Breaking news; ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ

ಬೆೆಂಗಳೂರು, ಮೇ 5 : ಬಿಬಿಎಂಪಿಯ ಮುಖ್ಯ ಆಯುಕ್ತ ಗೌರವ್ ಗುಪ್ತರನ್ನು ವರ್ಗಾವಣೆ ಮಾಡಲಾಗಿದೆ. ನೂತನ ಮುಖ್ಯ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ನೇಮಿಸಿ ಸರ್ಕಾರ ಆದೇಶಿಸಿದೆ.

ತುಷಾರ್ ಗಿರಿನಾಥ್ ಕಂದಾಯ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಬಿಬಿಎಂಪಿ ವಿಚಾರದಲ್ಲಿ ಹಲವು ಆರೋಪಗಳು ಕೇಳಿಬಂದಿತ್ತು. ಸರ್ಕಾರ ಕ್ಲೀನ್ ಇಮೇಜ್ ಅನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಗುರುವಾರ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಸದ್ಯ ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತರನ್ನು ಮೂಲ ಸೌಕರ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ತುಷಾರ್ ಗಿರಿನಾಥ್ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Tushar Girinath appointed as new commissioner of BBMP

ವರ್ಗಾವಣೆ ಏಕೆ?; ಬಿಬಿಎಂಪಿಯ ಕರ್ಮಕಾಂಡಗಳು ಎಲ್ಲಾ ಅಧಿಕಾರಿಗಳ ಆಡಳಿತದಲ್ಲೂ ಇವೆ. ಆದರೆೆ ಇತ್ತೀಚೆಗೆ ಕಂಟ್ರಾಕ್ಟರ್ ಸಂಘದವರು ಬಿಬಿಎಂಪಿಯ ಮೇಲೆ ಆರೋಪಗಳನ್ನು ಮಾಡಿದ್ದರು. 40% ಕಮೀಷನ್ ವಿಚಾರವು ಜೋರಾದ ಚರ್ಚೆಯನ್ನು ಹುಟ್ಟುಹಾಕಿತ್ತು. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಹೋಗಿದ್ದ ನಿಯೋಗವೊಂದು ಸಿಎಂ ಬಳಿ ಆರೋಪವನ್ನು ಮಾಡಿದ್ದರು. ಕಮೀಷನ್ ವಿಚಾರವೂ ಸರ್ಕಾರಕ್ಕೆ ಭ್ರಷ್ಟ ಸರ್ಕಾರದ ಪಟ್ಟವನ್ನು ಕಟ್ಟುತ್ತಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರನ್ನು ವರ್ಗಾವಣೆಯನ್ನು ಮಾಡಿದೆ. ಆದರೆ ಸರ್ಕಾರ ಮಾತ್ರ ಇದೊಂದು ಸಹಜ ವರ್ಗಾವಣೆ ಪ್ರಕ್ರಿಯೆ ಎಂದಿದೆ.

ಬಿಬಿಎಂಪಿಯ ಮುಖ್ಯ ಆಯುಕ್ತರಾಗಿದ್ದ ಗೌರವ್ ಗುಪ್ತಾರವರು ರಾತ್ರೋರಾತ್ರಿ ಬಜೆಟ್ ಅನ್ನು ಮಂಡನೆ ಮಾಡಿದ್ದರು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬೆಂಗಳೂರು ಮೂಲದ ಬಿಜೆಪಿ ಸಚಿವರು ಮತ್ತು ಶಾಸಕರನ್ನು ಕೆರಳುವಂತೆ ಮಾಡಿತ್ತು. ಈ ಕಾರಣದ ಜೊತೆಗೆ ಬೆಂಗಳೂರಿನಲ್ಲಿ ಹೆಚ್ಚಾಗಿರುವ ರಸ್ತೆಗುಂಡಿ ಸಮಸ್ಯೆ, ಮಳೆ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುತ್ತಿಲ್ಲ ಎಂಬ ಕಾರಣಕ್ಕೆ ಗೌರವ್ ಗುಪ್ತಾರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ.

Tushar Girinath appointed as new commissioner of BBMP

ಚುನಾವಣಾ ವರ್ಷದಲ್ಲಿ ಬಿಬಿಎಂಪಿಗೆ ಹೊಸ ಆಯುಕ್ತರು; ಕರ್ನಾಟಕ ಈಗಾಗಲೇ ಚುನಾವಣೆ ಕಡೆಗೆ ದೃಷ್ಟಿಯನ್ನು ನೆಟ್ಟಿದೆ. ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ತಯಾರಿಯನ್ನು ನಡೆಸುತ್ತಿದೆ. ಬೆಂಗಳೂರು ರಾಜಕೀಯ ಪಕ್ಷಗಳಿಗೆ ಅತ್ಯಂತ ಪ್ರಮುಖವಾದದ್ದು. 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬಿಬಿಎಂಪಿಯ ಆಡಳಿತ ಮತ್ತು ಕಾರ್ಯವೈಕರಿ ಮೇಲೆ ಪಕ್ಷದ ಇಮೇಜ್ ಹೆಚ್ಚಾಗಲಿದೆ. ಇದರ ಜೊತೆಗೆ ಬಿಬಿಎಂಪಿಯ ಚುನಾವಣೆ ಸಹ ಬಾಕಿಯಿದೆ. ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರಿಲ್ಲದಾಗಿದೆ. ಈ ವರ್ಷಾಂತ್ಯದೊಳಗೆ ಬಿಬಿಎಂಪಿಯ ಚುನಾವಣೆಯು ನಡೆಯುವ ಸಾಧ್ಯತೆಗಳಿದ್ದು ಚುನಾವಣಾ ವರ್ಷದಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕವಾಗಿದ್ದಾರೆ.

ತುಷಾರ್ ಗಿರಿನಾಥ್ ಸಾಕಷ್ಟು ಹೆಸರು ಮಾಡಿದ್ದು ಜಲಮಂಡಳಿ ಎಂಡಿಯಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಸದ್ಯ ತುಷಾರ್ ಗಿರಿನಾಥ್ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್‌ಗೂ ಆತ್ಮೀಯರಾಗಿರುವ ತುಷಾರ್ ಗಿರಿನಾಥ್‌ಗೆ ಬಿಬಿಎಂಪಿಯ ಮುಖ್ಯ ಆಯುಕ್ತರಾಗುವ ಭಾಗ್ಯ ಒಲಿದು ಬಂದಿದೆ.

ಸಾಲು ಸಾಲು ಸವಾಲು; ಬಿಬಿಂಎಪಿಯ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣವನ್ನು ಹಾಕಬೇಕಾಗಿದೆ. ಬೆಂಗಳೂರಿನಲ್ಲಿ ಮಳೆಯ ಆರ್ಭಟ ಪ್ರಾರಂಭವಾಗಿತ್ತು ಮಳೆ ನೀರಿ ಸಮಸ್ಯೆಗಳು ಎದುರಾಗುತ್ತಿವೆ. ರಸ್ತೆಗಳು ಮತ್ತಷ್ಟು ಗುಂಡಿ ಬೀಳುವ ಸಾಧ್ಯತೆಗಳಿದ್ದು ಗುಂಡಿ ಮುಚ್ಚುವ ಕೆಲಸವ್ನು ಮಾಡಬೇಕಿದೆ.ಇದಷ್ಟೇ ಅಲ್ಲದೇ ಬೆಂಗಳೂರಿನ ನಿವಾಸಿಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವ ಜವಾಬ್ದಾರಿಯು ತುಷಾರ್ ಗರಿನಾಥ್ ಮುಂದಿದೆ.

Recommended Video

      Umran Malikಗೆ ಗೆದ್ದರೂ ಸೋತರೂ ಒಂದು ಲಕ್ಷ ಫಿಕ್ಸ್ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+