ಕರವೇ IT ಅಭಿಯಾನಕ್ಕೆ ತಮಿಳುನಾಡು IPS ಅಧಿಕಾರಿಯ ಖ್ಯಾತೆ, ನಿರುದ್ಯೋಗಿಗಳೆಂದು ವ್ಯಂಗ್ಯ! ಕನ್ನಡಿಗರಿಂದ ತರಾಟೆ
ಬೆಂಗಳೂರು: ಬೆಂಗಳೂರು ಐಟಿ ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ ನೀಡಬೇಕೆಂಬ ಆಗ್ರಹ ಜೋರಾಗಿದೆ. ಈ ನಿಟ್ಟಿನಲ್ಲಿ ಶಾಂತಿಯುತವಾಗಿ ಅಭಿಯಾನ ಆರಂಭಿಸಿರುವ 'ಕರ್ನಾಟಕ ರಕ್ಷಣಾ ವೇದಿಕೆ' (ಕರವೇ ನಾರಾಯಣಗೌಡ ಬಣ) ಮತ್ತದರ ಸದಸ್ಯರ ಕುರಿತು ತಮಿಳುನಾಡಿನ ಐಪಿಎಸ್ ಅಧಿಕಾರಿಯೊಬ್ಬರು ಅತ್ಯಂತ ಹಗುರುವಾಗಿ ಮಾತನಾಡಿ ಖ್ಯಾತೆ ತೆಗೆದಿದ್ದಾರೆ. 'ಕೆಲಸ ಮಾಡುವವರಿಗೆ ಕೆಲಸ ಇಲ್ಲದವರ ಅಡ್ಡಿ' ಎಂದು ಹೇಳಿದ್ದಾರೆ. ಆ ಅಧಿಕಾರಿ ಕುರಿತು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಐಟಿ, ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ. ಕನ್ನಡಿಗರೆಂದ ತಕ್ಷಣ ರೆಸ್ಯೂಮ್ ಕಸದಬುಟ್ಟಿಗೆ ಹಾಕಲಾಗುತ್ತದೆ ಎಂಬ ದೂರುಗಳು ಕೇಳಿ ಬಂದಿವೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಕಂಪನಿಗಳು, ಕೈಗಾರಿಕೆಗಳು ಸ್ಥಳೀಯ ಅರ್ಹ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಇತ್ತೀಚೆಗೆ ಸರ್ಕಾರವೇ ಕಟ್ಟುನಿಟ್ಟಾಗಿ ತಿಳಿಸಿದೆ.

'ಆಗ್ರಹ ಅಭಿಯಾನ' ಟೀಕಿಸಿದ ಅಧಿಕಾರಿಗೆ ಕನ್ನಡಿಗರಿಂದ ತರಾಟೆ
ಇದೆಲ್ಲದರ ನಡುವೆ ನವೆಂಬರ್ ತಿಂಗಳು ಪೂರ್ತಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ ನೇತೃತ್ವದಲ್ಲಿ ಹತ್ತು ತಂಡಗಳು 'ಆಗ್ರಹ ಅಭಿಯಾನ' ಆರಂಭಿಸಲಾಗಿದೆ. ಕನ್ನಡಿಗರಿಗೆ ನ್ಯಾಯ ಸಮ್ಮತ ಉದ್ಯೋಗ ಪಾಲು ದೊರೆಯಬೇಕೆಂದು ಕರವೇ ಶಾಂತಿಯುತ ಅಭಿಯಾನಕ್ಕೆ ತಮಿಳುನಾಡು ಐಪಿಎಸ್ ಅಧಿಕಾರಿ ವ್ಯಂಗ್ಯವಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.
ಕನ್ನಡಿಗರಿಗಾಗಿ ಕನ್ನಡ ಸಂಘಟನೆ ನಡೆಸಿದ ಅಭಿಯಾನವನ್ನು ತಮಿಳುನಾಡಿನ ಕೇಡರ್ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಅವರು ಪ್ರಶ್ನೆ ಮಾಡಿ ಪೋಸ್ಟ್ ವೊಂದಕ್ಕೆ ಕಾಮೆಂಟ್ ಹಾಕಿದ್ದಾರೆ. ಉದ್ಯೋಗ ಇಲ್ಲದವರು ಉದ್ಯೋಗಿ ಮಾಡುತ್ತಿರುವವರ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ' ಎಂದು ಕರವೇ ಸದಸ್ಯರಿಗೆ ಮಾಡಲು ಕೆಲಸ ಇಲ್ಲ ಎಂದು ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಆಸ್ಪದ ನೀಡಿದೆ.
ನೆಟ್ಟಿಗರಿಂದ ಅಧಿಕಾರಿ ತರಾಟೆ, ಕಾಮೆಂಟ್ ಡಿಲೀಟ್
ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಅನ್ಯಾಯವಾದಾಗ ಕನ್ನಡಿಗರೇ ಪ್ರಶ್ನಿಸಬೇಕು. ಕರವೇಯ ಶಾಂತಿಯುತ ಅಭಿಯಾನವನ್ನು ತಮಿಳುನಾಡಿನ ಅಧಿಕಾರಿ ಪ್ರಶ್ನಿಸುವ ನೈತಿಕತೇ ಏನಿದೆ? ಎಂದು ನೆಟ್ಟಿಗರು ಗುಡುಗಿದ್ದಾರೆ. ಕನ್ನಡಿಗರಾದ ನಾವು ನಮ್ಮ ಹಕ್ಕಿನ ಕುರಿತು ಧ್ವನಿ ಎತ್ತುವುದು ತಪ್ಪೇ? ಎಂದು ಅಧಿಕಾರಿ ವಿರುದ್ಧ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ.
ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ಐಟಿ ಉದ್ಯಮಿ ಅರುಣ್ ಜಾವಗಲ್ ಅವರು ಸಹ ತಮಿಳುನಾಡು ಅಧಿಕಾರ ನಡೆಗೆ ಕಿಡಿ ಕಾರಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 'ಕನ್ನಡಿಗರ ನೇಮಕಾತಿ ಮಾಹಿತಿ ಪಡೆಯುವುದು ಕೆಲಸಕ್ಕೆ ಅಡ್ಡಿಪಡಿಸಿದಂತೆಯೇ?. ಬೇರೆ ರಾಜ್ಯದ ಅಧಿಕಾರಿಗೆ ಕರ್ನಾಟಕದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಏನು ಹಕ್ಕು? ಎಂದು ಗುಡುಗಿದ್ದಾರೆ. ಮಾತ್ರವಲ್ಲದೇ ತಮ್ಮ ಎಕ್ಸ್ ಪೋಸ್ಟ್ ಅನ್ನು ತಮಿಳುನಾಡು ಸಿಎಂ ವಿಜಯ್ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ಇಷ್ಟೆಲ್ಲ ಆಗುತ್ತಿದ್ದಂತೆ ವ್ಯಂಗ್ಯವಾಡಿದ್ದ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ತಮ್ಮ ವಿವಾದಿತ ಕಾಮೆಂಟ್ ಅನ್ನು ಎಕ್ಸ್‌ನಿಂದ ಡಿಲಿಟ್ ಮಾಡಿದ್ದಾರೆ.
The deletion of his comment by IPS officer Dhanush Kumar serves as a reminder that civil servants should refrain from interfering in matters unrelated to their official responsibilities.Mr Dhanush Kumar, KRV members are not jobless people. They have a long history of fighting for employment rights, not just for Kannadigas but also for non-Hindi-speaking people across India.KRV understands the importance of businesses, investment and job creation. We equally understand the importance of Kannadigas’ employment rights and know how to balance both.KRV fought for Kannadigas’ jobs at the AGS office in Bengaluru and won that campaign. Our protests over South Western Railway recruitment also supported non-Hindi-speaking candidates seeking the right to write railway recruitment exams in their own languages.We know why recruitment data matters. Understanding how many Kannadigas are employed in IT companies and other industries is essential to identifying gaps and demanding fair opportunities.KRV is not against businesses or job creation. Our demand is for transparency in recruitment, fair opportunities for Kannadigas and economic growth that benefits Karnataka.
— ಅರುಣ್ ಜಾವಗಲ್ | Arun Javgal (@ajavgal) November 2, 2026
'ಕರವೇ' ಅಭಿಯಾನದ ಉದ್ದೇಶವೇನು?
ನವೆಂಬರ್ ಒಂದು ತಿಂಗಳು ಪೂರ್ತಿ ಕರವೇಯಿಂದ ಐಟಿ ಕಂಪನಿಗಳಿಗೆ ಭೇಟಿ ನೀಡಲಾಗುತ್ತದೆ. ಅಭಿಯಾನದಲ್ಲಿ ಕರವೇ ಸದಸ್ಯರ ನಿಯೋಗವು ನಗರದ ಐಟಿ, ಬಿಟಿ ಕಂಪನಿಗಳ ಮುಖ್ಯಸ್ಥರು, ಎಚ್‌ಆರ್ ಬಳಿ ಕನ್ನಡಿಗರಿಗೆ ನೀಡಿದ ಉದ್ಯೋಗ ಮಾಹಿತಿ, ದತ್ತಾಂಶವನ್ನು ಸಂಗ್ರಹಿಸಲಿದ್ದಾರೆ. ಅಲ್ಲದೇ ಅಲ್ಲಿನ ಕನ್ನಡಿಗರ ಉದ್ಯೋಗಿಗಳನ್ನು ಮಾತನಾಡಿಸಲಿದ್ದಾರೆ.
ಲಭ್ಯ ಮಾಹಿತಿಯನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನೀಡಿ ಕನ್ನಡಿಗರಿಗೆ ನ್ಯಾಯಸಮ್ಮತ ಉದ್ಯೋಗ ಎಲ್ಲ ಕಂಪನಿ, ರಂಗದಲ್ಲೂ ದೊರೆಯಬೇಕು. ಯಾರಿಗೂ ಅನ್ಯಾಯವಾಗದಂತೆ ನಿಯಮ ರೂಪಿಸಲು ಆಗ್ರಹಿಸಲಿದ್ದಾರೆ.


Click it and Unblock the Notifications
