ಸ್ವರಮೇಧ ಸಂಗೀತ ಶಾಲೆ ವಾರ್ಷಿಕೋತ್ಸವ ಸುಸಂಪನ್ನ
ಬೆಂಗಳೂರು, ಮಾರ್ಚ್ 9: ಒಳ್ಳೆ ಗುರು ಸಿಕ್ಕರೆ ಮಾತ್ರವೇ ಶಿಷ್ಯ ಅದ್ಭುತವಾದದ್ದನ್ನು ಸಾಧಿಸಲು ಸಾಧ್ಯ ಎಂದು ಹಿರಿಯ ಗಾಯಕ ವಿದ್ವಾನ್ ಅನಂತ ಅವಧಾನಿ ಹೇಳಿದರು.
ಮಾರ್ಚ್ 4 ರಂದು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಸ್ವರಮೇಧ ಇಂಟರ್ ನ್ಯಾಶನಲ್ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಅವರು ಅಕಾಡೆಮಿಯ ಸ್ಥಾಪಕ ಚಿನ್ಮಯ ಎಂ ರಾವ್ ತಾವೂ ಸಾಧಿಸಿ, ತಮ್ಮ ಶಿಷ್ಯರೂ ಸಾಧಿಸಲು ಪ್ರೇರಣೆಯಾಗಲಿ ಎಂದು ಹಾರೈಸಿದರು.[ಸಂಗೀತಪ್ರಿಯರಿಗಾಗಿ ಸ್ವರಮೇಧ ವಾರ್ಷಿಕೋತ್ಸವ]

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದ್ಯಮಿ ವಾ.ಆರ್.ಅರುಣಾಚಲಂ ಮಾತನಾಡಿ, ಸಂಗೀತ ಒಂದು ಮಹಾನ್ ಶಕ್ತಿ, ಇದರಿಂದ ಜೀವನದ ನೋವುಗಳನ್ನೂ ಮರೆಯಬಹುದು ಎಂದರು. ಸುಗಮ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್, ಚಿಂತಕ ಎಚ್.ಎನ್.ರಾಘವೇಂದ್ರ ರಾವ್, ರಾಜರಾಜೇಶ್ವರಿ ನಗರದ ಬಿಬಿಎಂಪಿ ಸದಸ್ಯೆ ನಳಿನಿ ಮಂಜುನಾಥ್, ಕಿರುತೆರೆ ನಟ ರಾಜೇಶ್ ಧೃವ ಅಕಾಡೆಮಿಯ ಯಶಸ್ಸಿಗೆ ಹಾರೈಸಿದರು.

ಇದೇ ಸಂದರ್ಭದಲ್ಲಿ ಮೂರು ಗಂಟೆಗಳ ಕಾಲ ಅಕಾಡೆಮಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಂಗೀತ ಕಛೇರಿ ಅಭೂತಪೂರ್ವವಾಗಿತ್ತು. ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದಕ್ಕಾಗಿ ಗಾಯಕ ಚಿನ್ಮಯ ಎಂ.ರಾವ್ 2015ರಲ್ಲಿ ಸ್ಥಾಪಿಸಿದ ಸ್ವರಮೇಧ ಇಂಟರ್ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ ನೂರಾರು ಮಕ್ಕಳಿಗೆ ಸಂಗೀತ ಜ್ಞಾನ ಉಣಬಡಿಸುತ್ತಿದೆ.











Click it and Unblock the Notifications