ಬೀದಿನಾಯಿಗಳಿಗೂ ಬಂತು ಭಾರಿ ಡಿಮ್ಯಾಂಡ್..!

ಬೆಂಗಳೂರು, ಜನವರಿ 25 : ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಅಂತಹ ಅಪರಾಧ ಪ್ರಕರಣಗಳನ್ನು ಭೇದಿಸಲು ಇಲಾಖೆಯಲ್ಲಿ ರಚಿತವಾಗಿರುವ ನುರಿತ ಶ್ವಾನದಳದ ಸಹಾಯವನ್ನೂ ಪೊಲೀಸರು ಪಡೆಯುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ವಾನಗಳು ವಿಶೇಷ ತರಬೇತಿ ನೀಡಲಾಗಿರುತ್ತೆ. ವಿಶೇಷ ತಳಿಯ ಶ್ವಾನಗಳನ್ನು ಮಾತ್ರ ಈ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇವುಗಳನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತದೆ.

ಆದರೆ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದಕ್ಕೆ ಬೀದಿನಾಯಿಗಳನ್ನು ಏಕೆ ಬಳಸಿಕೊಳ್ಳಬಾರದು ಎಂದು ವಿಚಾರ ಮಾಡಿರುವ ನಮ್ಮ ಬೆಂಗಳೂರು ಪೊಲೀಸ್, ತಮ್ಮ ಶ್ವಾನದಳದಲ್ಲಿ ಬೀದಿನಾಯಿಗಳನ್ನೂ ಸೇರ್ಪಡೆ ಮಾಡಿಕೊಳ್ಳಲು ಇದೀಗ ಮುಂದಾಗಿದ್ದಾರೆ.

50 ಬೀದಿ ನಾಯಿಗಳು ಸಿದ್ಧ

50 ಬೀದಿ ನಾಯಿಗಳು ಸಿದ್ಧ

ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೇನೂ ಬರವಿಲ್ಲ. ಆದರೆ, ಬೀದಿ ನಾಯಿಗಳಲ್ಲಿಯೂ ಚುರುಕು ಬುದ್ದಿಯುಳ್ಳ ನಾಯಿಗಳು ಅಪರಾಧ ಪ್ರಕರಣಗಳ ಬೇಧಿಸುವಲ್ಲಿ ಪೊಲೀಸರಿಗೆ ಖಂಡಿತ ಸಹಾಯ ಮಾಡುತ್ತಾವೆ ಎಂದು 50 ಬೀದಿ ನಾಯಿಗಳನ್ನು ತೆಗೆದುಕೊಂಡು ಅವುಗಳಿಗೆ ಈಗಾಲೇ ಇಲಾಖೆಯಲ್ಲಿರುವ ಶ್ವಾನದಳದ ರೀತಿ ತರಬೇತಿ ನೀಡುತ್ತಿದ್ದಾರೆ. ಇದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸಲಹೆ ಮೇಲೆ ಆಗಿದೆ ಎಂಬುದು ತಿಳಿದು ಬಂದಿದೆ.

ಬೀದಿನಾಯಿಗಳಿಗೆ ವ್ಯಾಕ್ಸಿಂಗ್, ಕ್ಲಿನಿಂಗ್, ವಾಕಿಂಗ್!

ಬೀದಿನಾಯಿಗಳಿಗೆ ವ್ಯಾಕ್ಸಿಂಗ್, ಕ್ಲಿನಿಂಗ್, ವಾಕಿಂಗ್!

ಈ ಐವತ್ತು ಬೀದಿನಾಯಿಗಳಿಗೆ ದಿನವೂ ವ್ಯಾಕ್ಸಿಂಗ್, ಕ್ಲಿನಿಂಗ್, ವಾಕಿಂಗ್, ಜಾಗಿಂಗ್ ಸೇರಿದಂತೆ ಅಪರಾದ ಪ್ರಕರಣಗಳನ್ನು ಪತ್ತೆ ಹಚ್ಚಲು ವೈಜ್ಞಾನಿಕವಾಗಿ ಅವುಗಳಿಗೆ ತರಬೇತಿ ನೀಡಲಾಗುತ್ತಿದೆ. ಸದ್ಯ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಈ ತರಬೇತಿ ನೀಡಲಾಗುತ್ತಿದೆ. ಇದರಲ್ಲಿ 30 ನಾಯಿಗಳು ಸಣ್ಣ ಮರಿಗಳಾಗಿದ್ದು, 20 ನಾಯಿಗಳು ವಯಸ್ಕ ನಾಯಿಗಳಾಗಿವೆ. ಕಳೆದ ಒಂದು ತಿಂಗಳಿನಿಂದ ಈ ತರಬೇತಿ ನಡೆಯುತ್ತಿದೆ.

17 ಪೊಲೀಸ್ ಠಾಣೆಗಳಲ್ಲಿ ನಾಯಿಗಳು

17 ಪೊಲೀಸ್ ಠಾಣೆಗಳಲ್ಲಿ ನಾಯಿಗಳು

ನಗರದ ವಿವಿಪುರಂ ಪೊಲೀಸ್ ಠಾಣೆ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ, ಜಯನಗರ ಪೊಲೀಸ್ ಠಾಣೆ, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ಸೇರಿದಂತೆ 17 ಪೊಲೀಸ್ ಠಾಣಾ ವ್ಯಾಪ್ತಿಯಿಂದ ಬೀದಿನಾಯಿಗಳನ್ನು ಆಯ್ದುಕೊಳ್ಳಲಾಗಿದೆಯಂತೆ. ತರಬೇತಿ ಬಳಿಕ ಅದೇ ಪೊಲೀಸ್ ಠಾಣೆಯಲ್ಲಿ ಈ ಬೀದಿನಾಯಿಗಳು ಆಯಾ ಪೊಲೀಸ್ ಠಾಣೆಯ ಪೊಲೀಸರ ಜೊತೆ ಕಾರ್ಯನಿರ್ವಹಿಸಲಿವೆ.

ಖಡಕ್ ಆಗಿ ತಯಾರು ಮಾಡುತ್ತೇವೆ

ಖಡಕ್ ಆಗಿ ತಯಾರು ಮಾಡುತ್ತೇವೆ

ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಖಟೋಚ್, ''ಬೀದಿನಾಯಿಗಳಿಗೆ ತರಬೇತಿ ನೀಡಿ ಅವುಗಳನ್ನು ಪೊಲೀಸ್ ಶ್ವಾನ ದಳದ ರೀತಿ ಬಳಸಿಕೊಳ್ಳಬೇಕು ಎಂಬ ಉಪಾಯವನ್ನು ಪೊಲೀಸ್ ಆಯುಕ್ತರು ನೀಡಿದ್ದರಿಂದ ಐವತ್ತು ನಾಯಿಗಳನ್ನು ಬೇರೆ ಬೇರೆ ಠಾಣೆಗಳಿಂದ ಆಯ್ಕೆ ಮಾಡಿ ತರಲಾಗಿದೆ. ಅವುಗಳಿಗೆ ನಮ್ಮ ಶ್ವಾನ ದಳದ ಸಿಬ್ಬಂದಿನೇ ತರಬೇತಿ ನೀಡುತ್ತಿದ್ದಾರೆ. ಅವುಗಳನ್ನು ಖಡಕ್ ಆಗಿ ತಯಾರು ಮಾಡಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಬಳಸಿಕೊಳ್ಳುತ್ತೇವೆ'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+