Get Updates
Get notified of breaking news, exclusive insights, and must-see stories!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ವಿಟ್ಟರ್ ತರಲೆಗೆ ಸದಾ ಬಲಿಯಾಗುತ್ತಿರುವ ರಾಜಕಾರಣಿಯೆಂದರೆ ಕೇಜ್ರಿವಾಲ್. ಇವರ ಪ್ರಾಮಾಣಿಕತೆಯೇ ಅವರನ್ನು ತಮಾಷೆಯ ವಸ್ತುವಾಗಿಸಿದೆ. ಅವರ ಬಗ್ಗೆ ಟ್ವಿಟ್ಟರ್ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟವಾಗಿರುವ ಕೆಲವು ಜೋಕ್‌ಗಳು ಇಲ್ಲಿವೆ.

ಕಳೆದ ವಾರ ಅರವಿಂದ್ ಕೇಜ್ರಿವಾಲ್ ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ ತಮ್ಮದಲ್ಲದ ತಪ್ಪಿಗೆ ಎಲ್ಲರ ಮುಂದೆ ನಗೆಪಾಟಲಾಗಿದ್ದರು. ಬೆಂಗಳೂರು ಮೂಲದ ಅರವಿಂದ್ ಸ್ಟೋರ್(@ArvindStore) ತನ್ನ ಹೊಸ ಉತ್ಪನ್ನದ ಬಗ್ಗೆ ಟ್ವೀಟ್ ಮಾಡಿತ್ತು ಆದ್ರೆ, ಇದಕ್ಕೆ ಬಳಸಿಕೊಂಡ ಜನ ಈಗ ಅರವಿಂದ್ ಸ್ಟೋರ್ ಟ್ವೀಟ್ ಗೂ ಅರವಿಂದ್ ಕೇಜ್ರಿವಾಲ್ ಗೂ ಲಿಂಕ್ ಕಲ್ಪಿಸಿ ಟ್ವೀಟ್ ರಾಶಿ ಹಾಕಿಬಿಟ್ಟರು.

ಇದಕ್ಕೂ ಮುನ್ನ ಟ್ವಿಟ್ಟರ್ ಸಾಮಾಜಿಕ ಜಾಲ ತಾಣದಲ್ಲಿ #YoKejriwalSoHonest ಟ್ಯಾಗ್ ಹಾಗೂ ಇನ್ನೂ ಕೆಲವು ಇಂಥದ್ದೇ ಹೋಲಿಕೆಯುಳ್ಳ ಟ್ಯಾಗ್ ಗಳು ಕಳೆದ ಹಲವು ತಿಂಗಳುಗಳ ಕಾಲ ಟ್ವಿಟ್ಟರ್ ನಲ್ಲಿ ಸದ್ದು ಮಾಡಿತ್ತುಇನ್ನಷ್ಟು ಮುಂದೆ ಓದಿ..

ಕೇಜ್ರಿ ಜೋಕ್ ಅಂಡರ್ ವೇರ್ ನನ್ನು ಬಿಟ್ಟಿಲ್ಲ

ಕೇಜ್ರಿ ಜೋಕ್ ಅಂಡರ್ ವೇರ್ ನನ್ನು ಬಿಟ್ಟಿಲ್ಲ

*ವಿಐಪಿ ಎಂಬ ಲೇಬಲ್ ಇರುವ ಅಂಡರ್‌ವೇರ್‌ನ್ನು ಯಾವ ಕಾರಣಕ್ಕೂ ಖರೀದಿಸುವುದಿಲ್ಲ.

ಅರವಿಂದ್ ಪ್ರಾಮಾಣಿಕತೆ ಬಗ್ಗೆ

ಅರವಿಂದ್ ಪ್ರಾಮಾಣಿಕತೆ ಬಗ್ಗೆ

*ಇವರು ಅಪ್ಪಿತಪ್ಪಿ ಒಂದು ಸೊಳ್ಳೆಯನ್ನು ಕೊಂದರೂ ಪ್ರಾಮಾಣಿಕವಾಗಿ ಪೊಲೀಸರಿಗೆ ಶರಣಾಗುತ್ತಾರೆ.

ಚೋಲೀ ಕೆ ಪೀಛೇ ಕ್ಯಾ ಹೈ

ಚೋಲೀ ಕೆ ಪೀಛೇ ಕ್ಯಾ ಹೈ

ಮಾಧುರಿ ದೀಕ್ಷಿತ್ ಅವರ ಮುಂದೆ ಬಂದು ಚೋಲೀ ಕೆ ಪೀಛೇ ಕ್ಯಾ ಹೈ ಎಂದು ಕುಣಿದಾಗ ಸತ್ಯ ಹೇಳುವ ಅಪಾಯ ಇದೆ.

ಮಫ್ಲರನ್ನು ಕಳಚಿಡುವುದಿಲ್ಲ.

ಮಫ್ಲರನ್ನು ಕಳಚಿಡುವುದಿಲ್ಲ.

ಇವರು ಸ್ನಾನ ಮಾಡುವಾಗಲೂ ಮಫ್ಲರನ್ನು ಕಳಚಿಡುವುದಿಲ್ಲ.

ರಸೀತಿಯನ್ನು ಕೇಳುತ್ತಾರೆ

ರಸೀತಿಯನ್ನು ಕೇಳುತ್ತಾರೆ

ಆಟೋ ಚಾಲಕರಿಂದಲೂ ರಸೀತಿಯನ್ನು ಕೇಳುತ್ತಾರೆ.

ನಟಿ ಸನ್ನಿ ಲಿಯೋನ್ ವಕ್ತಾರಳನ್ನಾಗಿ ನೇಮಕ

ನಟಿ ಸನ್ನಿ ಲಿಯೋನ್ ವಕ್ತಾರಳನ್ನಾಗಿ ನೇಮಕ

ನಟಿ ಸನ್ನಿ ಲಿಯೋನ್ ಏನನ್ನೂ ಬಚ್ಚಿಡುವುದಿಲ್ಲ ಅನ್ನುವ ಕಾರಣಕ್ಕೆ ಅವಳನ್ನೇ ಆಪ್ ಪಕ್ಷದ ವಕ್ತಾರಳನ್ನಾಗಿ ನೇಮಕ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಮಲಗುವ ಮುಂಚೆ ಜಪಿಸುತ್ತಾರೆ

ಮಲಗುವ ಮುಂಚೆ ಜಪಿಸುತ್ತಾರೆ

ತಾನು ಮುಖ್ಯಮಂತ್ರಿಯಾದಾಗ ಸ್ವೀಕಾರ ಮಾಡಿದ ಪ್ರಮಾಣವಚನವನ್ನು ಪ್ರತಿ ರಾತ್ರಿ ಮಲಗುವ ಮುಂಚೆ ಜಪಿಸುತ್ತಾರೆ.

ಅರ್ಧಬೆಲೆಯನ್ನು ಪಾವತಿ ಮಾಡುತ್ತಾರೆ

ಅರ್ಧಬೆಲೆಯನ್ನು ಪಾವತಿ ಮಾಡುತ್ತಾರೆ

ಯಾವುದಾದರೂ ರೆಸ್ಟುರಾಂಟ್ ಮುಂದೆ ನಡೆದುಹೋಗುವಾಗ ತಿಂಡಿಯ ಪರಿಮಳ ಬಂದರೆ ಸಾಕು, ಸೀದಾ ಒಳಗೆ ಹೋಗಿ ತಾನು ಹೀರಿದ ಪರಿಮಳಕ್ಕೆ ಪ್ರತಿಯಾಗಿ ಆ ತಿಂಡಿಯ ಅರ್ಧಬೆಲೆಯನ್ನು ಪಾವತಿ ಮಾಡುತ್ತಾರೆ.

ಟೀಚರ್ ವಿರುದ್ಧ ಕೇಸ್ ಹಾಕಿದ್ದರು

ಟೀಚರ್ ವಿರುದ್ಧ ಕೇಸ್ ಹಾಕಿದ್ದರು

ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ ಎಂದು ತಪ್ಪಾಗಿ ಪಾಠ ಹೇಳಿದ ಟೀಚರ್ ವಿರುದ್ಧ ಕೇಸ್ ಹಾಕಿದ್ದರು.

ವಾಟ್ಸ್ ಆಪ್ ಅನ್ನುವುದು ಆಪ್

ವಾಟ್ಸ್ ಆಪ್ ಅನ್ನುವುದು ಆಪ್

ವಾಟ್ಸ್ ಆಪ್ ಅನ್ನುವುದು ಆಪ್ (ಆಮ್ ಆದ್ಮಿ ಪಾರ್ಟಿ)ನ ದೂರುವಾಣಿ ಸೇವೆಯಲ್ಲ ಅನ್ನುವ ಬಗ್ಗೆ ದಿನಾ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ.

ಸತ್ಯಶೋಧಕ ಯಂತ್ರ

ಸತ್ಯಶೋಧಕ ಯಂತ್ರ

ರಾ (ಅU) ಸಂಸ್ಥೆ ಅವರನ್ನೇ ಸತ್ಯಶೋಧಕ ಯಂತ್ರವನ್ನಾಗಿ ಬಳಸುವುದಕ್ಕೆ ತೀರ್ಮಾನಿಸಿದೆ.

ಅದೇ ಪೊಲೀಸರಿಗೆ ದಂಡ ಕಟ್ಟುತ್ತಾರೆ

ಅದೇ ಪೊಲೀಸರಿಗೆ ದಂಡ ಕಟ್ಟುತ್ತಾರೆ

ಟ್ರಾಫಿಕ್ ಪೊಲೀಸರನ್ನು ತನ್ನ ಬೈಕಲ್ಲೇ ಅಟ್ಟಿಸಿಕೊಂಡು ಹೋಗಿ, ಸಿಗ್ನಲ್ ಜಂಪ್ ಮಾಡಿ ಕೊನೆಗೆ ಅದೇ ಪೊಲೀಸರಿಗೆ ದಂಡ ಕಟ್ಟುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಅವರು ರಾತ್ರಿಯೇನಾದರೂ ಮನೆಯಲ್ಲಿ ಪಾರ್ಟಿ ಮಾಡುವಾಗ ರಾತ್ರಿ ಹತ್ತು ಗಂಟೆ ದಾಟಿದರೂ ಗಾನಾಬಜಾನಾ ನಡೆಯುತ್ತಿದ್ದರೆ ಪೊಲೀಸರಿಗೆ ಫೋನ್ ಮಾಡುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ತಾವೊಬ್ಬರೇ ಇದ್ದಾಗ ಸೀನಿದರೂ ಅತ್ತಿತ್ತ ನೋಡಿ ಎಕ್ಸ್‌ಕ್ಯೂಸ್ ಮೀ ಅನ್ನುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಅವರ ಮುಂದೆ ಇಲ್ಲಿತನಕ ಯಾವ ಮಹಿಳೆಯೂ ನಾನು ಈ ಉಡುಪಲ್ಲಿ ದಪ್ಪಗೆ ಕಾಣಿಸ್ತೀನಾ ಅಂತ ಕೇಳೇ ಇಲ್ಲ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಅವರ ಕಣ್ಣಿಗೆ ಎಲ್ಲಾದರೂ ಬಾಂಬ್ ಕಾಣಿಸಿದರೆ ತಕ್ಷಣ ಅದಕ್ಕೆ ಕಾರಣಕರ್ತನಾದ ಉಗ್ರಗಾಮಿಯನ್ನು ಕರೆಸಿ, ಆ ಬಾಂಬನ್ನು ಅವನಿಗೆ ವಾಪಸ್ ಮಾಡುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಅವರು ಹಾಲು ಕುಡಿದ ನಂತರ ಗ್ಲಾಸಲ್ಲಿ ಹಾಲೇನಾದರೂ ಮಿಕ್ಕಿದರೆ ಅದನ್ನು ಹಸುವಿಗೇ ವಾಪಸ್ ಕೊಡುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಕಾಲ್ಗೇಟ್ ಆಕ್ಟೀವ್ ಸಾಲ್ಟ್ ಟೂತ್ ಪೇಸ್ಟ್‌ನಲ್ಲಿ ರುವ ಉಪ್ಪಿನ ಮಟ್ಟವನ್ನು ಖುದ್ದಾಗಿ ಅವರೇ ಪರೀಕ್ಷಿಸಿ ನೋಡುತ್ತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ನೀನು ಸಕ್ಕರೆ ತಿಂದಿಯಾ ಅಂತ ಯಾರಾದರೂ ಕೇಳಿದರೆ ಯಸ್ ಪಾಪಾ ಅಂತಾರೆ.

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಟ್ಟಿಟ್ಟರಲ್ಲಿ ಬಂದಿರುವ ಕೇಜ್ರಿವಾಲ್ ಕ್ರೇಜಿ ಜೋಕ್ಸ್!

ಕೇಜ್ರಿವಾಲ್ ಎಷ್ಟು ಸರಳಜೀವಿಯೆಂದರೆ, ಕೆಂಪು ಬಣ್ಣ ವಿಐಪಿ ಸಂಸ್ಕೃತಿಗೆ ಸಂಕೇತ ವಾಗಿರುವುದರಿಂದ ಸಿಗ್ನಲಲ್ಲಿ ರೆಡ್ ಲೈಟ್ ಬಿದ್ದಾಗಲೂ ಗಾಡಿ ನಿಲ್ಲಿಸುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+