ಬೇಸಿಗೆ ಎಫೆಕ್ಟ್: ಬೆಂಗಳೂರಿನ ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಏಪ್ರಿಲ್ 27: ಹೆಚ್ಚುತ್ತಿರುವ ಬೇಸಿಗೆಯ ತಾಪಮಾನ ಪರಿಣಾಮ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರಿಗೆ ಅಪಾರ ಬೇಡಿಕೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಬಾಣಸವಾಡಿಯ ಒಎಂಬಿಆರ್ ಲೇಔಟ್ ನಿವಾಸಿಗಳು ಒಂದು ತಿಂಗಳಿನಿಂದ ನಿತ್ಯವೂ ನೀರು ಪೂರೈಕೆ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಈ ಹಿಂದೆ ವಾರಕ್ಕೆ ಮೂರು ಬಾರಿ ನೀರು ಪಡೆಯುತ್ತಿದ್ದೆವು. ಈಗ ಇದು ಒಂದು ತಿಂಗಳಿನಿಂದ ಸತತ 10 ದಿನಗಳಿಗೊಮ್ಮೆ ನೀರು ಬರುತ್ತಿದೆ. ನಮಗೆ ನೀರು ಸಿಗುತ್ತಲೇ ಇಲ್ಲ. ಕೆಲವೊಮ್ಮೆ ನೀರನ್ನು ಅಲ್ಪ ಸಮಯ ಮಾತ್ರ ಅದು ಸ್ಪಲ್ವೇ ಸರಬರಾಜು ಮಾಡಲಾಗುತ್ತಿದೆ ಎಂದು ಒಎಂಬಿಆರ್ ಲೇಔಟ್ ನಿವಾಸಿಯೊಬ್ಬರು ತಿಳಿಸಿದರು.

ವಿದ್ಯಾಮಾನ್ಯನಗರ, ಅಂದ್ರಹಳ್ಳಿ, ಕಮ್ಮನಹಳ್ಳಿ ಮುಂತಾದ ಪ್ರದೇಶಗಳಿಂದಲೂ ಇದೇ ರೀತಿಯ ದೂರುಗಳು ಬರುತ್ತಿವೆ. ಈ ಬಗ್ಗೆ ನೀರು ಸರಬರಾಜು ಏಕೆ ತಡೆಯಾಗುತ್ತಿದೆ ಎಂದು ನಮಗೆ ಖಚಿತವಾಗಿಲ್ಲ. ಬಹುಶಃ ಬೇಡಿಕೆ ಹೆಚ್ಚಿರಬಹುದು. ಆದರೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ವಿದ್ಯಾಮಾನ್ಯ ನಗರದ ನಿವಾಸಿಯೊಬ್ಬರು ತಿಳಿಸಿದ್ದಾರೆ ಎಂದು ಡಿಎಚ್ ವರದಿ ಮಾಡಿದೆ.
ನಮಗೆ ಆಗುತ್ತಿರುವ ನೀರಿನ ಹಾಹಾಕಾರದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕಾವೇರಿ ಭವನದಲ್ಲಿ (ಬಿಡ್ಲುಎಸ್‌ಎಸ್‌ಬಿ ಪ್ರಧಾನ ಕಚೇರಿ) ಅಧಿಕಾರಿಗಳನ್ನು ಭೇಟಿ ಮಾಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ನೀರು ನಮಗೆ ಮೂಲಭೂತ ಅವಶ್ಯಕತೆಯಾಗಿದೆ. ಯಾವಾಗ ನೀರು ಸರಬರಾಜು ಬರುತ್ತದೆ ಎಂದು ಅಧಿಕಾರಿಗಳು ನಮಗೆ ತಿಳಿಸಬೇಕು. ನಾವು ಪ್ರತಿ ಬಾರಿ ದೂರು ನೀಡಿದಾಗಲೂ ಅವರು ನಮಗೆ ಕೆಲಸಗಾರ ರಜೆಯಲ್ಲಿದ್ದಾರೆ ಎಂಬ ಸಣ್ಣ ಕಾರಣಗಳನ್ನು ನೀಡುತ್ತಾರೆ. ಇಲ್ಲಿ ಕೆಲಸಗಾರರ ಕೊರತೆ ಇದೆಯೇ ಎಂಬುದು ನಮಗೂ ಗೊತ್ತಿಲ್ಲ ಎಂದರು.

ಕೆಲವು ನಿವಾಸಿಗಳು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡ್ಲುಎಸ್‌ಎಸ್‌ಬಿ) ಅಧಿಕಾರಿಗಳು ಖಾಸಗಿ ಟ್ಯಾಂಕರ್‌ಗಳೊಂದಿಗೆ ಶಾಮೀಲಾಗಿ ವ್ಯಾಪಾರ ಮಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯ ಬಿಡ್ಲುಎಸ್‌ಎಸ್‌ಬಿ ಅಧಿಕಾರಿಯೊಬ್ಬರು ನೀರಿನ ಕೊರತೆಯಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿ ಬದಲಿಗೆ ತಾಂತ್ರಿಕ ಅಡಚಣೆಗಳು ಮತ್ತು ವಿದ್ಯುತ್ ಅಡೆತಡೆಗಳಂತಹ ಸಮಸ್ಯೆಗಳಿವೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ಪೂರ್ವ ಮತ್ತು ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಮಾತ್ರ ಸಮಸ್ಯೆ ಇದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗುವುದರ ಪರಿಣಾಮವಾಗಿ ನೀರಿನ ವ್ಯತ್ಯಯ ಕೊನೆಯಲ್ಲಿ ಪ್ರದೇಶಗಳಲ್ಲಿ ಹೆಚ್ಚಾಗಬಹುದು. ಆದರೆ ಶೀಘ್ರವೇ ಈ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಇಂಜಿನಿಯರ್-ಇನ್-ಚೀಫ್ ಹೇಳಿದ್ದಾರೆ.












Click it and Unblock the Notifications