Bengaluru-Mysuru Expressway: ಬೇಕಾಬಿಟ್ಟಿ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ವಾಹನ ಸವಾರರ ಜೀವಕ್ಕೆ ಆಪತ್ತು!
ಹಲವು ನೆಟ್ಟಿಗರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು, ಮಾರ್ಚ್ 13: ಭಾನುವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಧಾಟಿಸಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ನಿಯಮಗಳಿಗೆ ಯಾರು ಕೇರ್ ಮಾಡುತ್ತಿಲ್ಲ. ಬೇಕಾಬಿಟ್ಟಿ ವಾಹನಗಳನ್ನು ರಿವರ್ಸ್ ತೆಗೆದುಕೊಳ್ಳುವ ಮೂಲಕ ಮತ್ತ ಜೊತೆಗೆ ಇತರ ವಾಹನ ಸವಾರರ ಜೀವದ ಜೊತೆ ಆಟವಾಡುತ್ತಿರುವ ಘಟನೆಗಳು ವರದಿಯಾಗಿದೆ.
Don’t know what to say 🥲🥲#Bengaluru_Mysuru_Expressway ##hum_nehi_sudhrenge #RoadSafety pic.twitter.com/W0gTOGIQVL
— droneman (@yt_droneman) March 13, 2023
ಉದ್ಘಾಟನೆಯ ನಂತರದ ಮೊದಲ ದಿನವೇ ಹೊಸದಾಗಿ ನಿರ್ಮಿಸಲಾಗಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಿದೆ. ಸಾಂಆಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕೆಲವು ವಿಡಿಯೋಗಳಲ್ಲಿ, ಮುಂದೆ ಹೋಗಬೇಕಾದ ವಾಹನಗಳು ರಸ್ತೆಯ ಮಧ್ಯದಿಂದ ರಿವರ್ಸ್ ತೆಗೆದುಕೊಳ್ಳುವುದು ಕಾಣಿಸುತ್ತಿದೆ. ವಾಹನಗಳು ಹೆಚ್ಚಿನ ವೇಗದಲ್ಲಿ ಓಡಾಡುವ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಇಂತಹ ಘಟನೆಗಳು ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸಿದೆ.

ಡ್ರೋನ್‌ಮ್ಯಾನ್ ಹೆಸರಿನ ಟ್ವಿಟರ್ ಹ್ಯಾಂಡಲ್ ಟ್ರಕ್ ತಪ್ಪುತಪ್ಪಾಗಿ ರಿವರ್ಸ್ ತೆಗೆದುಕೊಳ್ಳುವ ವಿಡಿಯೋವನ್ನು ಹಂಚಿಕೊಂಡಿದೆ. ನಾವು ಎಂದಿಗೂ ಬದಲಾಗುವುದಿಲ್ಲ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ "ಏನು ಹೇಳಬೇಕೆಂದು ತಿಳಿಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಮತ್ತೊಂದು ಕಾರು ಸರ್ವಿಸ್ ರಸ್ತೆಗೆ ಹೋಗಲು ಅದೇ ಬದಿಯಲ್ಲಿ ರಿವರ್ಸ್ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಆದರೆ, ಕೆಲವು ಬಳಕೆದಾರರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಭಾಗವೆಂದು ಹೇಳಲಾದ ಈ ರಸ್ತೆಯಲ್ಲಿನ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ. "ಪ್ರವೇಶ ನಿಯಂತ್ರಣವು ಇರಬೇಕಾದಂತೆ ಇಲ್ಲ ಎಂದು ನಾವು ನಿರಂತರವಾಗಿ ಸಂಸದ ಪ್ರತಾಪ್ ಸಿಂಹ ಮತ್ತುಸಚಿವ ನಿತೀನ್ ಗಡ್ಕರಿಗೆ ವಿನಂತಿಸುತ್ತಿದ್ದೇವೆ. ಸರ್ವೀಸ್ ಲೇನ್‌ಗಳನ್ನು ಪ್ರತ್ಯೇಕಿಸಲು ಬಳಸುವ ಸ್ಟೀಲ್ ಗ್ರಿಲ್‌ಗಳು ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಪ್ರವೇಶ ನಿರ್ಗಮನಗಳನ್ನು ಮುಖ್ಯ ಕ್ಯಾರೇಜ್‌ವೇಯಿಂದ ದೂರದಲ್ಲಿ ಇರಬೇಕು. ದುರದೃಷ್ಟವಶಾತ್ ಇವುಗಳಲ್ಲಿ ಯಾವುದನ್ನೂ ಸರಿಯಾಗಿ ಅನುಸರಿಸಿಲ್ಲ" ಎಂದು ಹೇಳಿದ್ದಾರೆ.
ಆಕಾಶ್ ಗುಪ್ತಾ ಎಂಬ ಹೆಸರಿನ ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ, "ಜನರು ವಿಶೇಷವಾಗಿ ಇಲ್ಲಿಯೇ ಏಕೆ ರಿವರ್ಸ್ ತೆಗೆದುಕೊಳ್ಳುತ್ತಿದ್ದಾರೆ? ಇದೇ ಜಾಗದಿಂದ ಮತ್ತೊಂದು ಅಂತಹದ್ದೇ ವಿಡಿಯೋ ನೋಡಿದ್ದೇನೆ. ನನಗೆ ಅನ್ನಿಸುವುದು ಇಲ್ಲಿ ವಾಹನ ಸವಾರರಿಗೆ ಗೊಂದಲವಾಗುವಂತಹ ಚಿಹ್ನೆಗಳು ಇರಬಹುದು" ಎಂದು ಹೇಳಿದ್ದಾರೆ. ಈ ಹೆದ್ದಾರಿ ಜನರಿಗೆ ಮುಕ್ತವಾದಗಿನಿಂದ ಇಲ್ಲಿ ಸಂಚಾರ ನಿಯಮ ಉಲ್ಲಂಘನೆ ಘಟನೆಗಳು ವರದಿಯಾಗುತ್ತಿವೆ.

ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ಎರಡೂ ನಗರಗಳ ನಡುವೆ ಪ್ರಯಾಣಿಸಲು ಸರಿಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಇದನ್ನು ಅರ್ಧಕ್ಕೆ ಇಳಿಸಲಿದೆ. ಈ ಯೋಜನೆಯಲ್ಲಿ 11 ಮೇಲ್ಸೇತುವೆಗಳು, 64 ಅಂಡರ್‌ಪಾಸ್‌ಗಳು, ಐದು ಬೈಪಾಸ್‌ಗಳು, 42 ಸಣ್ಣ ಸೇತುವೆಗಳಿ ಇವೆ.












Click it and Unblock the Notifications