ಭಾನುವಾರ : ಪಂಪ-ಕುಮಾರವ್ಯಾಸರ ದೃಷ್ಟಿಯಲ್ಲಿ ಕರ್ಣ
ಬೆಂಗಳೂರು, ಜುಲೈ 08 : ರಾಜಾಜಿನಗರದ ಬಾಲಮೋಹನ್ ವಿದ್ಯಾಮಂದಿರದ ಸಭಾಂಗಣದಲ್ಲಿ ನಾಡಿನ ಹಿರಿಯ ಪತ್ರಕರ್ತರೂ, ಪ್ರಸಿದ್ಧ ಗಮಕಿಗಳೂ ಆದ ಡಾ|| ಎಂ.ಎ. ಜಯರಾಮ ರಾವ್ ಅವರು ಬರೆದು ಪ್ರಕಟಿಸಿದ "ಪಂಪ-ಕುಮಾರವ್ಯಾಸರ ದೃಷ್ಟಿಯಲ್ಲಿ - ಕರ್ಣ" ಎಂಬ ಗ್ರಂಥ ಜುಲೈ 9ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿದೆ.
ಆಚಾರ್ಯ ಪಾಠಶಾಲೆಯ ನಿವೃತ್ತ ಕನ್ನಡ ಪ್ರಾಚಾರ್ಯ ಡಾ|| ಕೆ.ಎಸ್. ಮಧುಸೂದನ್ ಅವರು ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ಶಿಕ್ಷಣ ತಜ್ಞ ಡಾ|| ಗುರುರಾಜ ಕರಜಗಿ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಜ್ಞಾನದೀಪಿಕ ಶೈಕ್ಷಣಿಕ ದತ್ತಿಯ ಮ್ಯಾನೇಜಿಂಗ್ ಟ್ರಸ್ಟಿ ಎನ್. ಸತ್ಯಪ್ರಕಾಶ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಮುನ್ನೋಟ : ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?
ಡಾ. ಡಿ. ಎನ್. ಶಂಕರ ಬಟ್ಟರು ಬರೆದಿರುವ ಹೊಸ ಹೊತ್ತಗೆ "ಕನ್ನಡಕ್ಕೆ ಮಹಾಪ್ರಾಣ ಯಾಕೆ ಬೇಡ?" ಬಸವನಗುಡಿಯ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಜುಲೈ 9ರಂದು 11.30ಕ್ಕೆ ಬಿಡುಗಡೆಯಾಗಲಿದೆ. ಯುವ ಬರಹಗಾರರಾದ ಸಂದೀಪ್ ಕಂಬಿ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.
ಯಾವ ನುಡಿಯ ಮೂಲದಿಂದ ಬಂದ ಪದಗಳೇ ಆದರೂ ಕನ್ನಡಿಗರು ಹೇಗೆ ಉಲಿಯುತ್ತೇವೋ ಹಾಗೆಯೇ ಬರೆಯಲು ತೊಡಗಿದರೆ ಕನ್ನಡ ಲಿಪಿಯಲ್ಲಿ ಮಹಾಪ್ರಾಣಗಳ ಬಳಕೆ ನಮಗೆ ಬೇಕಾಗುವುದಿಲ್ಲ ಎಂಬುದನ್ನು ಈ ಕಿರು ಹೊತ್ತಗೆಯಲ್ಲಿ ತೋರಿಸಿಕೊಡಲಾಗಿದೆ. ಕನ್ನಡದ ಲಿಪಿಯಲ್ಲಿ ಈ ಬದಲಾವಣೆ ತರಬಹುದಾದ ಒಳಿತುಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ದಿನಾಂಕ: 9 - ಜುಲೈ - 2017
ಹೊತ್ತು: ಬೆಳಗ್ಗೆ, 11:30
ಜಾಗ: ಮುನ್ನೋಟ ಹೊತ್ತಗೆ ಮಳಿಗೆ, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಬಸವನಗುಡಿ, ಬೆಂಗಳೂರು.











Click it and Unblock the Notifications