ಮೈಸೂರು ಹೆಚ್ಚು ಜೀತದಾರರಿರುವ ಎರಡನೇ ಜಿಲ್ಲೆ
ಬೆಂಗಳೂರು, ಸೆಪ್ಟೆಂಬರ್, 25 : ಜೀತಪದ್ಧತಿ ರದ್ಧತಿ ಕಾಯ್ದೆ ಸುಮಾರು ವರ್ಷಗಳಿಂದ ಜಾರಿಯಲ್ಲಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರಾದ ಮೈಸೂರಲ್ಲಿ ಜೀತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಒಟ್ಟಿನಲ್ಲಿ ಅತಿಹೆಚ್ಚು ಜೀತದಾರರ ಪಟ್ಟಿಯಲ್ಲಿ ಬೀದರ್ ಮೊದಲ ಸ್ಥಾನ ಪಡೆದುಕೊಂಡರೆ, ಮೈಸೂರು ಎರಡನೇ ಸ್ಥಾನದಲ್ಲಿದೆ.
ಜೀತಪದ್ಧತಿ ಪರಿಶೀಲನೆ ಮತ್ತು ಪುನರ್ ವಸತಿ ಸಂಬಂಧ ಪತ್ರಕರ್ತ ಶಿವಾಜಿ ಗಣೇಶನ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಗುರುವಾರ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಅವರಿಗೆ ತನ್ನ ವರದಿ ಸಲ್ಲಿಸಿದ್ದು, ಬೀದರ್ ನಲ್ಲಿ 1,319, ಮೈಸೂರಿನಲ್ಲಿ 830 ಜೀತಗಾರರು ಇರುವುದು ತಿಳಿದು ಬಂದಿದೆ.[ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿತು]

ಜೀತಮುಕ್ತ ವಿಮುಕ್ತಿ ಕರ್ನಾಟಕ ಸಂಘಟನೆಯು 2013ರಲ್ಲಿ ಎರಡು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗಿ ಈ ಸತ್ಯಾಂಶ ತಿಳಿದು ಬಂದಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ಸುಮಾರು 7,646 ಜೀತದಾರರು ಇರಬಹುದೆಂದು ಅಂದಾಜು ಮಾಡಲಾಗಿದೆ.
ಕಳೆದ ಬಾರಿ ಪತ್ತೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 119, ಪಾವಗಡದಲ್ಲಿ 383 ಹಾಗೂ ಮೈಸೂರಿನ ಹೆಚ್ ಡಿ ಕೋಟೆಯಲ್ಲಿ 253 ಜೀತದಾರರನ್ನು ಪತ್ತೆ ಹಚ್ಚಲಾಗಿತ್ತು. ಈ ಬಾರಿ ಮೈಸೂರು ಹಾಗೂ ಬೀದರ್ ನಲ್ಲಿ ಜೀತದಾರರನ್ನು ಕಂಡು ಹಿಡಿಯಲಾಗಿದೆ. ಇವರಿಗೆಲ್ಲಾ ಪುನರ್ವಸತಿ ಕಲ್ಪಿಸಿಕೊಟ್ಟು, ಆದಷ್ಟು ಶೀಘ್ರದಲ್ಲಿ ಉದ್ಯೋಗ ಒದಗಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ಹೇಳಿದರು.












Click it and Unblock the Notifications