Get Updates
Get notified of breaking news, exclusive insights, and must-see stories!

ಮೇ 18 ರಂದು 'ಸಡನ್ನಾಗ್ ಸತ್ತೋದ್ರೆ?!' ಕಾಮಿಡಿ ಡ್ರಾಮಾ ಪ್ರದರ್ಶನ

ನಾಟಕ : ಸಡನ್ನಾಗ್ ಸತ್ತೋದ್ರೆ?!

ರಚನೆ, ನಿರ್ದೇಶನ, ನಿರ್ಮಾಣ : ಎಂ ಎಂ ಶೈಲೇಶ್ ಕುಮಾರ್

ತಂಡ : ಸೈಡ್ ವಿಂಗ್ ಬೆಂಗ್ಳೂರು

ಸ್ಥಳ : ಕೆ ಹೆಚ್ ಕಲಾ ಸೌಧ, ಹನುಮಂತನಗರ

ಸಮಯ : ಸಂಜೆ 5 ಹಾಗೂ 7.30 (ಎರಡು ಪ್ರದರ್ಶನ)

ಜೀವನವನ್ನು ವಿವರಿಸಿ, ವರ್ಣಿಸಿ ಹಲವಾರು ಕವಿಗಳು, ಪಂಡಿತರು ತಮ್ಮದೇ ವ್ಯಾಖ್ಯಾನ ನೀಡಿ ಬರೆದಿದ್ದಾರೆ. ಎಲ್ಲರೂ ಜೀವನವನ್ನು ಅದ್ಭುತಗಳ ಸಾಲಿಗೆ ಸೇರಿಸಿ ಸಂತಸದಿಂದ ಅನುಭವಿಸಲು ಹೇಳುತ್ತಾರೆ. ಆದರೆ, ಜೀವನದ ಜಂಜಾಟಗಳಲ್ಲಿ ಸಿಲುಕ, ಯಾಂತ್ರಿಕ ಬದುಕನ್ನು ಸಾಗಿಸುತ್ತಿರುವ ಇಂದಿನ ಮನುಷ್ಯ ಜೀವನದ ಖುಷಿಯನ್ನು ಅನುಭವಿಸುವುದ ಮರೆತು, ಪ್ರತಿಷ್ಠೆ, ಸಂಪಾದನೆ ಎಂಬ ದೊಡ್ಡ ವಿಚಾರಗಳ ಹಿಂದೆ ಬಿದ್ದು ಸಣ್ಣ ಸಣ್ಣ ಸಂಗತಿಗಳಲ್ಲಿನ ಸಂತಸಗಳು ಅವನಿಗೆ ಕಾಣದಾಗಿದೆ. ಇದರ ಕುರಿತಾಗಿ ರಚಿಸಿರುವ ನಾಟಕ 'ಸಡನ್ನಾಗ್ ಸತ್ತೋದ್ರೆ?!'.

'ಸಡನ್ನಾಗ್ ಸತ್ತೋದ್ರೆ?!' ನಾಟಕ ಈಗಾಗಲೇ ಪ್ರೇಕ್ಷಕರ ಪ್ರೀತಿ ಪಡೆದಿದೆ. ಬೆಂಗಳೂರಿನಲ್ಲಿ ಏಳೆಂಟು ಪ್ರದರ್ಶನ ಆಗಿರುವ ಈ ನಾಟಕದ ಎಲ್ಲ ಶೋಗಳು ಹೌಸ್ ಫುಲ್ ಆಗಿವೆ. ಇಂತಹ ಸದಭಿರುಚಿಯ ನಾಟಕ ಮೇ 18 ರಂದು ಮತ್ತೆ ಪ್ರದರ್ಶನ ಆಗುತ್ತಿದೆ.

Suddennag Sathodre kannada play will be held on May 18th

ಸಾವು ಎಂದರೆ ಅಪಶಕುನ ಎಂದು ಭಾವಿಸುವವರ ನಡುವೆ ಶೈಲೇಶ್ ಕುಮಾರ್ ಎಂ.ಎಂ. ಅವರು ಅದೇ ಸಾವನ್ನು ಉಪಯೋಗಿಸಿ, ಬದುಕನ್ನು ಸುಂದರವಾಗಿಸಿಕೊಳ್ಳುವತ್ತ ಮಾಡಬೇಕಾದ ಕೆಲಸಗಳನ್ನು ತಿಳಿಸುತ್ತಾರೆ. ಇಡೀ ನಾಟಕ ಹಾಸ್ಯಮಯವಾಗಿದ್ದು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ಸುಳ್ಳಲ್ಲ.

Suddennag Sathodre kannada play will be held on May 18th

ಎಂದಿನಂತೆ, ನಿರ್ದೇಶಕ ಶೈಲೇಶ್ ಕುಮಾರ್ ಅವರು ಗಂಭೀರ ವಿಚಾರಗಳನ್ನು ಹಾಸ್ಯಮಯವಾಗಿ ಹೇಳುವ ತಂತ್ರವನ್ನು ಇಲ್ಲಿಯೂ ಬಳಸಿ ಯಶಸ್ವಿಯಾಗಿದ್ದಾರೆ. ಪ್ರೇಕ್ಷಕರನ್ನುನಕ್ಕು ನಗಿಸಿ, ಜೀವನದ ಮುಖ್ಯ ಸಂದೇಶವೊಂದನ್ನು ತೆಗೆದುಕೊಂಡು ಹೋಗುವ ಹಾಗೆ ಮಾಡುವ ಒಂದು ಸುಂದರ ನಾಟಕ 'ಸಡನ್ನಾಗ್ ಸತ್ತೋದ್ರೆ?!'.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+