Bengaluru Tunnel Road: ಟನಲ್ ರಸ್ತೆ ಯೋಜನೆ ಆರಂಭದಲ್ಲೇ ಸರ್ಕಾರ ಎಚ್ಚರಿಸಿದ ತಜ್ಞರು

ಬೆಂಗಳೂರು, ಜೂನ್ 21: ಕರ್ನಾಟಕ ರಾಜ್ಯ ಸರ್ಕಾರ ಜನಸಂಖ್ಯೆ ಹೆಚ್ಚರುತ್ತಿರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಎರಡು ಮಹತ್ವದ ಸುರಂಗ ಯೋಜನೆಗೆ ಕೈ ಹಾಕಿದೆ. ಅದರಲ್ಲಿ ಹೆಬ್ಬಾಳದ ಎಸ್ಟಿಮ್ ಮಾಲ್‌ನಿಂದ - ಸಿಲ್ಕ್‌ಬೋರ್ಡ್‌ವರೆಗಿನ ಸುಮಾರು 18 ಕಿಲೋ ಮೀಟರ್ ಸುರಂಗ ಯೋಜನೆ ಮೊದಲನೆಯದ್ದು. ಈ ಯೋಜನೆಗೆ ಮೂರು ವರ್ಷಗಳ ಗಡುವು ಸಾಕಾಗುವುದಿಲ್ಲ ಎಂದಿರುವ ತಜ್ಞರು, ಯೋಜನೆ ಕುರಿತು ಮಹತ್ವದ ಎಚ್ಚರಿಕೆ ಸಂದೇಶಗಳನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.

ಹೌದು, ಸರ್ಕಾರ 17000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುರಂಗ ಯೋಜನೆಯನ್ನು ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಕೈಗೆತ್ತಿಕೊಳ್ಳಲಿದೆ. ಈ ಹಿಂದೊಮ್ಮೆ ಸಾರಿಗೆ ತಜ್ಞರು ಆಕ್ಷೇಪ ಎತ್ತಿದ್ದರು. ಇದೀಗ ಮತ್ತೆ ಪ್ರತಿಕ್ರಿಯಿಸಿರುವ ಅವರು, ಒಂದೊಮ್ಮೆ ಸುರಂಗ ಕಾರ್ಯ ಶುರುವಾದರೆ ಸಾಲು ಸಾಲು ಸಮಸ್ಯೆಗಳು ಎದುರಾಗುವ ಆತಂಕ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದರಿಂದ ಯೋಜನೆ ಶುರು ಮಾಡಲಿರುವ ರಾಜ್ಯ ಸರ್ಕಾರಕ್ಕೆ ವಿಘ್ನ ಎದುರಾದಂತಾಗಿದೆ.

Specialist Warns To Karnataka Govt About Tunnel Road Project Bengaluru

ಇಷ್ಟು ದೊಡ್ಡ ಮಟ್ಟದಲ್ಲಿ ಸುರಂಗ ಕೊರೆಯಲು ಮುಂದಾದರೆ, ಅಂತರ್ಜಲಕ್ಕೆ, ಕೆರೆ ಮೂಲಗಳಿಗೆ ಪೆಟ್ಟು ಬೀಳಲಿದೆ. ಸುರಂಗ ಮಾರ್ಗದಲ್ಲಿ ಮಾರ್ಗ ನಿರ್ಮಿಸಲು ಪ್ಲಾನ್ ಮಾಡಿರುವ ನಮ್ಮ ಮೆಟ್ರೋ ಯೋಜನೆಗೆ ಹೊಡೆತ ನೀಡಬಹದು. ಹೀಗೆ ಅನೇಕ ಸಮಸ್ಯೆಗಳು ಎದುರಾಗಬಹುದು. ಒಂದು ವೇಳೆ ಈ ರಸ್ತೆ ನಿರ್ಮಿಸಿದರೂ ಸಹಿತ ಮುಂದೆ ಭವಿಷ್ಯದಲ್ಲೂ ಸಾರ್ವಜನಿಕರಿಗೆ ಸಂಕಷ್ಟ ತಪ್ಪಿದ್ದಲ್ಲ. ಟೋಲ್ ಶುಲ್ಕ, ದಟ್ಟಣೆ ಹೀಗೆ ಒಂದಿಲ್ಲವೊಂದು ಸಮಸ್ಯೆಗಳು ಎದುರಾಗಲಿವೆ ಎಂದು ಅವರು ಸರ್ಕಾರವನ್ನು ಆರಂಭಿಕ ಹಂತದಲ್ಲೇ ಎಚ್ಚರಿಸಿದ್ದಾರೆ.

ಎರಡು ಹಂತಗಳಲ್ಲಿ ಈ ಟನಲ್ ನಿರ್ಮಾಣ..

ರಾಜ್ಯ ವಿಪಕ್ಷ ನಾಯಕರು ಸೇರಿದಂತೆ ಕೆಲವು ತಜ್ಞರ ವಿರೋಧ ನಡುವೆ ಸರ್ಕಾರ ಟನಲ್ ರಸ್ತೆ ಪ್ಲಾನ್ ರೂಪಿಸಿದೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು, ಖಾಸಗಿಯವರ ಸಹಕಾರದಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಹೆಬ್ಬಾಳದಿಂದ ಶೇಷಾದ್ರಿ ರಸ್ತೆ ತನಕ ಮತ್ತು ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್‌ವರೆಗೆ ಎರಡು ಹಂತಗಳಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅಣಿಯಾಗಿದೆ .

ಎರಡನೇ ಸುರಂಗ ಮಾರ್ಗಕ್ಕೂ ಆಕ್ಷೇಪ..

ಇನ್ನೂ ಕೆ.ಆರ್‌ಪುರಂ ನಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗೆ ಬೆಂಗಳೂರಿನ ಎರಡನೇ ಟನಲ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ನಾಯಂಡಹಳ್ಳಿಯಿಂದ ಕೆ.ಆರ್.ಪುರಂ ವರೆಗೆ ನಮ್ಮ ಮೆಟ್ರೋ ನೇರಳೆ ಮಾರ್ಗ ಇದೆ. ಸುಲಭ ಸಂಚಾರ ಇದೆ. ಅಲ್ಲದೇ ಈ ಮೆಟ್ರೋ ಎತ್ತರಿಸಿದ ಮಾರ್ಗ ಹಾಗೂ ಅಲ್ಲಲ್ಲಿ ಸುರಂಗ ಮಾರ್ಗ ಸಹ ಹೊಂದಿದೆ. ಹೀಗಿದ್ದಾಗ ಇದೇ ಮಾರ್ಗದಲ್ಲಿ ಸುರಂಗ ರಸ್ತೆ ಯೋಜನೆ ಮಾಡುವುದು ಎಷ್ಟು ಸರಿ? ಅಂತಲೂ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+