Get Updates
Get notified of breaking news, exclusive insights, and must-see stories!

ಕಲಾಸೌಧದಲ್ಲಿ ವಾಲಿ ವಧೆ ಮತ್ತೊಮ್ಮೆ ನೋಡಿ ಆನಂದಿಸಿ

ಬೆಂಗಳೂರು, ಆಗಸ್ಟ್ 17: "ಅಶ್ವಘೋಷ ಥಿಯೇಟರ್ ಟ್ರಸ್ಟ್ " ಅರ್ಪಿಸುವ ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಕಾವ್ಯ ಆಧಾರಿತಗಣೇಶ್ ಎಂ ಉಡುಪಿಯವರ ನಿರ್ದೇಶನ ಶ್ರೀಗಜಾನನ ಯುವಕ ಮಂಡಳಿ. ಶೇಷಗಿರಿ ಹಾನಗಲ್ ತಾ|| ಇವರು ಅಭಿನಯಿಸುವ ನಾಟಕ " ವಾಲಿ ವಧೆ " ಆಗಸ್ಟ್ 19ರಂದು ಹನುಮಂತನಗರದ ಕೆಎಸ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ.

ಜ್ಞಾನಪೀಠ ಪುರಸ್ಕೃತ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಚಂದ್ರಶೇಖರ ಕಂಬಾರರು ವಾಲೀ ವಧೆ ನಾಟಕದ ಬಗ್ಗೆ ಹೇಳಿದ್ದು ಹೀಗೆ.......

"ವಾಲೀ ವಧೆ"... ಇದು ಕೇವಲ ನಾಟಕವಲ್ಲ, ಅದ್ಭುತ ಮತ್ತು ಶ್ರೇಷ್ಠ ರಂಗಪ್ರಯೋಗ. ಇದು ಪವಾಡ ನಾನು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅನೇಕ ಅದ್ಭುತ ನಾಟಕಗಳನ್ನು ನೋಡಿದ್ದೇನೆ.

Vaali Vadhe Kannada Play at KH Kala Soudha on August 19

ಆ ಎಲ್ಲ ನಾಟಕಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಬಹುದಾದ ನಾಟಕವಿದು. ಜಗತ್ತಿನ ಶ್ರೇಷ್ಠ ನಾಟಕಗಳಿಗೆ ಸರಿಸಾಟಿಯಾಗಿ ನಿಲ್ಲಬಹುದಾದ ನಾಟಕವಿದು. ದಯವಿಟ್ಟು ಒಮ್ಮೆ ಈ ನಾಟಕ ನೋಡಿ, ಮತ್ತೆರಡು ಸಲ ನೋಡುವಂತೆ ಈ ಪ್ರಯೋಗ ಮಾಡುತ್ತದೆ. ಕುವೆಂಪು ಮತ್ತು ನಾಟಕದ ನಿರ್ದೇಶಕರಿಗೆ ಅನಂತ ಅನಂತ ಧನ್ಯವಾದಗಳು. ಇಂತಹ ಅದ್ಭುತ ನಾಟಕ ಕೊಟ್ಟಿದ್ದಕ್ಕೆ.
ಎಂದಿದ್ದಾರೆ.

ಕುವೆಂಪುರವರ ಶ್ರೀರಾಮಾಯಣ ದರ್ಶನಂ ಇದರ "ಪೂಣ್ದೇನಗ್ನಿಸಾಕ್ಷಿ" ಮತ್ತು "ನೀಂ ಸತ್ಯವ್ರತ ನೇದಿಟಂ " ಎಂಬೆರಡು ಕಾವ್ಯಭಾಗದಿಂದ ಈ ನಾಟಕವನ್ನು ರಚಿಸಲಾಗಿದೆ. ಇಂಗ್ಲೀಷ್ ಮುಖ್ಯವಾಹಿನಿಗೆ ಹರಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಘಟ್ಟಕಾವ್ಯ ಒಂದರ ರುಚಿಯನ್ನು ಇಂದಿನ ತಲೆಮಾರಿಗೆ ಮುಟ್ಟಿಸುವುದಕ್ಕಾಗಿ ಮತ್ತು ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯ ರೂಪಕವಾಗಿ "ವಾಲಿವಧೆ" ಒದಗಿಬಂದಿದೆ.

Vaali Vadhe Kannada Play at KH Kala Soudha on August 19

ದಿನಾಂಕ. ಸಮಯ : ಆಗಸ್ಟ್ 19 ಭಾನುವಾರ ಸಂಜೆ 7 ಗಂಟೆಗೆ

ಪ್ರದರ್ಶನ ಸ್ಥಳ : ಕೆ ಹೆಚ್ ಕಲಾಸೌಧ
ಹನುಮಂತನಗರ

ಟಿಕೇಟ್ : ಬುಕ್ ಮೈ ಶೋ ಮತ್ತುಸ್ನೇಹ ಬುಕ್ ಹೌಸ್, ಶ್ರೀನಗರ, ಕೆ ಹೆಚ್ ಕಲಾಸೌಧ

Vaali Vadhe Kannada Play at KH Kala Soudha on August 19

ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಇಲ್ಲಿ ಅವನು ಸಾಯುವ ಕೊನೆಯ ಘಟ್ಟದಲ್ಲಿ ಪ್ರೀತಿಗಾಗಿ ಹಂಬಲಿಸಿ ತುಡಿಯುವ, ತನ್ನ ಅಹಂಕಾರಕ್ಕೆ ತಾನೆ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮ ಬದುಕನ್ನು ಇಚ್ಛಿಸುವ ಅಣ್ಣ ವಾಲಿಯಾಗಿ ಚಿತ್ರಿಸಿದ್ದಾರೆ. ಯಕ್ಷಗಾನ, ಕಳರಿ ಮತ್ತು ಮಣಿಪುರಿ ಕಲೆಯ ಕೆಲವು ಪಟ್ಟುಗಳನ್ನು ನಾಟಕದಲ್ಲಿ ಅಳವಡಿಸಲಾಗಿದೆ.

ಇದೊಂದು ಸಂಗೀತ ಪ್ರಧಾನ ನಾಟಕ. ವೈಚಾರಿಕನು-ಭಾವಕನೊಳಗೆ, ಭಾವಕನು-ವೈಚಾರಿಕನೊಳಗೆ ಕುಳಿತು ತಳಮಳಿಸುತ್ತಿರುವ ಭಾರತದ ಹಳೆಯ ಕಥೆಯೊಂದು ಕೇವಲ ಆಳದ ಪ್ರೀತಿಗಾಗಿ ಇಲ್ಲಿ ನಾಟಕವಾಗಿದೆ.

ಬೆಳಕು : ರಾಜು ಮಣಿಪಾಲ

ಪ್ರಸಾಧನ : ಪ್ರಶಾಂತ ಉದ್ಯಾವರ,
ಭವನ ನಿರ್ವಹಣೆ : ನಾಗರಾಜ್ ಧಾರೇಶ್ವರ, ಪ್ರಭು ಗುರಪ್ಪನವರ

ಪಾತ್ರಧಾರಿಗಳು: ದೇವಿಪ್ರಸಾದ್ ಎರತೋಡಿ, ಸಿದ್ದು ಕೊಂಡೋಜಿ,
ಅಮೀರ ಪಠಾಣ, ಸಿದ್ದಪ್ಪ ರೊಟ್ಟಿ, ಹರೀಶ್ ಗುರಪ್ಪನವರ , ಸಣ್ಣಪ್ಪ ಗೊರವರ , ಜಗದೀಶ ಕಟ್ಟಿಮನಿ, ಪ್ರಜ್ವಲ್ ಹೊಂಬಳ, ರಂಜಿತ ಜಾಧವ, ಅನೀಶ ಉಡುಪಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+