ಎಟಿಎಂ ದರೋಡೆ:ಮಿಜೋರಾಂ ಮೂಲದ ಇಬ್ಬರ ಬಂಧನ
ಬೆಂಗಳೂರು, ಜೂ.24: ಮೂರು ತಿಂಗಳ ಹಿಂದೆ ಎ.ಟಿ.ಎಂ. ದರೋಡೆಗೆ ಯತ್ನಿಸಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಪರಾರಿಯಾದ ಆರೋಪಿಗಳನ್ನು ಬಾಣಸವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಿಜೋರಾಂ ರಾಜ್ಯದ ಐಜೋಲ್ ನಿವಾಸಿಗಳಾಗಿರುವ ತಾಂಗಿಯಾ ಸೂಮ್(20), ಹಾವ್ ಸುಂಗ್ ಟಾಂಗ್(19) ಬಂಧಿತರು. ಆರೋಪಿಗಳು ಮೆಜೆಸ್ಟಿಕ್‌ನ ಕೇರ್ ಆಫ್ ಚಿಕನ್ ಕಾಂಟಿ ಹೋಟೆಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು.
ಏನಿದು ಪ್ರಕರಣ? ಬಂಧಿತ ಆರೋಪಿಗಳು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸ್ವಾಮಿಪಾಳ್ಯದ ಕಾರ್ಪೋರೇಷನ್ ಬ್ಯಾಂಕ್‌ನ ಎಟಿಎಂ ಸೆಂಟರ್‌ಗೆ ಮಾರ್ಚ್ 18ರ ರಾತ್ರಿ ನುಗ್ಗಿ ದರೋಡೆಗೆ ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮುರುಗನ್ ರವರ ಎಡಗೈ ಹಾಗೂ ಎಡಕುತ್ತಿಗೆಯ ಬಳಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.[ಬಿಲ್ಡರ್ ಅಪಹರಿಸಿ ಹಣಗಳಿಸುವ ಸಂಚು ವಿಫಲ]

ಸಿಸಿ ಕ್ಯಾಮೆರಾದಲ್ಲಿ ಬಂಧಿತರ ಚಹರೆ ಸೆರೆಯಾಗಿದ್ದರಿಂದ ಇವರ ಪತ್ತೆಗೆ ಒಂದು ತಂಡವನ್ನು ರಚಿಸಿತ್ತು. ಈ ತಂಡ ನಗರದ ವಿವಿಧ ಹೊಟೇಲ್, ಮಸಾಜ್ ಪಾರ್ಲರ್‌ಗಳಿಗೆ ಭೇಟಿ ನೀಡಿ ಪತ್ತೆ ಕಾರ್ಯ ನಡೆಸಿ ಇದೀಗ ಪ್ರಕರಣವನ್ನು ಭೇದಿಸಿದೆ.
ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಹರ್ಷ, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕೆ.ಆರ್.ಪುರಂ ಉಪ ವಿಭಾಗದ ಎ.ಸಿ.ಪಿ ಹೆಚ್.ಸಿದ್ದಪ್ಪ, ಬಾಣಸವಾಡಿ ಪೊಲೀಸ್ ಠಾಣೆಯ ಪಿ.ಐ ಬಿ.ಎಸ್. ಮೋಹನ್ ಕುಮಾರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಮಿರ್ಜಾ ಅಲಿ ರಜಾ, ಜಿ.ಗುರುಲಿಂಗಪ್ಪ, ಸಂತೋಷಕುಮಾರ್, ಬಸವಲಿಂಗಪ್ಪ ಹಾಗೂ ಸಿಬ್ಬಂದಿಗಳಾದ ಗೋವಿಂದರಾಜು, ಶ್ರೀನಿವಾಸ್, ಚೆಲುವರಾಜು, ವಿಜಯ್ ಕುಮಾರ್ ಸೈಯದ್ ಮೊಹಿನುಲ್ಲಾ ಬಾಲಾಜಿ, ಶಿವಕುಮಾರ್, ಜೈ ಕಿರಣ್, ಹರೀಶ್ ಕುಮಾರ್ ಮತ್ತು ಮೊಹಮ್ಮದ್ ಅಜ್‍ಮತ್-ಉಲ್ಲಾ ರವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.












Click it and Unblock the Notifications