ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ

|
Google Oneindia Kannada News

ಬೆಂಗಳೂರು, ಜೂನ್ 21 : ಕ್ವಾರಂಟೈನ್ ಕೇಂದ್ರದಲ್ಲಿ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಹೆಚ್‌. ಎಸ್. ಆರ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಇಬ್ಬರು ಮಹಿಳೆಯರಿಗೆ ಆರೋಪಿ ಕಿರುಕುಳ ನೀಡಿದ್ದು ಹೆಚ್‌. ಎಸ್. ಆರ್. ಲೇಔಟ್ ಪೊಲೀಸರಿಗೆ ದೂರು ನೀಡಲಾಗಿತ್ತು. ಶನಿವಾರ 32 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.

 ಡ್ರಾಪ್ ಕೊಡೊ ನೆಪದಲ್ಲಿ ಲೈಂಗಿಕ ಕಿರುಕುಳ: ಹಿಗ್ಗಾಮುಗ್ಗಾ ಥಳಿತ ಡ್ರಾಪ್ ಕೊಡೊ ನೆಪದಲ್ಲಿ ಲೈಂಗಿಕ ಕಿರುಕುಳ: ಹಿಗ್ಗಾಮುಗ್ಗಾ ಥಳಿತ

ಆರೋಪಿಯ ಮಾದರಿಯನ್ನು ಕೋವಿಡ್ - 19 ಪರೀಕ್ಷೆಗಾಗಿ ಕಳಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ಪೊಲೀಸ್ ಠಾಣೆಯ ಕೊಠಡಿಯೊಂದರಲ್ಲಿ ಆರೋಪಿಯನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ.

ಲೈಂಗಿಕ ಕ್ರಿಯೆ ಮತ್ತು ಲಾಕ್‌ಡೌನ್: ಪ್ರಸಿದ್ದ ಕಾಂಡೋಮ್ ಕಂಪೆನಿ ಹೇಳಿದ್ದೇನು?ಲೈಂಗಿಕ ಕ್ರಿಯೆ ಮತ್ತು ಲಾಕ್‌ಡೌನ್: ಪ್ರಸಿದ್ದ ಕಾಂಡೋಮ್ ಕಂಪೆನಿ ಹೇಳಿದ್ದೇನು?

Two Women Assault In Quarantine Facility Man Arrested

ಮುಂಬೈನಿಂದ ಮಂಗಳವಾರ ಬೆಂಗಳೂರು ನಗರಕ್ಕೆ ಬಂದಿದ್ದ ಆರೋಪಿಯನ್ನು ಹೆಚ್. ಎಸ್. ಆರ್. ಲೇಔಟ್‌ನಲ್ಲಿರುವ ಹಾಸ್ಟೆಲ್‌ವೊಂದರಲ್ಲಿ ಕ್ವಾರಂಟೈನ್‌ಗೆ ಹಾಕಲಾಗಿತ್ತು. ಸುಬ್ರಮಣ್ಯ ನಗರದ ನಿವಾಸಿಯಾದ ಆರೋಪಿ ಮಾರ್ಚ್‌ನಲ್ಲಿ ಮುಂಬೈಗೆ ಹೋಗಿದ್ದ.

ಕೊರೊನಾ ಸೋಂಕಿತನ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ!ಕೊರೊನಾ ಸೋಂಕಿತನ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ!

ಕಂಪನಿಯೊಂದರಲ್ಲಿ ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಆರೋಪಿ ಶೌಚಾಲಯದ ಬಳಿಕ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ. ಮತ್ತೊಬ್ಬ ಮಹಿಳೆ ಇರುವ ರೂಂಗೆ ನುಗ್ಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದ ಎಂಬುದು ಆರೋಪ.

ಮುಂಬೈನಿಂದ ವಾಪಸ್ ಆಗಿದ್ದ ನಾಲ್ವರು ಮಹಿಳೆಯರು ಇದೇ ಹಾಸ್ಟೆಲ್‌ನಲ್ಲಿ 7 ದಿನದ ಕ್ವಾರಂಟೈನ್‌ನಲ್ಲಿದ್ದರು. ಮಂಗಳವಾರ ಈ ಕೇಂದ್ರಕ್ಕೆ ಆಗಮಿಸಿದ್ದ ಆರೋಪಿ ಶುಕ್ರವಾರ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ.

ಇಬ್ಬರು ಮಹಿಳೆಯರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಐಸೋಲೇಷನ್‌ನಲ್ಲಿ ಇಡಲಾಗಿದೆ. ಆರೋಪಿಯ ಕೋವಿಡ್ - 19 ಪರೀಕ್ಷೆ ವರದಿ ಇನ್ನೂ ಬಂದಿಲ್ಲ.

English summary
HSR Layout police arrested a 32-year-old man who returns to Bengaluru on June 16 for allegedly sexually assaulting two women at a COVID-19 institutional quarantine facility in HSR Layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X