ಬೆಂಗಳೂರು ಐಪಿಎಲ್ ಫೈನಲ್ ಟಿಕೆಟ್ ಸೋಲ್ಡ್ ಔಟ್
ಬೆಂಗಳೂರು, ಮೇ.30: ಐಪಿಎಲ್ ಏಳನೇ ಆವೃತ್ತಿಯ ಫೈನಲ್ ಪಂದ್ಯದ ಟಿಕೆಟ್ ಕೆಲವೇ ಗಂಟೆಯಲ್ಲಿ ಖಾಲಿಯಾಗಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಟಿಕೆಟ್ ವಿತರಣೆ 11 ಗಂಟೆ ವೇಳೆ ಸಂಪೂರ್ಣ ಮಾರಾಟವಾಗಿದೆ.
ಟೆಕೆಟ್ ಗಿಟ್ಟಿಸಲು ಗುರುವಾರ ಮಧ್ಯರಾತ್ರಿಯಿಂದಲೇ ಕ್ರಿಕೆಟ್ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್ ಬಳಿ ಮುಗಿಬಿದ್ದಿದ್ದರು. ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು. ಆದ್ದರಿಂದ ಈ ಪಂದ್ಯದ ಟಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆಯಿತ್ತು.
ಮೈಸೂರು, ಮಂಗಳೂರಿನ ಐಪಿಎಲ್ ಅಭಿಮಾನಿಗಳು ಟಿಕೆಟ್ ಪಡೆಯಲು ಸರದಿಯಲ್ಲಿ ನಿಂತಿದ್ದರು. ಆದರೆ ಅವರಿಗೆ ಟಿಕೆಟ್ ಸಿಗದೇ ನಿರಾಸೆಯಾಗಿದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ಕಡಿಮೆ ಟಿಕೆಟ್ ವಿತರಿಸಿದ್ದಾರೆ ಎಂದು ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್‌ನಲ್ಲಿ ಫೈನಲ್ ಮ್ಯಾಚ್‌ನ ಟಿಕೆಟ್‌ಗಳು ಈಗಾಗಲೇ ಸಂಪೂರ್ಣ ಮಾರಾಟವಾದೆ. ಗುರುವಾರ ರಾತ್ರಿಯಿಂದ ಜಾಗರಣೆ ಮಾಡಿದವರಿಗೆ ಶುಕ್ರವಾರ ಟಿಕೆಟ್ ಸಿಕ್ಕಿದೆ. ಬೆಳಗ್ಗೆ ಆರು ಗಂಟೆಯಿಂದ ಸರದಿಯಲ್ಲಿ ನಿಂತವರಿಗೆ ಟಿಕೆಟ್ ಸಿಕ್ಕಿಲ್ಲ.

ಅಧಿಕಾರಿಗಳಿಗೆ ಟಿಕೆಟ್
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 40 ಸಾವಿರ ಸಾಮರ್ಥ್ಯವಿದ್ದರೂ ಕೆಲವೇ ಟಿಕೆಟ್ ಮಾತ್ರ ವಿತರಣೆ ಮಾಡಿದ್ದಾರೆ. ಬಹುತೇಕ ಟಿಕೆಟ್‌ಗಳನ್ನು ಅಧಿಕಾರಿಗಳು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ.
ಗುರು, ಕ್ರಿಕೆಟ್ ಅಭಿಮಾನಿ

ಬ್ಲ್ಯಾಕ್ ನಲ್ಲಿ ಟಿಕೆಟ್:
ಟಿಕೆಟ್ ಸಿಕ್ಕದಿದ್ದರೂ ಪರವಾಗಿಲ್ಲ. ಬ್ಲ್ಯಾಕ್‌ಲ್ಲಾದರೂ ಟೆಕೆಟ್ ಖರೀದಿಸಿ ಫೈನಲ್ ಮ್ಯಾಚ್ ನೋಡುತ್ತೇವೆ
ಟೆಕೆಟ್ ಸಿಗದೇ ನಿರಾಶರಾದ ಅಭಿಮಾನಿಗಳು

ರಾತ್ರಿ 8 ಗಂಟೆಗೆ ಫೈನಲ್:
ಭಾನುವಾರ ರಾತ್ರಿ ಎಂಟು ಗಂಟೆಗೆ ಐಪಿಎಲ್ ಕ್ರಿಕೆಟ್ ಫೈನಲ್ ಪಂದ್ಯ ನಡೆಯಲಿದೆ.

ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಅವಕಾಶ
ಈ ಬಾರಿಯ ಐಪಿಎಲ್ ಫೈನಲ್ ಪಂದ್ಯಾಟ ಮುಂಬೈಯಲ್ಲಿ ನಡೆಯಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಫೈನಲ್ ಪಂದ್ಯದವನ್ನು ನಡೆಸುವ ಅವಕಾಶ ಬೆಂಗಳೂರಿಗೆ ಸಿಕ್ಕಿದೆ.












Click it and Unblock the Notifications