ನೆಲಮಂಗಲದ ಗ್ರಾಮದಲ್ಲಿ ಎರಡು ಮನೆ ದೋಚಿದ ಕಳ್ಳರು.
ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿರುವ ಕಳ್ಳತನ; ಒಂದೇ ಗ್ರಾಮದ ಎರಡು ಮನೆಗಳಿಗೆ ಕನ್ನ ಹಾಕಿದ ದರೋಡೆಕೋರರು.
ಬೆಂಗಳೂರು, ಏಪ್ರಿಲ್ 15: ಬೀಗ ಹಾಕಿದ ಮನೆಯ ಮುಂಬಾಗಿಲು ಮುರಿದ ಕಳ್ಳರು ನಗದು, ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶ್ರೀಗಿರಿ ಪುರ ಗ್ರಾಮದಲ್ಲಿ ನಡೆದಿದೆ.
ಸರಸ್ವತಮ್ಮ ಎಂಬುವವರ ಮನೆಯಲ್ಲಿ ಕಳ್ಳರು ಈ ಕೈಚಳಕ ತೋರಿದ್ದು, ಒಟ್ಟು ಮೂರು ಲಕ್ಷ ನಗದು, ಚಿನ್ನ ,ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.

ಮನೆಯಲ್ಲಿ ಮದುವೆ ಇರುವ ಕಾರಣ ಮದುವೆಗೆಂದು ಹಣ ತಂದಿಡಲಾಗಿತ್ತು. ಮದುವೆ ಕಾರ್ಡ್ ಹಂಚಲು ಸರಸ್ವತಮ್ಮ ಹೊರಗೆ ಹೋಗಿದ್ದರು. ಈ ಸಂದರ್ಭದವನ್ನು ಉಪಯೋಗಿಸಿಕೊಂಡಿರುವ ಕಳ್ಳರು ಕಳ್ಳತನ ಮಾಡಿದ್ದಾರೆ.
ಇದೇ ಗ್ರಾಮದ ಮುರಳಿ ಎನ್ನುವವರ ಮನೆಯಲ್ಲಿಯೂ ಕಳ್ಳತನವಾಗಿದ್ದು, ಅಲ್ಲಿ 20 ಸಾವಿರ ನಗದು, ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕುದುರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.












Click it and Unblock the Notifications