ಲಿಂಗಾಯತ ಪ್ರತ್ಯೇಕ ಧರ್ಮ: ಟಿಬಿ ಜಯಚಂದ್ರ ಸುದ್ದಿಗೋಷ್ಠಿ ವಿವರ
ಬೆಂಗಳೂರು, ಮಾರ್ಚ್ 19: ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದ ತಂಡ ನೀಡಿದ್ದ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ವರದಿಯನ್ನು ಸಚಿವ ಸಂಪುಟವು ಅಂಗೀಕರಿಸಿದ್ದು. ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
ಈ ಬಗ್ಗೆ ಕಾನೂನು ಮಂತ್ರಿ ಟಿ.ಬಿ.ಜಯಚಂದ್ರ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅದರ ಮುಖ್ಯಾಂಶಗಳು ಇಲ್ಲಿವೆ...

* ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಬಗ್ಗೆ ನ್ಯಾ.ನಾಗಮೋಹನದಾಸ್ ಕೊಟ್ಟಿರುವ ವರದಿಯನ್ನು ಸಚಿವ ಸಂಪುಟ ಸರ್ವ ಸಮ್ಮತದಿಂದ ಒಪ್ಪಿಕೊಂಡಿದೆ.
* ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡುವಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
* ಬಸವತತ್ವ ಪಾಲನೆ ಮಾಡುವವರು ಲಿಂಗಾಯತರು, ಲಿಂಗಾಯತ ಧರ್ಮಕ್ಕೆ ಬಸವಣ್ಣನನ್ನು ಧರ್ಮಗುರು, ಇಷ್ಟ ಲಿಂಗ ದೇವರು, ವಚನ ಧರ್ಮ ಗ್ರಂಥ ಎಂದುಕೊಳ್ಳಬಹುದು.
* ಯಾವ ಸಚಿವರ ವಿರೋಧವೂ ಇಲ್ಲದೆ, ಸಂಪುಟ ಸಭೆಯಲ್ಲಿ ವರದಿ ಅಂಗೀಕಾರವಾಗಿದೆ.
* ಕೆಲ ಕ್ಷಣಗಳ ಕಾಲ ಸುದ್ದಿಗೋಷ್ಠಿಯಲ್ಲಿ ಗೊಂದಲದ ವಾತಾವರಣ
* ಶಿಫಾರಸ್ಸು ಕಳಿಸುವ ದಿನಾಂಕವನ್ನು ಸರ್ಕಾರ ನಿರ್ಧಾರ ಮಾಡಲಿದೆ.
* ಲಿಂಗಾಯತರಿಗೆ ನೀಡಲಾಗುವ ಮೀಸಲಾತಿಗಳನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಾಗುತ್ತದೆ.
* ವೀರಶೈವ ಲಿಂಗಾಯತರು, ಲಿಂಗಾಯತ ಧರ್ಮದ ಭಾಗ












Click it and Unblock the Notifications