SWR: ಬೆಂಗಳೂರು-ಬೀದರ್ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್...Special Trains
ಬೆಂಗಳೂರು, ಆಗಸ್ಟ್ 23: ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೆಚ್ಚಿನ ಸಂಖ್ಯೆ ಪ್ರಯಾಣಿಕರು ಸಂಚಾರ ಮಾಡಲಿದ್ದು, ಅವರಿಗೆ ಅನುಕೂಲ ಆಗುವಂತೆ ನೈಋತ್ಯ ರೈಲ್ವೆ ವಿಶೇಷ ರೈಲಿನ ಸೇವೆ ಆರಂಭಿಸಿದೆ. ಈಗಾಗಲೇ ಭಾರತೀಯ ರೈಲ್ವೆ ವಿವಿಧ ಮಾರ್ಗಗಳಲ್ಲಿ ಒಟ್ಟು 380 ಟ್ರಿಪ್ ಸೇವೆ ಆರಂಭಿಸಿದೆ. ಇದೀಗ ನೈಋತ್ಯ ರೈಲ್ವೆ (South Western Railway) ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ. ಎಲ್ಲಿಂದ ಎಲ್ಲಿಗೆ, ಮಾರ್ಗ, ನಿಲುಗಡೆ ನಿಲ್ದಾಣಗಳು, ವೇಳಾಪಟ್ಟಿ ವಿವರ ಇಲ್ಲಿದೆ.
ಗಣೇಶ ಹಬ್ಬದ ಸಂಚಾರ ದಟ್ಟಣೆ ನಿವಾಸರಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೈಋತ್ಯ ರೈಲ್ವೆಯು ರಾಜಧಾನಿ ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಬೀದರ್‌ಗೆ ವಿಶೇಷ ರೈಲು ಸೇವೆ ನೀಡಲಿದೆ. ಈ ರೈಲು ಆಗಸ್ಟ್ 26 ಸಂಚಾರ ಮಾಡಲಿದೆ.

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬೀದರ್ ವಿಶೇಷ ಎಕ್ಸ್‌ಪ್ರೆಸ್ ರೈಲು (06549) ಇದೇ ಆಗಸ್ಟ್ 26ರಂದು ಮಂಗಳವಾರ SMVT ಬೆಂಗಳೂರಿನಿಂದ ರಾತ್ರಿ 21:15 ಗಂಟೆಗೆ ಹೊರಡಲಿದೆ. ಮಾರನೇ ದಿನ ಬುಧವಾರ ಬೆಳಗ್ಗೆ 11:30 ಗಂಟೆಗೆ ಬೀದರ್ ನಿಲ್ದಾಣ ತಲುಪುತ್ತದೆ.
ಮರಳಿ ಅಲ್ಲಿಂದ ಬೀದರ್-SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (06550) ಆಗಸ್ಟ್ 27 ರಂದು ಬುಧವಾರ ಬೀದರ್‌ನಿಂದ ಮಧ್ಯ 14:30 ಗಂಟೆಗೆ ಹೊರಟು ಗುರುವಾರ ಬೆಳಗ್ಗೆ 04:30 ಗಂಟೆಗೆ SMVT ಬೆಂಗಳೂರು ತಲುಪಲಿದೆ. ಇದು ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುವ ಪ್ರಯಾಣೀಕರಿಗೆ ಒಂದು ಟ್ರಿಪ್ ಸೇವೆ ನೀಡಲಿದೆ. ಯಾವೆಲ್ಲ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎಂಬ ಮಾಹಿತಿ ಮುಂದಿದೆ.
ಬೆಂಗಳೂರು ಎಸ್‌ಎಂವಿಟಿ ನಂತರ ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಮತ್ತು ಹುಮನಾಬಾದ್ ರೈಲು ನಿಲ್ದಾಣಗಳಲ್ಲಿ ಎರಡು ಕಡೆಗಳಲ್ಲಿ ನಿಲುಗಡೆ ನೀಡಲಿದೆ.
ಈ ರೈಲು ಎಲ್ಲ ವರ್ಗದ ಬೋಗಿ ಸೇರಿ ಒಟ್ಟು 22 ಬೋಗಿಗಳನ್ನು ಹೊಂದಿರಲಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬೇಕು. ಇಲ್ಲವೇ NTES ಅಪ್ಲಿಕೇಶನ್ ಬಳಸಿ ಅಥವಾ 139 ಅನ್ನು ಡಯಲ್ ಮಾಡುವ ರೈಲಿ ಸಮಯ, ವಿವರ ತಿಳಿಯಬಹುದು. IRCTC ಆಪ್ ಮೂಲಕ ನೀವು ಮುಂಗಡ ಟಿಕೆಟ್ ಕಾಯ್ದಿರಿಸಬಹುದು.












Click it and Unblock the Notifications