಾವೊಂದರಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+