ಟಿಸಿಎಸ್ ಟೆಕ್ಕಿ ಕೊಂದು, ಕಾರಿನೊಂದಿಗೆ ಪರಾರಿ
ಬೆಂಗಳೂರು, ನ.6 : ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು ಕೊಂದು ಕಾರಿನೊಂದಿಗೆ ದುಷ್ಕರ್ಮಿಗಳು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರಿಚಯಸ್ಥರು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡಿ ಸರ್ಕ್‌ಲ್ ಬಳಿ ಪ್ರಜೀತ್ (33) ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಕತ್ತು ಕೊಯ್ದು ಪ್ರಜೀತ್ ಕೊಲೆ ಮಾಡಲಾಗಿದ್ದು, ನಂತರ ಮೊಬೈಲ್, ಹಣ ಮತ್ತು ಆತನ ಆಲ್ಟೋ ಕಾರಿನೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. [ಫೇಕ್ ಫೇಕ್ 169 ಕಂಪನಿ, 25K ಟೆಕ್ಕಿಸ್]

ಬುಧವಾರ ರಾತ್ರಿ 8.15ರ ಸುಮಾರಿಗೆ ಪ್ರಜೀತ್ ಮೊಬೈಲ್‍ಗೆ ಕರೆಯೊಂದು ಬಂದಿದೆ. ಸ್ನೇಹಿತರು ಕರೆಯುತ್ತಿದ್ದಾರೆ, ಹೋಗಿ ಬರುತ್ತೇನೆಂದು ಅಯ್ಯಪ್ಪ ನಗರದಲ್ಲಿರುವ ತನ್ನ ಮನೆಯಿಂದ ಪ್ರಜೀತ್ ಹೊರಗೆ ಬಂದಿದ್ದಾನೆ. ಮಗ ಮನೆಗೆ ಬಾರದಿದ್ದರಿಂದ ತಂದೆ ಮತ್ತೆ ಮೊಬೈಲ್‌ಗೆ ಕರೆ ಮಾಡಿದ್ದು, ಸ್ವಲ್ಪ ಹೊತ್ತಿನಲ್ಲೇ ಬರುತ್ತೇನೆ ಎಂದು ಉತ್ತರ ನೀಡಿದ್ದ. [ನಾಪತ್ತೆಯಾಗಿದ್ದ ವಿವಾಹಿತ ಮಹಿಳಾ ಟೆಕ್ಕಿ ಮರಳಿ ಮನೆಗೆ]
ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪ್ರಜೀತ್ ಮನೆಯಿಂದ ಆಲ್ಟೋಕಾರಿನಲ್ಲಿ ತೆರಳಿದ್ದ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದುಷ್ಕರ್ಮಿಗಳು ಕೊಲೆಯ ನಂತರ ಕಾರನ್ನು ಕದ್ದು ಪರಾರಿಯಾಗಿದ್ದಾರೆ. ಕಾರ್ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಜೀತ್ ಪರಿಚಯಸ್ಥರ ಕರೆ ಬಂದಿದ್ದರಿಂದ ಮನೆಯಿಂದ ಹೊರಗೆ ಬಂದಿದ್ದಾರೆ. ಕೊಲೆಯಲ್ಲಿ ಪರಿಚಯಸ್ಥರ ಕೈವಾಡವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications