• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆತ್ತ ತಾಯಿಯನ್ನೇ ಹೊಡೆದ 17ರ ಯುವಕನಿಗೆ ಊರೆಲ್ಲ ಛೀ, ಥೂ...

|

ಬೆಂಗಳೂರು, ಡಿಸೆಂಬರ್ 9: ಈ ಹದಿನೇಳು ವರ್ಷದ ಯುವಕನ ಕೃತ್ಯ ನೋಡಿದ ಎಂಥವರಿಗೂ ನಖಶಿಖಾಂತ ಉರಿದುಹೋಗುತ್ತದೆ. ಇನ್ನು ಅದರ ವಿಡಿಯೋ ಕೂಡ ಸಿಕ್ಕ ಮೇಲೆ ಬಿಡುವುದುಂಟಾ? ತನ್ನ ತಾಯಿಗೆ ಹೊಡೆದಿದ್ದಾನೆ. ಪೊರಕೆಯನ್ನು ಉಲ್ಟಾ ತಿರುಗಿಸಿ, ಹೊಡೆದು ನನ್ನ ಬಗ್ಗೆ ಯಾಕೆ ಮಾತನಾಡ್ತೀಯಾ ಎಂದು ಪ್ರಶ್ನಿಸಿದ್ದಾನೆ. ಅದನ್ನು ಮತ್ತೊಬ್ಬರು ವಿಡಿಯೋ ಮಾಡಿದ್ದು, ಅದು ಬಯಲಾಗಿದೆ. ಆ ನಂತರ ವೈರಲ್ ಆಗಿದೆ.

ಇದೀಗ ಜೆ.ಪಿ.ನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಇದೀಗ ಆ ಯುವಕ ಪೊಲೀಸರ ಎದುರು ಕ್ಷಮೆ ಕೇಳಿಕೊಂಡಿದ್ದಾನೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರ ಬೆಳಗ್ಗೆ ಈ ವಿಡಿಯೋ ವೈರಲ್ ಆಗಿತ್ತು. ಅಂದ ಹಾಗೆ ವಿಡಿಯೋ ಚಿತ್ರೀಕರಣ ಮಾಡಿದ್ದು, ಆ ಯುವಕನ ಹಿರಿಯ ಅಕ್ಕ.

ತಾಯಿಯ ಸಾವಿನ ಪ್ರಕರಣದಲ್ಲಿ 23 ವರ್ಷದ ಮಾಡೆಲ್ ಬಂಧನ

ನನ್ನ ಬಗ್ಗೆ ನಿನಗೆ ಯಾಕೆ ಬೇಕು? ನಿನ್ನ ಬಗ್ಗೆ ನಾನು ಏನಾದರೂ ಮಾತಾಡಿದ್ದೀನಾ? ನಿನಗೆ ಯಾಕೆ ಬೇಕು ಎನ್ನುತ್ತಾ ಪೊರಕೆಯ ಹಿಂಭಾಗದ ಹಿಡಿಯಿಂದ ಹೊಡೆದಿದ್ದಾನೆ. ಆ ಯುವಕ ಅಪ್ರಾಪ್ತನಾಗಿದ್ದು, ಆತನ ವಿರುದ್ಧ ಆ ತಾಯಿ ಯಾವುದೇ ದೂರು ದಾಖಲಿಸಿಲ್ಲ. ಇದೀಗ ಸ್ವಯಪ್ರೇರಿತರಾಗಿ ಪೊಲೀಸರು ದೂರು ದಾಖಲಿಸಿದ್ದು, ಈ ರೀತಿಯ ಕೃತ್ಯ ಎಸಗುವವರಿಗೆ ಪಾಠ ಎನಿಸುವಂಥ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನನ್ನ ಬಗ್ಗೆ ಏಕೆ ಮಾತನಾಡ್ತೀಯಾ? ನಿನ್ನ ಬಗ್ಗೆ ನಾನು ಮಾತನಾಡ್ತೀನಾ?

ನನ್ನ ಬಗ್ಗೆ ಏಕೆ ಮಾತನಾಡ್ತೀಯಾ? ನಿನ್ನ ಬಗ್ಗೆ ನಾನು ಮಾತನಾಡ್ತೀನಾ?

ಆ ವಿಡಿಯೋದಲ್ಲಿರುವ ಪ್ರಕಾರ: ಮಹಿಳೆಯು ಸೋಫಾ ಮೇಲೆ ಕೂತಿದ್ದಾರೆ. ಅವರ ಎದುರು ನಿಂತಿರುವ ಯುವಕ ತನ್ನ ಬಲಗೈಯಲ್ಲಿ ಪೊರಕೆ ಹಿಡಿದಿದ್ದಾನೆ. ನನ್ನ ಬಗ್ಗೆ ಏಕೆ ಮಾತನಾಡ್ತೀಯಾ? ನಿನ್ನ ಬಗ್ಗೆ ಮಾತನಾಡ್ತೀನಾ? ಎಂದು ಎರಡೇಟು ಜೋರಾಗಿ ಹೊಡೆದಿದ್ದಾನೆ. ನೀನು ಈ ರೀತಿ ಮಾತನಾಡಿದರೆ ನಾನು ಹೊಡೆಯುವುದು ಹೀಗೇ ಮುಂದುವರಿಸ್ತೀನಿ ಎಂದು ಬೆದರಿಸಿದ್ದಾನೆ.

ಜೋರಾಗಿ ಕಿರುಚಿಕೊಂಡಿದ್ದಾರೆ ಆ ತಾಯಿ

ಜೋರಾಗಿ ಕಿರುಚಿಕೊಂಡಿದ್ದಾರೆ ಆ ತಾಯಿ

ಐವತ್ತರ ಹರೆಯದಲ್ಲಿರುವ ಆ ಮಹಿಳೆ, ನಾನು ಏನು ಹೇಳಿದೆ ಎನ್ನುತ್ತಾ ಹೊಡೆತ ಬಿದ್ದಾಗ ಜೋರಾಗಿ ಕಿರುಚಿಕೊಂಡಿದ್ದಾರೆ. ಆ ಮಹಿಳೆ ನೋವಿನಿಂದ ಕಿರುಚಿಕೊಂಡಂತೆಲ್ಲ ಆ ಯುವಕ ಹೊಡೆಯುವುದನ್ನು ಮುಂದುವರಿಸಿದ್ದಾನೆ. ಪ್ರೀತಿ-ಪ್ರೇಮದ ವಿಷಯಕ್ಕೆ ಸಂಬಂಧಿಸಿದಂತೆಯೇ ಹೀಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಸೆಲ್ಫಿ ವಿಚಾರಕ್ಕೆ ಮನಸ್ತಾಪ: ಮೈಸೂರಿನಲ್ಲಿ ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಪೊಲೀಸರಿಗೆ ದೂರು ಕೊಟ್ಟರೂ ಹೆದರುವುದಿಲ್ಲ

ಪೊಲೀಸರಿಗೆ ದೂರು ಕೊಟ್ಟರೂ ಹೆದರುವುದಿಲ್ಲ

ಆ ಯುವಕನ ಅಕ್ಕ ತಡೆಯಲು ಯತ್ನಿಸಿದ್ದಾರೆ. ಆ ವೇಳೆ, ನೀನು ಸುಮ್ಮನಿದ್ದು ಬಿಡು. ಒಂದು ವೇಳೆ ಅವರು ಪೊಲೀಸರಿಗೆ ದೂರು ಕೊಟ್ಟರೂ ನಾನೇನೂ ಹೆದರುವುದಿಲ್ಲ ಎಂದಿದ್ದಾನೆ. ಆಗ, ನೀನು ಮಧ್ಯೆ ಮಾತನಾಡಬೇಡ ಎಂದು ಮಗಳಿಗೆ ಆ ತಾಯಿ ಹೇಳಿದ್ದಾರೆ. ಆಗ ಯುವಕನ ಅಕ್ಕ, ನನಗೆ ಗೊತ್ತು, ನಿನಗೆ ನಮ್ಮ ಬಗ್ಗೆ ಗಮನ ಇಲ್ಲ. ಆದರೆ ಏನು ಮಾಡಬೇಕು ಅಂತ ನನಗೆ ಗೊತ್ತು ಎಂದಿದ್ದಾರೆ.

ಮೊದಲಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು

ಮೊದಲಿಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು

ಈ ಯುವಕನಿಗೆ ಅಪ್ರಾಪ್ತೆಯೊಂದಿಗೆ ಪ್ರೀತಿ ಇದ್ದು, ಆಕೆಯ ಮನೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೆ ಎಂದು ತಿಳಿದುಬಂದಿದೆ. ಮೊದಲಿಗೆ ಆ ಪೊಲೀಸ್ ಠಾಣೆಯಲ್ಲೇ ದೂರು ದಾಖಲಾಗಿತ್ತು. ಯುವಕನ ಮನೆಯು ಜೆ.ಪಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದು, ಆ ನಂತರ ಪ್ರಕರಣವನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಈ ಪ್ರಕರಣದ ಬಗ್ಗೆ ಭಾರೀ ಚರ್ಚೆ ಹಾಗೂ ಸುದ್ದಿ ಆಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JP Nagar police on Saturday registered a suo motu case against a 17-year old boy after a video of him beating his mother with a broom went viral.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more