ಮುನಿರತ್ನ ವೋಟರ್ ಐಡಿ ಮುದ್ರಣ ಮಾಡ್ತಾರೆ ಅಂತಾ ಮೋದಿ ಹೇಳಿದ್ದಾರೆ!

ಬೆಂಗಳೂರು, ಅ. 26: ಉಪ ಚುನಾವಣೆ ಹಿನ್ನೆಲೆಯಲ್ಲಿ ಆರ್.ಆರ್. ನಗರದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಜನರನ್ನು ಭಯಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆ ಮಾಡುವುದು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಹವ್ಯಾಸ ಎಂದು ಆರೋಪಿಸಿದ್ದಾರೆ.

ಜನರನ್ನ ಮತಗಟ್ಟೆಗೆ ಬರದಂತೆ ತಡೆಯುವ ಪ್ರಯತ್ನಗಳಾಗುತ್ತಿದೆ. ಕ್ಷೇತ್ರದಲ್ಲಿ ಕೊಲೆಗಳಾಗುತ್ತವೆ ಎಂದು ಹೆದರಿಸುತ್ತಿದ್ದಾರೆ. ಜನ ತುಂಬಾ ಭಯದಲ್ಲಿದ್ದಾರೆ. ಮುಕ್ತವಾತಾವರಣ ಆರ್ ಆರ್ ನಗರದಲ್ಲಿ ಇಲ್ಲ. ಜೊತೆಗೆ ಮತ ಹಾಕದಿದ್ದರೆ ಸುಮ್ಮನಿರಲ್ಲ ಎನ್ನುತ್ತಿದ್ದಾರೆ. ಕಳೆದ ಬಾರಿಯೂ ಮತದಾರರ ಗುರುತಿನ ಪತ್ರದ ಅಕ್ರಮ ನಡೆದಿತ್ತು. ಕೋರ್ಟ್‌ನಲ್ಲಿ ಅವರ ವಿರುದ್ಧ ಕೇಸ್ ಇನ್ನೂ ಇದೆ.

 there is work to be done to intimidate people in rr nagar mp dk Suresh

ಆ ಬಗ್ಗೆಯೂ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ. ಉಚಿತ ಸೆಟ್‌ಟಾಪ್ ಬಾಕ್ಸ್ ಕೊಟ್ಟಿದ್ದಾರೆ. ಅದನ್ನು ನಮ್ಮ ಕಾನೂನು ವಿಭಾಗ ಪರಿಶೀಲಿಸುತ್ತಿದೆ. ಆ ಬಗ್ಗೆಯೂ ನಾವು ದೂರು ನೀಡಿದ್ದೇವೆ. ಡಿಕೆಶಿ ವಿರುದ್ಧ ಮುನಿರತ್ನ ಅವರು ನೂರು ಕೇಸ್ ಕೊಡಲಿ. ಮುನಿರತ್ನ ನೀಚ ಅಂತಾ ಬಿಜೆಪಿಯವರೇ ಹೇಳಿದ್ದಾರೆ. ವೋಟರ್ ಐಡಿ ಮುದ್ರಣ ಮಾಡುತ್ತಾನೆ ಅಂತ ಪ್ರಧಾನಿ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಎಂದು ಸಂಸದ ಡಿ.ಕೆ. ಸುರೇಶ್ ಪ್ರಶ್ನೆ ಮಾಡಿದ್ದಾರೆ.

Recommended Video

      ಕಾಂಗ್ರೆಸ್ ನಲ್ಲಿ ಗೊಂದಲ ! | DK Shivkumar | RR Nagar By Election | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+