ಭಾರೀ ಸಂಬಳ ಏರಿಕೆ ಕನಸು ಈ ವರ್ಷವೂ ಈಡೇರಲ್ಲ
ಬೆಂಗಳೂರು, ನ. 19: ಭಾರತೀಯ ಕಂಪನಿಗಳ ನೌಕರರಿಗೆ ಪ್ರಸಕ್ತ ಆರ್ಥಿಕ ವರ್ಷ ಸಂಬಳದಲ್ಲಿ ನಿರೀಕ್ಷಿತ ಹೆಚ್ಚಳ ಸಿಗುವುದಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಂಪನಿಗಳು ಉತ್ತಮ ಲಾಭ ಗಳಿಸಿದ್ದರೂ, ನೌಕರರಿಗೆ ಸಂಬಳದಲ್ಲಿ ಕೇವಲ ಶೇ. 11ರಷ್ಟು ಹೆಚ್ಚಳ ನೀಡಲಿವೆ. ಆದರೆ, ಕಳೆದ ವರ್ಷಕ್ಕಿಂತ ಉತ್ತಮವಾಗಿರಲಿದೆ. [ಸರ್ಕಾರಿ ನೌಕರರಿಗೆ ಸಂಬಳ ಏರಿಕೆ ಇಲ್ಲ]
MyHiringClub.com ಮತ್ತು FlikJobs.com ವೆಬ್ ಸೈಟ್‌ಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯ ವರದಿ ಹೀಗೆ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 92ರಷ್ಟು ಕಂಪನಿಗಳು ತಾವು ನೌಕರರಿಗೆ ಸಂಬಳದಲ್ಲಿ ಸುಮಾರು ಶೇ. 10ರಷ್ಟು ಹೆಚ್ಚಳ ನೀಡುವುದಾಗಿ ಹೇಳಿವೆ. ಆದರೆ, ಶೇ. 90ರಷ್ಟು ಕಂಪನಿಗಳು ನೌಕರರಿಗೆ ಬೋನಸ್ ವಿತರಿಸುವುದಾಗಿ ತಿಳಿಸಿದೆ. [ಪ್ರಧಾನಿಗಿಂತ 10 ಪಟ್ಟು ಹೆಚ್ಚು ಸಂಬಳ]

ಕೈಗಾರಿಕೆಗಳ ನೌಕರರಿಗೆ ಸಂಬಳದಲ್ಲಿ ಶೇ. 11ರಷ್ಟು ಹೆಚ್ಚಳ ಸಿಗಲಿದ್ದು, ಶೇ. 10ರಷ್ಟು ಬೋನಸ್ ಲಭ್ಯವಾಗಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
MyHiringClub.com ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕುಮಾರ್ ಮಾತನಾಡಿ, ಈಗಿನ ಮಾರುಕಟ್ಟೆ ಸನ್ನಿವೇಷದ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದ ಸಂಬಳ ಹೆಚ್ಚಳ ಹಾಗೂ ಲಾಭಾಂಶ ಎರಡಂಕಿಗಳಲ್ಲಿ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 1ರಿಂದ 2ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ. [ಕೈ ತುಂಬ ಸಂಬಳ: ಬೆಂಗಳೂರೇ ಬೆಸ್ಟ್]
ಸಮೀಕ್ಷೆಯಲ್ಲಿ ವಿವಿಧ ಕಂಪನಿಗಳ 5,754 ಉನ್ನತ ಅಧಿಕಾರಿಗಳು ಹಾಗೂ 22,300 ಸಿಬ್ಬಂದಿಯನ್ನು ಸಂದರ್ಶಿಸಲಾಗಿದೆ ಎಂದು ವೆಬ್ ಸೈಟ್‌ಗಳು ತಿಳಿಸಿವೆ.











Click it and Unblock the Notifications