'PAY & USE'ಮಾದರಿ ವಿದ್ಯುತ್ ವ್ಯವಸ್ಥೆಗೆ ರಾಜ್ಯ ಸರ್ಕಾರ ಚಿಂತನೆ

ಮೊಬೈಲ್ ನಲ್ಲಿ ಪ್ರೀ ಪೇಯ್ಡ್ ಮೂಲಕ ಡೇಟಾ ಅಥವಾ ಟಾಕ್ ಟೈಮ್ ಪಡೆದುಕೊಳ್ಳುವ ಹಾಗೆ, ವಿದ್ಯುತ್ತನ್ನು ಇಷ್ಟು ದಿನಗಳಿಗೆ ಇಂತಿಷ್ಟು ಯೂನಿಟ್ ಗಳನ್ನು ಖರೀದಿಸಿಟ್ಟುಕೊಳ್ಳುವ ವ್ಯವಸ್ಥೆ ಇದಾಗಿರಲಿದೆ.

ಬೆಂಗಳೂರು, ಏಪ್ರಿಲ್ 20: ಮುಂಗಡವಾಗಿ ಹಣ ನೀಡಿ ನಮಗೆಷ್ಟು ವಿದ್ಯುತ್ ಬೇಕೋ ಅಷ್ಟು ವಿದ್ಯುತ್ತನ್ನು ಖರೀದಿಸುವ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಇದರಿಂದಾಗಿ, ವಿದ್ಯುತ್ತಿನ ಬೇಕಾಬಿಟ್ಟಿ ಬಳಕೆಯನ್ನು ತಡೆಗಟ್ಟಲು ಇಂಥ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮೊಬೈಲ್ ನಲ್ಲಿ ಪ್ರೀ ಪೇಯ್ಡ್ ಮೂಲಕ ಡೇಟಾ ಅಥವಾ ಟಾಕ್ ಟೈಮ್ ಪಡೆದುಕೊಳ್ಳುವ ಹಾಗೆ, ವಿದ್ಯುತ್ತನ್ನು ಇಷ್ಟು ದಿನಗಳಿಗೆ ಇಂತಿಷ್ಟು ಯೂನಿಟ್ ಗಳನ್ನು ಖರೀದಿಸಿಟ್ಟುಕೊಳ್ಳುವ ವ್ಯವಸ್ಥೆ ಇದಾಗಿರಲಿದೆ.

Soon, buy power only when you need it via prepaid meters

ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಇದು ಜಾರಿಗೆ ಬರಲಿದೆ ಎಂದೂ ನಿರೀಕ್ಷಿಸಲಾಗಿದೆ.

ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಪ್ರತಿ ಮನೆ, ಅಪಾರ್ಟ್ ಮೆಂಟ್ ಗಳಿಗೆ ಪ್ರತ್ಯೇಕವಾಗಿ ಪ್ರೀ ಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ಅಳವಡಿಸಲಾಗುವುದು. ಅಲ್ಲದೆ, ಇಂತಿಷ್ಟು ಯೂನಿಟ್ ಗಳಿಗೆ ಇಂತಿಷ್ಟು ಕಾಲಾವಧಿವರೆಗೆ ಅಂತ ದರಗಳನ್ನು ನಿಗದಿಗೊಳಿಸಲಾಗುತ್ತದೆ.

ಉದಾಹರಣೆಗೆ, 200 ಯೂನಿಟ್ ಗಳು 30 ದಿನಗಳವರೆಗೆ ಎಂತಲೋ, 300 ಮೀಟರ್ 45 ದಿನಗಳಿಗೆ.... ಎಂಬಂತೆ ದರ ನಿಗದಿಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವಸತಿ ಸಮುಚ್ಛಯಗಳಿಗೆ, ಕಾರ್ಖಾನೆಗಳಿಗೆ ಪ್ರತ್ಯೇಕ ದರ ಪಟ್ಟಿ ಇರಲಿದೆ.

ಪ್ರೀ ಪೇಯ್ಡ್ ಮೀಟರ್ ಗೆ 4ರಿಂದ 5 ಸಾವಿರ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ''ಸದ್ಯಕ್ಕೆ ಬಳಕೆಯಲ್ಲಿರುವ ವ್ಯವಸ್ಥೆಯಂತೆ, ಗ್ರಾಹಕರು ವಿದ್ಯುತ್ ಬಳಸಲಿ, ಬಿಡಲೇ, ಪ್ರತಿ ತಿಂಗಳು ನಿರ್ವಹಣಾ ಶುಲ್ಕವನ್ನು ತೆರಲೇಬೇಕಿದೆ. ಆದರೆ, ಪ್ರೀ ಪೇಯ್ಡ್ ಮೀಟರ್ ವ್ಯವಸ್ಥೆ ಬಂದಾಗ ಹೀಗಾಗುವುದಿಲ್ಲ. ಅಲ್ಲದೆ, ಪ್ರೀ ಪೇಯ್ಡ್ ಮೀಟರ್ ಗಳನ್ನು ಹೊಸದಾಗಿ ಹಾಕಿಸಿಕೊಳ್ಳಬೇಕಿರುವುದರಿಂದ ಪ್ರತಿ ಮೀಟರ್ ಗೆ 4ರಿಂದ 5 ಸಾವಿರ ಖರ್ಚು ತಗುಲಬಹುದು'' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+