ಜನಾರ್ಧನ ಹೋಟೆಲ್ ನಲ್ಲಿ ಉಪಹಾರ ಸ್ವೀಕರಿಸಿದ ಸಿದ್ದರಾಮಯ್ಯ
ಬೆಂಗಳೂರು, ಜನವರಿ 26 : ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ. ಜಾರ್ಜ್ ಅವರೊಂದಿಗೆ ಜನಾರ್ಧನ ಹೋಟೆಲ್ ಗೆ ತೆರಳಿ ಉಪಹಾರ ಸೇವಿಸಿದರು.
ನಗರದ ಶಿವಾನಂದ ವೃತ್ತದ ಬಳಿ ಇರುವ ಜನಾರ್ಧನ ಹೋಟೆಲ್ ನಲ್ಲಿ ಶುಕ್ರವಾರ ಉಪಹಾರ ಸೇವಿಸಿದ ಅವರು ಹಲವಾರು ವರ್ಷಗಳಿಂದ ಈ ಹೋಟೆಲ್ ಗೆ ಬರುತ್ತಿದ್ದೇನೆ ಎಂದು ಹೇಳಿದರು ಜತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಹೋಟೆಲ್ ನ ಹಿರಿಯ ಸಿಬ್ಬಂದಿಯೂ ಹಳೆಯ ನೆನಪುಗಳನ್ನು ಮೆಲುಕು ಹಾಕುವ ವಿಚಾರದಲ್ಲಿ ಮುಖ್ಯಮಂತ್ರಿಯವರಿಗೆ ಸಾಥ್ ನೀಡಿದರು. ಮಕ್ಕಳೂ ಸೇರಿದಂತೆ ಹೋಟೆಲ್ ಗೆ ಬಂದಿದ್ದ ಜನರು ಮುಖ್ಯಮಂತ್ರಿಯವರೊಂದಿಗೆ ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು. ಮುಖ್ಯಮಂತ್ರಿಯವರೊಂದಿಗೆ ಮೇಯರ್ ಸಂಪತ್ ರಾಜ್ ಹಾಜರಿದ್ದರು.












Click it and Unblock the Notifications