ಬೆಂಗಳೂರಿನ ಅಪರೂಪದ ಮರಗಳನ್ನು ಉಳಿಸಲು ರಾಹುಲ್ ಗೆ ಪತ್ರ
ಬೆಂಗಳೂರು, ಫೆಬ್ರವರಿ 20: ಕರ್ನಾಟಕ ಸರಕಾರ ಮರಗಳ ಬುಡಕ್ಕೆ ಕೊಡಲಿಯೇಟು ಇಡಲು ಸಜ್ಜಾಗಿದೆ. 1976ರ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು 50 ಮರಗಳನ್ನು ಈ ಆಕ್ಟ್ ನಿಂದ ಹೊರಗಿಡಲು ಮುಂದಾಗಿದೆ. ಈ ಮಸೂದೆ ಅಂಗೀಕಾರ ಪಡೆದುಕೊಂಡಲ್ಲಿ ಈ 50 ಮರಗಳನ್ನು ಕಡಿಯಲು ಸಾರ್ವಜನಿಕರ ಹಾಗೂ ಇಲಾಖೆಗಳ ಅನುಮತಿ ಬೇಕಾಗಿಲ್ಲ.
ಬೆಂಗಳೂರು ಎಂದಾಗ ಮೊದಲಿಗೆ ನೆನಪಿಗೆ ಬರುವುದು ಮರಗಳು; ಮತ್ತು ಉದ್ಯಾನ ನಗರಿ ಎಂಬ ಹೆಸರು. ಒಂದೊಮ್ಮೆ ಈ ಕಾನೂನು ಜಾರಿಗೆ ಬಂದಿದ್ದೇ ಆದಲ್ಲಿ, ಉದ್ಯಾನ ನಗರಿ ಪಟ್ಟವನ್ನು ತಂದುಕೊಟ್ಟ ಮರಗಳನ್ನು, ಬೆಂಗಳೂರಿನ ನೈಸರ್ಗಿಕ ಸೌಂದರ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ.
ಮಸೂದೆ ವಿರೋಧಿಸುವುದು ಯಾಕೆ ಮುಖ್ಯ?
ಈಗಾಗಲೇ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ- 1976ತಿದ್ದುಪಡಿ ಮಸೂದೆಯನ್ನು ಫೆಬ್ರವರಿ 16 ರಂದು ಮಂಡಿಸಲಾಗಿದೆ. ಇದರಲ್ಲಿ ಗುಲ್ ಮೊಹರ್, ಇಂಡಿಯನ್ ಕೋರಲ್, ರೈನ್ ಟ್ರೀ ಮತ್ತು ಸೋಪ್ನಟ್ ನಂಥ 50 ಜಾತಿಯ ಮರಗಳನ್ನು ಕಡಿಯಲು ಯಾರದೇ ಅನುಮತಿ ಬೇಡ ಎಂದು ಹೇಳಲಾಗಿದೆ.

ವಿಶೇಷ ಎಂದರೆ ಇದೇ ರೀತಿಯ ಮರಗಳು ನಮ್ಮ ಬೆಂಗಳೂರಿನ ರಸ್ತೆಗಳ ಬದಿಯಲ್ಲಿ ಹೆಚ್ಚಾಗಿವೆ. ಒಂದೊಮ್ಮೆ ಕಾನೂನು ಜಾರಿಗೆ ಬಂದರೆ ರಸ್ತೆಯ ಅಂಚಿನಲ್ಲಿರುವ ಮರಗಳೆಲ್ಲಾ ಧರೆಗುರುಳಲಿವೆ.
ಇದೀಗ ಈ ತಿದ್ದುಪಡಿ ಮಸೂದೆಯ ವಿರುದ್ಧ ಝಾತ್ಕಾ ಡಾಟ್ ಆರ್ಗ್ (Jhatkaa.org) ಹೋರಾಟ ಆರಂಭಿಸಿದೆ. ಈ ಗಂಡಾಂತರಕಾರಿ ಮಸೂದೆಯನ್ನುಹಿಂತೆಗೆದುಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ಈಗಾಗಲೇ ಸರಕಾರದ ನಿರ್ಧಾರಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಮಾಜಿ ನ್ಯಾಯಮೂರ್ತಿಗಳಾದ ಎಂ.ಎಫ್ ಸಾಲ್ದಾನಾ ಕೂಡ ಮಸೂದೆ ವಿರುದ್ಧ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಈ ಬಗ್ಗೆ ಟ್ಟಿಟ್ಟರ್ ಮೂಲಕ ([email protected]) ಮನವಿ ಸಲ್ಲಿಸಲು ವೃಕ್ಷ ಪ್ರೇಮಿಗಳು ನಿರ್ಧರಿಸಿದ್ದು ನಾವೆಲ್ಲರೂ ಧ್ವನಿಗೂಡಿಸಿದಾಗ ಮಾತ್ರ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ.












Click it and Unblock the Notifications