ಸಿದ್ದೇಶ್ವರ ಶ್ರೀಗಳಿಂದ ಪದ್ಮಶ್ರೀ ಪುರಸ್ಕಾರ ವಿನಮ್ರ ನಿರಾಕರಣೆ

ಬೆಂಗಳೂರು ಜನವರಿ 27 : ಕೇಂದ್ರ ಸರ್ಕಾರ ಘೋಷಿಸಿರುವ ಪದ್ಮಶ್ರೀ ಪುರಸ್ಕಾರವನ್ನು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ.

ಈ ಕುರಿತು ಶುಕ್ರವಾರ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿರುವ ಅವರು ನಾನೊಬ್ಬ ಸಾಮಾನ್ಯ, ಆಧ್ಯಾತ್ಮದೆಡೆಗೆ ಒಲವಿರುವ ವ್ಯಕ್ತಿ, ನನಗಿಂತ ಸಾಧನೆ ಮಾಡಿದ ಅನೇಕ ಸಾಧಕರಿದ್ದು ಅವರನ್ನು ಗುರುತಿಸಿ ಪುರಸ್ಕಾರ ನೀಡಿ, ನನಗೆ ಈ ಪ್ರಶಸ್ತಿಬೇಡ ಎಂದು ತಮ್ಮ ನಿಲುವನ್ನು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರವಚನ ಕಾರ್ಯಕ್ರಮ ನಿಮಿತ್ತ ಕಳೆದ 15 ದಿನಗಳಿಂದ ಕಲಬುರಗಿಯಲ್ಲಿ ವಾಸ್ತವ್ಯಹೂಡಿರುವ ಅವರು ಶುಕ್ರವಾರ ಅಲ್ಲಿಂದಲೇ ಪ್ರಧಾನಿಗೆ ಪತ್ರ ಬರೆದು ಈ ನಿಲುವು ತಿಳಿಸಿದ್ದಾರೆ. ಪತ್ರದಲ್ಲಿ ಶ್ರೀಗಳು, ದೇಶದ ಅತ್ಯುನ್ನತ ಗೌರವ ಪುರಸ್ಕಾರವಾದ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಆದರೆ, ನನಗೆ ಈ ಪುರಸ್ಕಾರ ಬೇಡ ಎಂದು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ.

Siddeshwara swamiji rejects Padmashree award

ಈ ಹಿಂದೆ ಒಲಿದು ಬಂದಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಶ್ರೀಗಳು ನಿರಾಕರಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+