ಬಾಗಿಲು ಮುಚ್ಚಿದ ಸ್ವರಾಜ್ ಸುದ್ದಿ ವಾಹಿನಿ, ಪೊಲೀಸರಿಗೆ ದೂರು
ಬೆಂಗಳೂರು, ಸೆಪ್ಟೆಂಬರ್ 24: ಸ್ವರಾಜ್ ನ್ಯೂಸ್ ಕನ್ನಡ ಸುದ್ದಿವಾಹಿನಿಗೆ ರಾತ್ರೋ ರಾತ್ರಿ ಬೀಗ ಜಡಿಯಲಾಗಿದೆ. ಇದರಿಂದಾಗಿ 260ಕ್ಕೂ ಹೆಚ್ಚು ಪತ್ರಕರ್ತರು ಬೀದಿಗೆ ಬಿದ್ದಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಕೆಲ ಪತ್ರಕರ್ತರು ಧೈರ್ಯ ಮಾಡಿ, ಪೊಲೀಸರ ಮೊರೆ ಹೊಕ್ಕಿದ್ದಾರೆ.
ಹೈದರಾಬಾದ್ ಮೂಲದ ಹೀರಾ ಗ್ರೂಪ್ಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಎಂ.ಇ.ಪಿ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ಒಡೆತನದ ಟಿಟಿಸಿ ನ್ಯೂಸ್ ಅಧೀನದಲ್ಲಿ ಆರಂಭಗೊಂಡಿದ್ದ ಸ್ವರಾಜ್ ನ್ಯೂಸ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿ, ಬಂದ್ ಆಗಿದೆ.
ಜನವರಿ 1 ರಿಂದ ಟಿಟಿಸಿ ನ್ಯೂಸ್ ಚಾನಲ್ ಎಂಬ ಹೆಸರಿನಲ್ಲಿ ಹೊಸ ಸುದ್ದಿ ವಾಹಿನಿ ಪ್ರಾರಂಭವಾಗಿತ್ತು. ಮಾರ್ಚ್ 17 ರಿಂದ ಸ್ವರಾಜ್ ಎಕ್ಸ್‌ಪ್ರೆಸ್ ಅಂತ ಹೆಸರು ಬದಲಾಯಿಸಲಾಯಿತು. ಅಂದೇ. ಸ್ಯಾಟಿಲೈಟ್ ಪ್ರಸಾರ ಪ್ರಾರಂಭವಾಯಿತು.

ಸ್ವರಾಜ್ ನ್ಯೂಸ್ ಎಕ್ಸ್‌ಪ್ರೆಸ್ ಹೀರಾ ರೀಟೇಲ್ ಹೈದರಾಬಾದ್ ಪ್ರೈವೇಟ್ ಲಿಮಿಟೆಡ್ ಅಂತ ಪ್ರಾರಂಬಿಸಲಾಗಿತ್ತು. ಬೆಂಗಳೂರು ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಕೂಡ 260 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈಗ ಏಕೇಕಿ ಯಾವುದೇ ಯಾವುದೇ ಮುನ್ಸೂಚನೆ ನೀಡದೆ, ಬಾಗಿಲು ಬಂದ್ ಮುಚ್ಚಲಾಗಿದೆ.
ಸಿಬ್ಬಂದಿಗಳಿಗೆ ನೀಡಬೇಕಾದ ಸಂಬಳ ಹಾಗೂ ಸವಲತ್ತುಗಳನ್ನ ನೀಡದೆ ರಾತ್ರೋ ರಾತ್ರಿ ಬೀಗ ಜಡಿದಿದ್ದಾರೆ. ಇನ್ನೂ ಇಲ್ಲಿರುವ ಸಿಬ್ಬಂದಿಗಳಿಗೆ ಆಗಸ್ಟ್ ತಿಂಗಳ ಸಂಬಳವೂ ಕೂಡ ನೀಡದೆ ವಂಚನೆ ಮಾಡಿದ್ದಾರೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣೆ ಗೋಸ್ಕರ ಈ ಚಾನಲ್ ಅನ್ನ ಬಳಸಿಕೊಂಡು ಪತ್ರಕರ್ತರಿಗೆ ಮೋಸ ಮಾಡಿದ್ದಾರೆ.

ಇನ್ನೂ ಈ ಎಲ್ಲಾ ಅಕ್ರಮ ಹಾಗೂ ಇಲ್ಲಿ ಆಗಿರುವ ಅನ್ಯಾಯದ ಬಗ್ಗೆ ಸಂಸ್ಥೆಯ ಮುಖ್ಯ ಸಂಪಾದಕ ಸಮೀ ಉಲ್ಲಾ ಯಾವುದೇ ಸಿಬ್ಬಂದಿಗಳಿಗೆ ಸ್ಪಂದಿಸುತ್ತಿಲ್ಲ. ಸಂಸ್ಥೆಯ ಸಂಪಾದಕಿ ನಾಝಿಯಾ ಕೌಸರ್ ತಮ್ಮದೇ ಸಮುದಾಯದ ಸಂಸ್ಥೆಯ ಮುಖ್ಯಸ್ಥೆ ಡಾ. ನೌಹೀರಾ ಶೇಖ್ ಪರ ಕಾರ್ಯ ನಿರ್ವಹಿಸುತ್ತಿದ್ದರು.
ಒಟ್ಟಾರೆ, ಐವರಿಂದ ನಮಗೆ ಅನ್ಯಾಯವಾಗಿದೆ ಎಂದು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 11ರಂದು ದೂರು ದಾಖಲಾಗಿಸಲಾಗಿದೆ. ಇದಲ್ಲದೆ, ಕಾರ್ಮಿಕ ಇಲಾಖೆಗೂ ದೂರು ಸಲ್ಲಿಸಲು ನೊಂದ ಪತ್ರಕರ್ತರು ಮುಂದಾಗಿದ್ದಾರೆ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ












Click it and Unblock the Notifications