ಮಾನವ ಕಳ್ಳಸಾಗಾಣೆ: ಬೆಂಗಳೂರು ಎನ್‌ಐಎ ತಂಡದಿಂದ ವ್ಯಕ್ತಿ ಬಂಧನ
ಬೆಂಗಳೂರು, ಅಕ್ಟೋಬರ್ 23: ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭಾನುವಾರ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಎಟಿಟಿ ತಂಡವು ಭಾನುವಾರ ಬಂಧಿಸಿರುವುದಾಗಿ ಮಾಹಿತಿ ನೀಡಿದೆ.
ಮಾನವ ಕಳ್ಳಸಾಗಣೆ (Human Trafficking) ಪ್ರಕರಣದಲ್ಲಿ ಬಂಧಿತ ಆರೋಪಿ ತಮಿಳುನಾಡು ರಾಜ್ಯದ ರಾಮನಾಥಪುರಂ ಮೂಲದ ನಿವಾಸಿ ಮೊಹಮ್ಮದ್ ಇಮ್ರಾನ್ ಖಾನ್ (39) ಎಂದು NIA ತಿಳಿಸಿದೆ. ಇದೇ ಪ್ರಕರಣದಲ್ಲಿ ಈತ ಜೂನ್ 2021 ರಿಂದಲೇ ಅಧಿಕಾರಿಗಳ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.

ಕಳೆದ ಹಲವು ತಿಂಗಳುಗಳಿಂದ ಬೆಂಗಳೂರು ಎಟಿಟಿ ಆತನ ಚಲನವಲನಗಳ ಮೇಲೆ ನಿಗಾ ಇರಿಸಲಾಗಿತ್ತು. ಈ ಸಂಬಂಧ ಉಡುಕಾಟ ನಡೆಸಿದ್ದ ಅಧಿಕಾರಿಗಳಿಗೆ ಈ ಆರೋಪಿ ತಮಿಳುನಾಡಿನ ತೇನಿ ಜಿಲ್ಲೆಯ ಅಜ್ಞಾತ ಸ್ಥಳದಲ್ಲಿದ್ದ ಎನ್ನಲಾಗಿದೆ.
ಹಲವು ಪ್ರಕರಣಗಳಲ್ಲಿ ಬಂಧಿತ ಭಾಗಿ
ಬಂಧಿತ ಖಾನ್ ಈ ತೇನಿ ಜಿಲ್ಲೆಯ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ನಡೆಸುತ್ತಿದ್ದ ಬಗ್ಗೆ ಬಹುದೊಡ್ಡ ಇತಿಹಾಸ ಹೊಂದಿದ್ದಾನೆ. ಇಲ್ಲಿಂದಲೇ ಕಳ್ಳ ಸಾಗಾಣಿಕೆಗೆ ಪ್ಲಾನ್ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ವಿವಿಧ ಅಕ್ರಮ ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಇನ್ನೂ ಇದೇ ಪ್ರಕರಣದ ದಾಖಲೆಗಳಿಲ್ಲದೆ ಶ್ರೀಲಂಕಾ ಪ್ರಜೆಗಳ ಗುಂಪು ಮಂಗಳೂರಿನಲ್ಲಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ಪ್ರಕಾರ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಕರಣದ ಕಾರ್ಯಾಚರಣೆ 2021 ರಿಂದ ನಡೆಸಿ ಬಂಧಿಸಲಾಗಿದೆ.

ಶ್ರೀಲಂಕಾದಿಂದ ಮಾನವ ಕಳ್ಳಸಾಗಾಣೆ
ಶ್ರೀಲಂಕಾ ಪ್ರಜೆಗಳನ್ನು ಶ್ರೀಲಂಕಾದಿಂದ ತಮಿಳುನಾಡು ಮತ್ತು ಬೆಂಗಳೂರು ಮಾರ್ಗವಾಗಿ ಬಂಧಿಸಿ ಕರೆತರಲಾಗಿತ್ತು ಎಂಬುದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ. ಇಮ್ರಾನ್ ಖಾನ್, ಶ್ರೀಲಂಕಾದ ಪ್ರಜೆ, ಈಸನ್ ಎಲ್‌ಟಿಟಿ ಜೊತೆಗೆ ಈ ಹಿಂದೆ ಸಂಬಂಧ ಹೊಂದಿದ್ದರು. ಅವರ ಸಹಯೋದಲ್ಲಿಯೇ 38 ಶ್ರೀಲಂಕಾದ ಪ್ರಜೆಗಳನ್ನು ವಿವಿಧ ಸ್ಥಳಗಳಿಗೆ ಸಾಗಾಣೆಗೆ ಪ್ಲಾನ್ ಮಾಡಲಾಗಿತ್ತು.
ಬಂಧಿತ ಖಾನ್ ತನ್ನ ಸಹಚರ ಆರೋಪಿಗ ಜತೆಗೆ ಶ್ರೀಲಂಕಾದ ಪ್ರಜೆಗಳನ್ನು ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಸಾಗಿಸಿದ್ದಾನೆ. ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಣೆ ಒಳಗೊಂಡ ಪಿತೂರಿಯಲ್ಲಿ ಇಮ್ರಾನ್ ಖಾನ್ ಪ್ರಮುಖ ವ್ಯಕ್ತಿ ಎಂದು ತನಿಖೆಯ ಮೂಲಗಳು ಬಹಿರಂಗಪಡಿಸಿವೆ. ಶ್ರೀಲಂಕಾದ ಪ್ರಜೆಗಳನ್ನು ಮೂಲ ಸ್ಥಳದಿಂದ ಬೇರೆ ಬೇರೆ ಕಡೆ ಸಾಗಿಸುವ ಕೆಲಸದಲ್ಲಿ ಈತ ಬಹುಮುಖ್ಯ ಕೆಲಸ ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications