ಬೆಂಗ್ಳೂರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಕುಣಿತ ನಿಲ್ಸಕ್ಕಾಗಲ್ಲ!

ಬೆಂಗಳೂರು, ಡಿಸೆಂಬರ್ 18: ಬೆಂಗ್ಳೂರಲ್ಲಿ ಸೇಸಮ್ಮ ಸನ್ನಿ ಲಿಯೋನ್ ಬಂದೇ ಬರ್ತಾಳೆ, ಡಿಕೆ ಚಿತ್ರದ ಹಾಡಿಗೆ ಸ್ಟೆಪ್ ಹಾಕ್ತಾಳೆ ಎಂದು 'ಸನ್ನಿ ನೈಟ್' ಕಾರ್ಯಕ್ರಮದ ಅಯೋಜಕರು ಹೇಳಿದ್ದಾರೆ. ಈ ಮೂಲಕ ಕರವೇ, ಸರ್ಕಾರದ ಪ್ರತಿರೋಧಕ್ಕೆ ಸವಾಲು ಹಾಕಿದ್ದಾರೆ.

ಸೇಸಮ್ಮ ಸಾಂಗಿನಲ್ಲಿ ಕುಣಿದಿರುವ ಸನ್ನಿ ಲಿಯೋನ್ ನಾನು ಇಲ್ಲಿಗೆ ಬರೋಕೆ ತುಂಬಾ ತೊಂದರೆ , ಎನ್ನತ್ತಾಳೆ. ಅದಕ್ಕೆ ಹೀರೋ ಪ್ರೇಮ್ ಸೇರಿ, ಡ್ಯಾನ್ಸ್ ಮಾಡುವವರು ಹೀಗೆ ಹೇಳ್ತಾರೆ.. 'ನೀ ಹೂಂ ಅಂದ್ರೆ ಗೌರ್ಮೆಂಟ್ ಬೀಳಿಸ್ಬಿಡ್ತೀವಿ...' ಅನ್ನೋ ಸಾಲು ಇದೆ.

Sunny Leone Will Dance to Kannada Item Song, Organisers

ಈ ಸಾಲು ಏನಾದರೂ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿತೋ ಏನೋ..ಒಟ್ಟಾರೆ ಸನ್ನಿ ಬರಬಾರದು ಬಂದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕರವೇ ಕಾರ್ಯಕರ್ತರು ಗುಡುಗಿದ್ದಾರೆ. ಇದಕ್ಕೆ ತಕ್ಕಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಬೆಂಗಳೂರಿನ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಕೂಡಾ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಡಿಸೆಂಬರ್ 31ರ ರಾತ್ರಿ ಸನ್ನಿ ನೈಟ್ ಆಯೋಜಿಸಿರುವ ಜಾಹೀರಾತು ಸಂಸ್ಥೆ ಟೈಮ್ಸ್ ಕ್ರಿಯೇಷನ್ ನ ಹರೀಶ್ ಅವರು ಮಾತ್ರ ಸನ್ನಿ ಲಿಯೋನ್ ಕುಣಿಯುವುದನ್ನು ತಡೆಯಲು ಸಾಧ್ಯವಿಲ್ಲ. ಇದೊಂದು ಫ್ಯಾಮಿಲಿ ಪೋಗ್ರಾಂ, ನಂಗಾ ನಾಚ್ ಎಂದು ತಪ್ಪಾಗಿ ಭಾವಿಸಿದ್ದಾರೆ. ನಾನು ಕೂಡಾ ಕನ್ನಡಿಗ, ಸಂಸ್ಕೃತಿ ಬಗ್ಗೆ ಗೌರವವಿದೆ. ಕಲಾವಿದರಿಗೆ ನಾವು ಗೌರವ ನೀಡಬೇಕು ಎಂದಿದ್ದಾರೆ.

ಪ್ರೇಮ್ ನಟಿಸಿ, ನಿರ್ದೇಶಿಸಿದ ಡಿಕೆ ಚಿತ್ರದ ಸೇಸಮ್ಮ ಸಾಂಗ್ ನಲ್ಲೂ ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ದನಿ ಎತ್ತುವ ಸಾಲುಗಳಿವೆ. ಈ ಕಾರ್ಯಕ್ರಮಕ್ಕೆ 2 ರಿಂದ 3 ಕೋಟಿ ರು ಹೂಡಿಕೆ ಮಾಡಲಾಗಿದೆ.ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ, ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಎಂಎಸ್ ಹರೀಶ್ ಅವರು ಖಾಸಗಿ ಚಾನೆಲ್ ಜತೆ ಮಾತನಾಡುತ್ತಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+