ಕ್ರಿಕೆಟ್ ಹವಾ: ಭಾರತ-ಪಾಕಿಸ್ತಾನ ಟ್ವೀಟ್ ವಾರ್ 'ಗರಂ'

ಬೆಂಗಳೂರು, ಮಾ.2: ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶದಲ್ಲಿ ಕದನ ಆರಂಭವಾಗುವುದಕ್ಕೆ ಮುಂಚಿತವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳ ಆರ್ಭಟ ಶುರುವಾಗಿದೆ. ಏಷ್ಯಾಕಪ್ 2014ರ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದು, ಉಭಯ ದೇಶಗಳ ಕ್ರಿಕೆಟ್ ಪ್ರೇಮಿಗಳು ಟ್ವಿಟ್ಟರ್ ನಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ, ಶುಭ ಹಾರೈಕೆ, ಸಲಹೆ, ಸೂಚನೆ, ಟೀಕೆ ಟಿಪ್ಪಣಿ ನೀಡುವ ಮೂಲಕ 'ಗರಂ ಹವಾ' ಮೂಡಿಸಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಈಗಾಗಲೇ ಫೈನಲ್ ಹಾದಿ ಸುಗುಮಗೊಳಿಸಿಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಕ್ಕೂ ಮಹತ್ವದ್ದಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಅತಿಥೇಯ ಬಾಂಗ್ಲಾದೇಶವನ್ನು ಬಗ್ಗುಬಡಿದು ಅಚ್ಚರಿಯ ಜಯ ಸಾಧಿಸಿ ದಾಖಲೆ ಬರೆದಿದೆ. ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆಲ್ಲಬೇಕಾದರೆ ಬ್ಯಾಟಿಂಗ್ ಜತೆಗೆ ಬೌಲಿಂಗ್, ಫೀಲ್ಡಿಂಗ್ ಸುಧಾರಣೆ ಅಗತ್ಯವಾಗಿದೆ. ಸಾರ್ವಜನಿಕ ಜಾಲ ತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ನೀಡಿರುವ ಸಲಹೆಗಳು, ರವಿಶಾಸ್ತ್ರಿ ಇಲ್ಲದ ಕಾಮೆಂಟರಿ ಸಪ್ಪೆ ಎನ್ನುವ ಕಾಮೆಂಟ್ ಗಳು, ಬಾಂಗ್ಲಾದೇಶಿಗಳ ಪಾಕಿಸ್ತಾನಿ ಧ್ವಜ ಕಂಡು ಕೆಂಡಕಾರುವ ಭಾರತದ ಕ್ರಿಕೆಟ್ ಪ್ರೇಮಿಗಳು, ಕೊಹ್ಲಿಗೆ ಶುಭ ಹಾರೈಕೆ ಮುಂತಾದ ಟ್ವೀಟ್ ಗಳು ನಿಮ್ಮ ಮುಂದಿದೆ ಓದಿ ಆನಂದಿಸಿ.. ಕ್ಷಣ ಕ್ಷಣದ ಸ್ಕೋರ್ ನೋಡಲು ತಪ್ಪದೇ ಈ ಲಿಂಕ್ ಕ್ಲಿಕ್ ಮಾಡಿ

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್

ಟೀಂ ಇಂಡಿಯಾದಲ್ಲಿ ಬದಲಾವಣೆ: ಸ್ಟುವರ್ಟ್ ಬಿನ್ನಿ ಬದಲಿಗೆ ಅಮಿತ್ ಮಿಶ್ರಾ

ಟ್ವಿಟ್ಟರ್ ನಲ್ಲಿ ಕ್ಷಣ ಕ್ಷಣದ ಮಾಹಿತಿ

ಟ್ವಿಟ್ಟರ್ ನಲ್ಲಿ ಕ್ಷಣ ಕ್ಷಣದ ಮಾಹಿತಿ ಹಾಗೂ ಮನರಂಜನೆ ಸಿಗುತ್ತಿದೆ.

ಇವತ್ತು ಟಿವಿ ಕದಿಯಲು ಸಾಧ್ಯವೇ ಇಲ್ಲ

ಇವತ್ತು ಟಿವಿ ಶೋ ರೂಮ್ ನಿಂದ ಕದಿಯಲು ಸಾಧ್ಯವೇ ಇಲ್ಲ. ನೂರಾರು ಜನರು ಟಿವಿ ಮುಂದೆ ನಿಂತಿರುತ್ತಾರೆ

ನಾಯಕನಾಗಿ ಕೊಹ್ಲಿಗೆ ಚಿನ್ನದಂಥ ಅವಕಾಶ

ಬ್ಯಾಟ್ಸ್ ಮನ್ ಆಗಿ ಮಿಂಚುತ್ತಿರುವ ಕೊಹ್ಲಿಗೆ ನಾಯಕನಾಗಿ ಮಿಂಚಲು ಇದು ಚಿನ್ನದಂಥ ಅವಕಾಶ

ಸಚಿನ್ ನೂರನೇ ಶತಕ ಸಿಡಿಸಿದ್ದ ಆ ಕ್ಷಣ

ಕಳೆದ ಏಷ್ಯಾಕಪ್ ನಲ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ ಸಚಿನ್ ವೃತ್ತಿ ಬದುಕಿನ ನೂರನೇ ಶತಕ ಸಂಭ್ರಮ ಕಂಡಿದ್ದು, ಪಾಕಿಸ್ತಾನ ವಿರುದ್ಧ ಆಡಿದ್ದು ಮರೆಯಲು ಸಾಧ್ಯವೇ?

ಟ್ವಿಟ್ಟರ್ ನಲ್ಲಿ ಭಾರತ- ಪಾಕಿಸ್ತಾನ ಕದನ

ಟ್ವಿಟ್ಟರ್ ನಲ್ಲಿ ಭಾರತ- ಪಾಕಿಸ್ತಾನ ಕದನ ಬೆಳಗ್ಗಿನಿಂದಲೇ ಟ್ರೆಂಡಿಂಗ್ ನಲ್ಲಿದ್ದು, ರವಿಶಾಸ್ತ್ರಿ ಇಲ್ಲದ ಏಷ್ಯಾಕಪ್ ಕಾಮೆಂಟರಿ ಸಪ್ಪೆ ಎಂದಿದ್ದಾರೆ.

ಮೊದಲು ಫೀಲ್ಡಿಂಗ್ ಆಯ್ಕೆ ಸಮರ್ಥನೀಯ

ಪಾಕಿಸ್ತಾನದ ಮೊದಲು ಫೀಲ್ಡಿಂಗ್ ಆಯ್ಕೆ ಸಮರ್ಥನೀಯ

ನ್ಯೂಟನ್ ಲಾ ಬದಲಾಯಿಸಿದ ರೋಹಿತ್

ನ್ಯೂಟನ್ ಮೂರನೇ ನಿಯಮ ಬದಲಾಯಿಸಿದ ರೋಹಿತ್- ಕೊಹ್ಲಿ ಬ್ಯಾಟಿಂಗ್

ಅಫ್ರಿದಿ ವಯಸ್ಸಿನ ಗುಟ್ಟೇನು? ಟ್ವೀಟ್ ಪ್ರಶ್ನೆ

ನಿನ್ನೆಯಿನ್ನೂ ಹುಟ್ಟುಹಬ್ಬ ಆಚರಿಸಿಕೊಂಡ ಅಫ್ರಿದಿ ವಯಸ್ಸಿನ ಗುಟ್ಟೇನು? ಟ್ವೀಟ್ಟರ್ ನಲ್ಲಿ ಪ್ರಶ್ನೆ

ಟ್ವಿಟ್ಟರ್ ನಲ್ಲಿ ಸರ್ ಜಡೇಜ್ ಜೋಕು

ಟ್ವಿಟ್ಟರ್ ನಲ್ಲಿ ಸರ್ ಜಡೇಜ್ ಜೋಕುಗಳು ಹರಿದಾಡಲು ಶುರುವಾಗಿದೆ.

ಭಾರತ-ಪಾಕಿಸ್ತಾನ ಪಂದ್ಯ ರಿಲ್ಯಾಕ್ಸಿಂಗ್

ಭಾರತ-ಪಾಕಿಸ್ತಾನ ಪಂದ್ಯ ರಿಲ್ಯಾಕ್ಸ್ ಮಾಡುತ್ತದೆ. ಮತ್ತೆ ಮತ್ತೆ ಟೂರ್ನಿ ಆಯೋಜನೆಗೊಳ್ಳಬೇಕು: ರಾಜದೀಪ್ ಸರ್ದೇಸಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+