ಮಹಿಳಾ ಟೆಕ್ಕಿಯಿಂದ ತಾಯಿ ಕೊಲೆ; ಪ್ರಕರಣಕ್ಕೆ ತಿರುವು!

ಬೆಂಗಳೂರು, ಫೆಬ್ರವರಿ 04 : ಮಹಿಳಾ ಟೆಕ್ಕಿ ತಾಯಿಯನ್ನು ಕೊಂದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತಾಯಿಯನ್ನು ಕೊಂದ ಬಳಿಕ ಸಹೋದರನ ಹತ್ಯೆಗೆ ಯತ್ನಿಸಿದ್ದ ಟೆಕ್ಕಿ, ಎರಡು ದಿನದಿಂದ ನಾಪತ್ತೆಯಾಗಿದ್ದು ಕೆ. ಆರ್. ಪುರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಟೆಕ್ಕಿ ಅಮೃತಾ ಮಾರತ್ತಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಫೆಬ್ರವರಿ 2ರಂದು ತಾಯಿ ನಿರ್ಮಲಾರನ್ನು ಹತ್ಯೆ ಮಾಡಿ, ಸಹೋದರ ಹರೀಶ್ ಹತ್ಯೆಗೆ ಯತ್ನಿಸಿದ್ದಳು. ಸಾಲದ ವಿಚಾರದಲ್ಲಿ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿತ್ತು.

ಹತ್ಯೆ ಬಳಿಕ ಅಮೃತ ಪರಾರಿಯಾಗುತ್ತಿರುವ ದೃಶ್ಯ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಾ ಪರಾರಿಯಾಗಲು ಆಕೆಯ ಪ್ರಿಯಕರ ಸಹಾಯ ಮಾಡಿದ್ದಾನೆ. ಆತನೇ ಬಂದು ಅಮೃತಾಳನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸಿಕ್ಕಿದೆ.

Techie

ಬ್ಯಾಗ್ ಹಾಕಿಕೊಂಡು ಮನೆಯಿಂದ ಓಡಿ ಬರುವ ಅಮೃತಾ, ಪ್ರಿಯಕರನ ಜೊತೆ ಬೈಕ್‌ನಲ್ಲಿ ಕುಳಿತುಕೊಂಡು ಪರಾರಿಯಾಗಿದ್ದಾಳೆ. ಮದುವೆ ವಿಚಾರಕ್ಕೆ ಈ ಹತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರೀತಿಸಿದ ಹುಡುಗನ ಜೊತೆ ವಿವಾಹಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕೆ. ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿದ ಅಮೃತಾ ತಾಯಿ ನಿರ್ಮಲಾ ಹತ್ಯೆ ಮಾಡಿದ್ದಳು. ಸಹೋದರ ಹರೀಶ್ ಹತ್ಯೆಗೆ ವಿಫಲಯತ್ನ ನಡೆಸಿದ್ದರು. ಬಳಿಕ ಮನೆಯಿಂದ ಪರಾರಿಯಾಗಿದ್ದರು. ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಸಾಲದ ಕಥೆ ಹೇಳಿದ್ದಳು : ಟೆಕ್ಕಿ ಅಮೃತಾ ತಾನು 15 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದೇನೆ. ಸಾಲಗಾರರು ಭಾನುವಾರ ಮನೆಗೆ ಬರುತ್ತಾರೆ. ಆದ್ದರಿಂದ, ಅವಮಾನವಾಗುತ್ತದೆ. ಅದಕ್ಕೆ ತಾಯಿಯನ್ನು ಕೊಂದೆ ಎಂದು ಸಹೋದರ ಹರೀಶ್ ಬಳಿ ಹೇಳಿದ್ದಳು.

ಆದರೆ, ಪ್ರಕರಣದ ದಿಕ್ಕು ತಪ್ಪಿಸಲು ಈ ರೀತಿ ಹೇಳಿರುವುದು ಈಗ ಖಚಿತವಾಗಿದೆ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಬೈಕ್‌ನಲ್ಲಿ ಪರಾರಿಯಾಗಿರುವುದು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಸಂಶಯ ಉಂಟಾಗುತ್ತದೆ.

ಕೆ. ಆರ್. ಪುರ ಪೊಲೀಸರು ಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಮೃತಾಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ. ಅಮೃತಾ ಬಂಧನವಾದ ಬಳಿಕ ಘಟನೆ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+