ಗಣರಾಜ್ಯೋತ್ಸವಕ್ಕೆ ಭಟ್ಕಳ್ ಭೀತಿ, ಬಿಗಿ ಬಂದೋಬಸ್ತ್

ಬೆಂಗಳೂರು, ಜ.25: 65ನೇ ಗಣರಾಜ್ಯೋತ್ಸವದ ಆಚರಣೆಗೆ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ದೇಶದ ಮೋಸ್ಟ್ ವಾಂಡೆಟ್ ಉಗ್ರ ಯಾಸಿನ್ ಭಟ್ಕಳ್ ವಿಚಾರಣೆ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಗಣರಾಜ್ಯೋತ್ಸವ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ. ಶುಕ್ರವಾರ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ ಅವರೊಂದಿಗೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿಯನ್ನು ಅವರು ನಡೆಸಿದರು.

Raghavendra H. Auradkar

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಘವೇಂದ್ರ ಜೌರಾದ್ಕರ್, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 3 ಜಂಟಿ ಪೊಲೀಸ್ ಆಯುಕ್ತರು, 11 ಡಿಸಿಪಿಗಳು, ರಾಜ್ಯ ಮೀಸಲು ಪಡೆ 11 ತುಕಡಿಗಳು, ಸಶಸ್ತ್ರದಳದ 7 ತುಕಡಿಗಳು, 1400 ಪೊಲೀಸ್ ಸಿಬ್ಬಂದಿ ಹಾಗೂ 500 ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು. [ಗಣರಾಜ್ಯೋತ್ಸವ ಪರೇಡ್ ನಲ್ಲಿ ಟಿಪ್ಪು ಘರ್ಜನೆ]

ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಲೂ 32 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೈದಾನಕ್ಕೆ ಆಗಮಿಸುವ ಸಾರ್ಜನಿಕರ ತಪಾಸಣೆಗೆ 45 ಲೋಹ ಪತ್ತೆ ಯಂತ್ರ ಅಳವಡಿಸಲಾಗುತ್ತಿದ್ದು, 90 ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಲಾಗುತ್ತದೆ ಎಂದರು.

ಭದ್ರತಾ ದೃಷ್ಟಿಯಿಂದ ಪರೇಡ್ ಬರುವ ಎಲ್ಲಾ ಆಹ್ವಾನಿತರು, ಸಾರ್ವಜನಿಕರು ಮೊಬೈಲ್, ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಛತ್ರಿ ಮುಂತಾದ ವಸ್ತುಗಳನ್ನು ಮೈದಾನದ ಒಳಗೆ ತರುವಂತಿಲ್ಲ. ಅಂತಹ ವಸ್ತುಗಳನ್ನು ತಂದವರನ್ನು ಮೈದಾನದ ಒಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಔರಾದ್ಕರ್ ಸ್ಪಷ್ಟಪಡಿಸಿದರು.

ಸಂಚಾರ ನಿರ್ಬಂಧ : ಜ.26ರ ಭಾನುವಾರ ಬೆಳಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜ ರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಾಹನ ಸವಾರರಿಗೆ ಸೂಚನೆ
* ಹಸಿರು ಬಣ್ಣದ ಪಾಸ್ ಹೊಂದಿರುವವರುವ ವಾಹನ ಸವಾರರು ಕಾಮರಾಜ ರಸ್ತೆ ಹಾಗೂ ಮೈನ್‌ಗಾರ್ಡ್ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ, ನಂತರ ಕಾಲ್ನಡಿಗೆಯಲ್ಲಿ ಪ್ರವೇಶದ್ವಾರ 4 ಮತ್ತು 5 ರ ಮೂಲಕ ಮೈದಾನ ಪ್ರವೇಶಿಸಬಹುದು.

* ಮಾಧ್ಯಮದವರ ವಾಹನಗಳನು, ಓ.ಬಿ. ವಾಹನಗಳು ಗೇಟ್ ನಂ.3 ರ ಮೂಲಕ ಒಳಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಲುಗಡೆ ಮಾಡಬಹುದು.

* ಕವಾಯತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವ ವಾಹನ ಪ್ರವೇಶದ್ವಾರ-1 ರ ಬಳಿ ಬಂದು ಮಕ್ಕಳನ್ನು ಇಳಿಸಿ, ವಾಹನಗಳನ್ನು ಎಂ.ಜಿ. ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೊ ನಿಲ್ದಾಣದ ವರೆಗೆ ರಸ್ತೆಯ ಉತ್ತರಭಾಗದಲ್ಲಿ ನಿಲುಗಡೆ ಮಾಡಬೇಕು.

* ಪಿಡಬ್ಲ್ಯೂಡಿ, ಬಿಬಿಎಂಪಿ ಮತ್ತಿತರ ಸರ್ಕಾರಿ ವಾಹನಗಳು ಪ್ರವೇಶದ್ವಾರ-1 ರ ಮೂಲಕ ಮೈದಾನ ಪ್ರವೇಶಿಸಿ, ನಂತರ ತಮ್ಮ ವಾಹನಗಳನ್ನು ಪೋರ್ಟ್‌ವಾಲ್ ಹಿಂಭಾಗದಲ್ಲಿ (ದಕ್ಷಿಣ ಕಡೆಗೆ) ನಿಲುಗಡೆ ಮಾಡಬೇಕು.

* ದ್ವಿಚಕ್ರವಾಹನ ಸವಾರರು ಹಾಗೂ ಕಾರ್ ಪಾಸುಗಳಿಲ್ಲದಿರುವವರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆಯಲ್ಲಿ ನಿಲುಗಡೆ ಮಾಡಬೇಕು. ನಂತರ ಪ್ರವೇಶದ್ವಾರ-4 ಮತ್ತು 5 ರ ಮೂಲಕ ಮೈದಾನ ಪ್ರವೇಶಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+