Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಡ್ರೋನ್ ಮೂಲಕ ಮನೆಗೆ ಬರಲಿದೆ ಔಷಧಿ, ಸರಕುಗಳು

ಬೆಂಗಳೂರು, ಮಾರ್ಚ್‌ 31: ಇ-ಕಾಮರ್ಸ್ ಕ್ಷೇತ್ರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ಸಿಕ್ಕಿದೆ. ರಸ್ತೆ ಮೂಲಕ ಮನೆಗೆ ಬಾಗಿಲಿಗೆ ಸರಕುಗಳು ಬರುವುದು ಈಗ ಸಾಮಾನ್ಯ. ಆದರೆ ಇನ್ನು ಮುಂದೆ ನಗರದಲ್ಲಿ ಆಕಾಶ ಮಾರ್ಗವಾಗಿ ಕೇವಲ 7 ನಿಮಿಷದಲ್ಲಿ ಡ್ರೋನ್ ಮೂಲಕ ಔಷಧಿ ಮತ್ತು ಇತರ ಸರಕುಗಳು ನಿಮ್ಮ ಕೈ ಸೇರಲಿದೆ. ದೇಶದಲ್ಲಿಯೇ ಗುರುಗ್ರಾಮದ ಬಳಿಕ ಬೆಂಗಳೂರು ನಗರದಲ್ಲಿ ಈ ಮಾದರಿ ಸೇವೆಗೆ ಚಾಲನೆ ನೀಡಲಾಗಿದೆ.

ಸ್ಕೈ ಏರ್‌ ಸಂಸ್ಥೆಯ ವಾಣಿಜ್ಯ ಡ್ರೋನ್ ಡೆಲಿವರಿ ಸೇವೆಗೆ ಬೆಂಗಳೂರು ನಗರದಲ್ಲಿ ಚಾಲನೆ ಸಿಕ್ಕಿದೆ. ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಕೋಣನಕುಂಟೆ ಮತ್ತು ಕನಕಪುರ ರಸ್ತೆಗಳಲ್ಲಿ ಮಾತ್ರ ಈ ಮಾದರಿ ಸೇವೆ ಸದ್ಯಕ್ಕೆ ಲಭ್ಯವಿದೆ.

Skye Air Launched Its Ultra Fast Deliveries Service In Bengaluru

ಈ ಪ್ರದೇಶದ ಜನರು ಆರ್ಡರ್ ಮಾಡಿದ ವಸ್ತುಗಳನ್ನು ಕೇವಲ 7 ನಿಮಿಷದಲ್ಲಿ ಪೂರೈಕೆ ಮಾಡಲಾಗುತ್ತದೆ ಎಂದು ಸ್ಕೈ ಏರ್ ಹೇಳಿದೆ. ಎರಡು ವರ್ಷಗಳಿಂದ ಮಾನವ ರಹಿತ ಡ್ರೋನ್ ಸೇವೆಯನ್ನು ನಗರದಲ್ಲಿ ಆರಂಭಿಸುವ ಪ್ರಯತ್ನ ನಡೆದಿತ್ತು. ಆದರೆ ಗುರುಗ್ರಾಮದಲ್ಲಿ ಮೊದಲು ಈ ಸೇವೆ ಆರಂಭಿಸಲಾಯಿತು. ದೇಶದಲ್ಲಿ ಈ ಸೇವೆ ಆರಂಭಿಸಲಾದ 2ನೇ ನಗರ ಬೆಂಗಳೂರು.

ಹೇಗೆ ಕಾರ್ಯ ನಿರ್ವಹಣೆ?: ಸ್ಕೈ ಏರ್ ದೆಹಲಿ ಮೂಲದ ಸಂಸ್ಥೆಯಾಗಿದೆ. ಇದರ ಸಂಸ್ಥಾಪಕ ಮತ್ತು ಸಿಒಇ ಅಂಕಿತ್ ಕುಮಾರ್ ಈ ಯೋಜನೆ ಕುರಿತು ಮಾತನಾಡಿ, "ಬೆಂಗಳೂರು ನಗರದಲ್ಲಿ ಸದ್ಯ ಕೋಣನಕುಂಟೆ, ಕನಕಪುರ ರಸ್ತೆಯಲ್ಲಿ ಈ ಸೌಲಭ್ಯ ಲಭ್ಯವಿದೆ. ಈ ಪ್ರದೇಶದ ಜನರು ಕೇಲವ 7 ನಿಮಿಷದಲ್ಲಿ ತಮ್ಮ ವಸ್ತುಗಳನ್ನು ಪಡೆಯಬಹುದು" ಎಂದರು.

"ಬೇಡಿಕೆ ಮತ್ತು ಮೂಲಕ ಸೌಕರ್ಯ ನೋಡಿಕೊಂಡು ಮಾರ್ಗವನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ಬಳಕೆ ಮಾಡುವ ಡ್ರೋನ್‌ಗಳು ಅನುಸೂಚಿತ ಮಾರ್ಗದಲ್ಲಿ ಸಮುದ್ರ ಮಟ್ಟದಿಂದ 120 ಮೀಟರ್ ಎತ್ತರದಲ್ಲಿ ಹಾರಬಲ್ಲವು. ಆದರೆ ಸೇನಾ ನೆಲೆಯ ಮೇಲೆ ಹಾರಾಟ ನಡೆಸುವಂತಿಲ್ಲ" ಎಂದು ಹೇಳಿದರು.

"ಬೆಂಗಳೂರು ನಗರದಲ್ಲಿ ನಾವು ಸದ್ಯ ಸೇವೆ ಆರಂಭಿಸಿರುವ ಪ್ರದೇಶದಲ್ಲಿ ಸೇನಾ ನೆಲೆಗಳಿಲ್ಲ. ಆದರೆ ನಗರದಲ್ಲಿ ಹೆಚ್‌ಎಎಲ್‌ ಇದೆ. ಈ ಪ್ರದೇಶದಲ್ಲಿ ಸೇವೆ ಆರಂಭಿಸಿದರೆ, ಅವರೊಂದಿಗೆ ಮಾತುಕತೆ ನಡೆಸಿ ಸಮನ್ವಯ ಸಾಧಿಸುವ ಪ್ರಯತ್ನ ನಡೆಸಲಾಗುತ್ತದೆ" ಎಂದು ವಿವರಣೆ ನೀಡಿದರು.

ಪ್ರತಿ ಡ್ರೋನ್ ಒಮ್ಮೆ ಹಾರಾಟ ನಡೆಸುವಾಗ 10 ಕೆಜಿ ಸರಕು ಸಾಗಣೆ ಮಾಡಬಲ್ಲದು. 20 ಮೀಟರ್ ಎತ್ತರದಿಂದ ಇಳಿದು ವಸ್ತುಗಳನ್ನು ನೀಡುತ್ತದೆ. ಇದಕ್ಕಾಗಿಯೇ ಸ್ಕೈವಿಂಚ್ ಎಂಬ ವ್ಯವಸ್ಥೆ ಮಾಡಲಾಗಿದೆ. ಸುರಕ್ಷಿತವಾಗಿ ವಸ್ತುಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಇಳಿಸುವುದು ಸ್ಕೈ ಏರ್ ಸಂಸ್ಥೆಯ ಗುರಿಯಾಗಿದೆ.

Take a Poll

ಸ್ಕೈ ಏರ್ ಬ್ಲೂಡಾರ್ಟ್‌, ಡಿಟಿಡಿಸಿ, ಶಿಪ್‌ರಾಕೆಟ್ ಸೇರಿದಂತೆ ವಿವಿಧ ಕಂಪನಿಗಳನ್ನು ತನ್ನ ಗ್ರಾಹಕರಾಗಿ ಮಾಡಿಕೊಂಡಿದೆ. ಸ್ಕೈ ಏರ್ ಸೇವೆಯನ್ನು ಬನ್ನೇರುಘಟ್ಟ ರಸ್ತೆಗೆ ವಿಸ್ತರಣೆ ಮಾಡುವ ಮತ್ತು ಆಹಾರವನ್ನು ಡ್ರೋನ್ ಮೂಲಕ ಡೆಲಿವರಿ ಮಾಡುವ ವ್ಯವಸ್ಥೆಯೂ ಶೀಘ್ರವೇ ಜಾರಿಗೆ ಬರಲಿದೆ ಎಂದು ಸ್ಕೈ ಏರ್ ಹೇಳಿದೆ.

ಗುರುಗ್ರಾಮದಲ್ಲಿ7.5 ಕಿ. ಮೀ.ಯನ್ನು ರಸ್ತೆ ಮೂಲಕ ಸಾಗಲು ಕನಿಷ್ಠ 15 ನಿಮಿಷ ಬೇಕು. ಆದರೆ ಡ್ರೋನ್ ಮೂಲಕ 3-4 ನಿಮಿಷದಲ್ಲಿ ವಸ್ತುಗಳನ್ನು ನೀಡುತ್ತಿದ್ದೇವೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಒಂದು ವರ್ಷದಲ್ಲಿ ಸುಮಾರು 10 ಲಕ್ಷ ಡೆಲಿವರಿ ಪೂರ್ಣಗೊಳಿಸಿದ್ದೇವೆ ಎಂದು ಸ್ಕೈ ಏರ್ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+