ಬಿಡಿಎಯಲ್ಲಿ ಸಿಕ್ಕಿಬಿದ್ದ ಮೂವರು ಇಂದು ಕೋರ್ಟ್‌ಗೆ
ಬೆಂಗಳೂರು, ಫೆ. 19 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ದಾಖಲೆಗಳನ್ನು ಕದಿಯಲು ಹೋಗಿ ಸಿಕ್ಕಿಬಿದ್ದ ಮೂವರನ್ನು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ಬಿಡಿಎ ಕಡತಗಳನ್ನು ಕದ್ದು ತಮಗೆ ಬೇಕಾದಂತೆ ತಿದ್ದುತ್ತಿದ್ದ ಮೂವರನ್ನು ಪೊಲೀಸರು ಬುಧವಾರ ಸಂಜೆ ಬಿಡಿಎ ಕಚೇರಿಯಲ್ಲಿ ಬಂಧಿಸಿದ್ದರು. ಬಂಧಿತ ಲಕ್ಷ್ಮಣ್ ಕುಮಾರ್, ರವಿ ಮತ್ತು ಶ್ರೀನಿವಾಸ್ ಅವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಬಿಡಿಎ ಮೂಲಕ ಮಂಜೂರಾದ ನಿವೇಶನಗಳ ಕಡತಗಳನ್ನು ತಿದ್ದಲಾಗುತ್ತಿದೆ ಎಂಬ ಮೌಖಿಕ ದೂರಿನ ಹಿನ್ನಲೆಯಲ್ಲಿ ಬುಧವಾರ ಸಂಜೆ ಪೊಲೀಸರು ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿದ್ದರು. ಆಗ ಕಡತಗಳನ್ನು ತಿದ್ದುತ್ತಿದ್ದ ಮೂವರನ್ನು ಬಂಧಿಸಿದ್ದರು. [ಬಿಡಿಎ ನಿವೇಶನಕ್ಕೆ ಸುಧಾರಣೆ ಶುಲ್ಕ ಪಾವತಿಸಿ : ಬಿಬಿಎಂಪಿ ಸೂಚನೆ]
ಹಳೆಯ ಕಡತಗಳನ್ನು ಹುಡುಕುವ ನೆಪದಲ್ಲಿ ಹಳೆ ಕಡತ ವಿಭಾಗಕ್ಕೆ ತೆರಳುತ್ತಿದ್ದ ಮೂವರು, ಆ ವಿಭಾಗದಲ್ಲಿದ್ದ ಹಳೆ ಕಡತಗಳನ್ನು ತಮಗೆ ಬೇಕಾದಂತೆ ತಿದ್ದುತ್ತಿದ್ದರು. ನಂತರ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಶೇಷಾದ್ರಿಪುರಂ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರು ಹೊಸಕೆರೆ ಹಳ್ಳಿಯಲ್ಲಿ ಅನಾಥ ಮಕ್ಕಳ ಅಭಿವೃದ್ಧಿ ಸಂಘವನ್ನು ನಡೆಸುತ್ತಿದ್ದು, ಸಂಘದ ಹೆಸರಿಗೆ ಭೂಮಿ ಮಾರಾಟದ ದಾಖಲೆಗಳನ್ನು ತಿದ್ದುಕೊಳ್ಳುತ್ತಿದ್ದರು. ನಂತರ ಅದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಶೇಷಾದ್ರಿಪುರಂ ಪೊಲೀಸರು ಶಂಕಿಸಿದ್ದು, ವಿಚಾರಣೆ ಮುಂದುವರೆದಿದೆ.












Click it and Unblock the Notifications