Video Viral: ಬೆಂಗಳೂರು ಅನ್ವೇಷಿಸಿ ತೊರೆಯುವಾಗ ಕಣ್ಣೀರಿಟ್ಟ ವಿದೇಶಿ ಮಹಿಳೆ! ಕನ್ನಡಿಗರ ಮನಗೆದ್ದ ವಿಡಿಯೋ..
ಬೆಂಗಳೂರು ಕೇವಲ ಐಟಿ ಕೇಂದ್ರವಾಗಿ, ಉದ್ಯಾನ ನಗರವಾಗಿ ಗುರಿತಿಸಲ್ಪಟ್ಟಿಲ್ಲ. ಅದರೊಂದಿಗೆ ಕಲೆ, ಸಾಂಸ್ಕೃತಿ, ಇಲ್ಲಿನ ಜನ ಆಚಾರ ವಿಚಾರ, ಸರ್ವ ಧರ್ಮಿಯರು, ಭಾಷಿಗರನ್ನು ಒಳಗೊಂಡ ಪ್ರಮುಖ ಕರ್ನಾಟಕದ ಭಾಗವೇ ಆಗಿದೆ. ಇಲ್ಲಿನ ಜನರ ತೋರಿಡುವ ಪ್ರೀತಿ, ವಾಸ್ತು ಶಿಲ್ಪ, ಜನರ ಒಡನಾಟವನ್ನು ಮೆಚ್ಚಿರುವ ವಿದೇಶಿ ಮಹಿಳೆ ಬೆಂಗಳೂರಿಗೆ ಕಣ್ಣೀರ ವಿದಾಯ ಹೇಳಿದ್ದಾರೆ. ಭಾರತ, ಬೆಂಗಳೂರು ಬಗ್ಗೆ ಮೆಚ್ಚುಗೆ ಮಾತನಾಡಿ, ಬೆಂಗಳೂರು ಜನರಿಗೆ ತುಂಬ ಹೃದಯದ ಕೃತಜ್ಞತೆ ಅರ್ಪಿಸಿದ್ದಾರೆ. ಪ್ರವಾಸಕ್ಕೆಂದು ಬಂದ ಕೆಲವೇ ದಿನಗಳಲ್ಲಿ ಅವರಿಗೆ ಬೆಂಗಳೂರು ಇಷ್ಟವಾಗಿದ್ದು, ನಗರ ಮತ್ತು ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡುವವರು ಒಮ್ಮೆ ಈ ವಿಡಿಯೋ ನೋಡಬೇಕಿದೆ..
ಹೌದು, ವಿದೇಶಿ ಮಹಿಳೆ ಪ್ರವಾಸಿಗರೊಬ್ಬರು ಬೆಂಗಳೂರಿನ ತಾಣಗಳನ್ನು, ಇಲ್ಲಿನ ಸಂಸ್ಕೃತಿ, ಜನರು ಅನ್ವೇಷಣೆ ವೇಳೆ ಕನ್ನಡಿಗರ ಪ್ರೀತಿಗೆ ತಮ್ಮನ್ನೆ ಕಳೆದುಕೊಂಡು ಭಾವನಾತ್ಮಕವಾಗಿ ಸ್ಪಂದಿಸಿದ್ದು, ಕಣ್ಣೀರಿಡುವುದು ನೋಡಿದರೆ ಕರ್ನಾಟಕ, ಬೆಂಗಳೂರು ಏನೆಂದು ತಿಳಿಯುತ್ತದೆ. ತಮ್ಮ ಅಭಿಪ್ರಾಯ, ತಾವು ಕಂಡಿದ್ದರ ಕುರಿತು ಸ್ವತಃ ವಿದೇಶಿ ಮಹಿಳೆ ಅರಿನಾ ಪೋಸ್ಟ್ ಮಾಡಿದ್ದಾರೆ. ಅವರು ಏನೆಲ್ಲ ಮಾತನಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

'ಬೆಂಗಳೂರು ಜನರಿಗೆ ನನ್ನ ಕೃತಜ್ಞತೆಗಳು' ಇದು ಮಾಧ್ಯಮಗಳು ನೀವು ನೋಡಲು ಬಯಸದ ಭಾರತ ಇದು. ಬೆಂಗಳೂರು ಅನ್ವೇಷಿಸುವ ಸಮಯದ ಆರೋಗ್ಯಕರ ಕ್ಷಣಗಳನ್ನು ಕಳೆದಿದ್ದೇನೆ. ಇಲ್ಲಿನ ವರ್ಣರಂಜಿತ ಬೀದಿಗಳು ಮತ್ತು ಸ್ಥಳೀಯ ಮಾರುಕಟ್ಟೆಗಳು, ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ ಸೇರಿ ಅನೇಕ ಅಂಶಗಳನ್ನು ನಾನು ಕಂಡಿದ್ದೇನೆ' ಎಂದು ಅವರು ಹೇಳುವ ವಿಡಿಯೋ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಬೆಂಗಳೂರಿಗೆ ಅವರು ವಿದಾಯ ಹೇಳುವ ಪೋಸ್ಟ್ ಇದಾಗಿದೆ.
ಬೆಂಗಳೂರಿಗೆ ವಿದಾಯ ಹೇಳಲು ಮನಸ್ಸಿಲ್ಲ..!
'ಅರಿನಾ ಕಣ್ಣೀರನ್ನು ಒರೆಸುತ್ತಲೇ ವಿಡಿಯೋ ಮಾಡಿದ್ದಾರೆ. ''ಬೆಂಗಳೂರಿನಲ್ಲಿ 15 ದಿನಗಳನ್ನು ಕಳೆದಿದ್ದೇನೆ. ಭಾರತದ ಅನ್ವೇಷಣೆಗೆ ಬಂದಿದ್ದಾಗಗಿ ಅವರು ಹೇಳಿಕೊಂಡಿದ್ದಾರೆ. ಇದೀಗ ಬೆಂಗಳೂರು ಸೇರಿದಂತೆ ಭಾರತದಿಂದ ನಿರ್ಗಮಿಸುತ್ತಿದ್ದೇನೆ. ಬೆಂಗಳೂರಿಗೆ ವಿದಾಯ ಹೇಳುವುದು ಕಷ್ಟವಾಗುತ್ತಿದೆ. 'ನಾನು ದೇಶವನ್ನು ಬಿಟ್ಟು ಹೋಗಲು ದುಃಖವಾಗುತ್ತದೆ. ನಾನು ಅಳುವುದಿಲ್ಲ. ಭಾರತವನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ. ಇಲ್ಲಿಯ ಜನರಿಗೆ ಭಾರತ ತುಂಬಾ ಅದ್ಭುತವಾಗಿದೆ. ಇಲ್ಲಿ ದೈವಿಕ ಶಕ್ತಿಯೂ ಇದೆ'' ಮಹಿಳೆ ಭಾವನಾತ್ಮಕವಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಬೆಂಗಳೂರು ಸೇರಿ ಭಾರತವನ್ನು ಅವರು ಕೊಂಡಾಡಿದ್ದಾರೆ.

ವಸತಿಯಲ್ಲಿ ಜನರಿಗೆ ಉತ್ತಮ ಅಭಿರುಚಿ ಇದೆ
ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ ಬಗ್ಗೆ ಮಾತನಾಡಿದರು. 'ಬೆಂಗಳೂರು ಕೆಲವು ಧರ್ಮಗಳ (ಹಿಂದೂ ಧರ್ಮ, ಇಸ್ಲಾಂ ಮತ್ತು ಕ್ರಿಶ್ಚಿಯನ್) ಧರ್ಮದ ಘರ್ಷಣೆ ಒಳಗೊಂಡಿದೆ. ನಗರದಲ್ಲಿ ನಡೆಯುತ್ತಿರುವ ವಸತಿ ಪ್ರದೇಶಗಳ ವೀಕ್ಷಣೆಗೆ ನನಗೆ ತುಂಬಾ ಇಷ್ಟವಾಯಿತು. ಮನೆ, ವಸತಿ ಪ್ರದೇಶಗಳ ವಿಚಾರದಲ್ಲಿ ವಿಷಯಕ್ಕೆ ಬಂದಾಗ ಭಾರತೀಯ ಜನರು ಉತ್ತಮ ಅಭಿರುಚಿಯನ್ನು ಹೊಂದಿದ್ದಾರೆ ಎಂದನಿಸಿತು, ಬೆಂಗಳೂರಿನ ವಿಮಾನ ನಿಲ್ದಾಣದ ಸೌಂದರ್ಯ ಕಣ್ಮನ ಸಳೆಯುವಂಥದ್ದಾಗಿದೆ. ನನ್ನ ಮುಂದಿನ ಭೇಟಿಯವರೆಗೆ ಭಾರತಕ್ಕೆ ವಿದಾಯ ಹೇಳುತ್ತಿದ್ದೇನೆ ಎಂದಿದ್ದಾರೆ.
ಈ ಪ್ರಯಾಣ ನನಗೆ 'ಹುಚ್ಚು ಮತ್ತು ಶುದ್ಧ ಸಂತೋಷದ ಮಿಶ್ರಣವಾಗಿದೆ. ಇದೆಲ್ಲ ಸಮಯ ಕಳೆಯಲು ನೆರವಾದ ಇಲ್ಲಿನ ಜನರಿಗೆ ಹಾರ್ಟ್‌ಫುಲ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅರಿನಾ ಬೆಂಗಳೂರಿನಲ್ಲಿ ಆರೋಗ್ಯಕರ ಕ್ಷಣಗಳನ್ನು ಕಳೆದಿದ್ದಾರೆ. ಬೆಂಗಳೂರು ವಿದಾಯ ಹೇಳುವಾಗ ಕಣ್ಣೀರು ಒರೆಸಿಕೊಳ್ಳುತ್ತಲೇ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗೆ 12,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಸುಮಾರು 1,50,000 ಕ್ಕೂ ಹೆಚ್ಚಿನ ವೀಕ್ಷಣೆ ಆಗಿದೆ.
ಅರಿನಾ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ ಏನು?
"ಬೆಂಗಳೂರಿನ ಹವಾಮಾನ ಅಪ್ಪುಗೆಯಂತೆ ಭಾಸವಾಗುತ್ತದೆ. ಜನರು ಯಾವಾಗಲೂ ವಸಂತಕಾಲದಂತೆ ತಮ್ಮನ್ನು ಅಪ್ಪಿಕೊಳ್ಳುತ್ತಾರೆ. ಹೀಗಾಗಿ ಹೊರಗಿನವರು ನಗರವನ್ನು ಪ್ರೀತಿಸುತ್ತಾರೆ. ಬೆಂಗಳೂರು ಯಾವಾಗಲೂ ನಿಮ್ಮನ್ನು ಆದರದಿಂದ ಸ್ವಾಗತಿಸುತ್ತದೆ" ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ನೀವು ಬೆಂಗಳೂರಿನಿಂದ ಹೊರಡಬಹುದು. ಆದರೆ ನಗರವು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ನೀವು ಯಾವಾಗ ಬೇಕಾದರೂ ಹಿಂತಿರುಗಬಹುದು. ನಿಮ್ಮನ್ನು ಸ್ವಾಗತಿಸಲು ನಾವು ಕಾಯುತ್ತೇವೆ! ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications