ಕೆಜಿಎಫ್ ಚಿತ್ರಕ್ಕೆ ತಡೆ ಕೋರಿದ್ದ ಅರ್ಜಿ ಹಿಂಪಡೆದ ವೆಂಕಟೇಶ್
Recommended Video

ಬೆಂಗಳೂರು, ಡಿಸೆಂಬರ್ 21: ರಾಕಿಂಗ್ ಸ್ಟಾರ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ ಕೆಜಿಎಫ್ ಚಿತ್ರಕ್ಕೆ ಇದ್ದ ಕಾನೂನಿನ ತೊಡಕು ನಿವಾರಣೆಯಾಗಿದೆ. ಕೆಜಿಎಫ್ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದ ನಿರ್ಮಾಪಕ ವೆಂಕಟೇಶ್ ಅವರು ತಮ್ಮ ಅರ್ಜಿಯನ್ನು ಹಿಂಪಡೆದುಕೊಂಡಿದ್ದಾರೆ.
'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ
ಬೆಂಗಳೂರಿನ 10ನೇ ಸಿಟಿ ಸಿವಿಎಲ್ ಕೋರ್ಟಿನಿಂದ ಕೆಜಿಎಫ್ ಚಿತ್ರದ ಬಿಡುಗಡೆಗೆ ಗುರುವಾರ(ಡಿಸೆಂಬರ್ 19) ಮಧ್ಯಂತರ ತಡೆ ನೀಡಲಾಗಿತ್ತು. ಜನವರಿ 07, 2019ರ ತನಕ ಚಿತ್ರದ ಬಿಡುಗಡೆಗೆ ತಡೆಯಿತ್ತು.
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದ ಬಿಡುಗಡೆ ತಡೆ ನೀಡುವಂತೆ ರತನ್ ಮತ್ತು ಲೋಹಿತ್ ಎಂಬುವರು ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಇನ್ನೂ ನಡೆಯಬೇಕಿದೆ.

ಕೋರ್ಟಿನಲ್ಲಿ ಕೆಜಿಎಫ್ ಚಿತ್ರದ ವಿರುದ್ಧ ಈ ಚಿತ್ರ ರೌಡಿ ತಂಗಂ ಜೀವನ ಆಧಾರಿತ ಚಿತ್ರ ಎಂಬ ಆರೋಪ ಹೊರೆಸಲಾಗಿದೆ. ವೆಂಕಟೇಶ್ ಎಂಬುವರು ರೌಡಿ ತಂಗಂ ಜೀವನ ಕಥೆಯ ಹಕ್ಕು ಪಡೆದುಕೊಂಡಿದ್ದಾರೆ. ಕೆಜಿಎಫ್ ಚಿತ್ರದ ಕಥೆ ಕೂಡಾ ರೌಡಿ ತಂಗಂ ಕಥೆಯಂತೆ ಇದೆ ಎಂದು ವೆಂಕಟೇಶ್ ಅವರು ಆರೋಪಿಸಿದ್ದರು.
ಡಿಸೆಂಬರ್ 21ರಂದು ವಿಶ್ವದೆಲ್ಲೆಡೆ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಚಿತ್ರ ತೆರೆಗೆ ಬಂದಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ.












Click it and Unblock the Notifications