ಕನ್ನಡ ತೀರ್ಪಿತ್ತ ನ್ಯಾಯಾಧೀಶರಿಗೆ ಮುಖ್ಯಮಂತ್ರಿಯಿಂದ ಸನ್ಮಾನ
ಕನ್ನಡದಲ್ಲಿ ತೀರ್ಪು ನೀಡಿದ 69 ನ್ಯಾಯಾಧೀಶರು ಹಾಗೂ 19 ಸರ್ಕಾರಿ ಅಭಿಯೋಜಕರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಸನ್ಮಾನಿಸಲಾಯಿತು.
ಬೆಂಗಳೂರು, ಮೇ 19: ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಹಾಗೂ ಸರ್ಕಾರಿ ಅಭಿಯೋಜಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.
ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಸನ್ಮಾನಿಸುವ ಈ ವಿಶಿಷ್ಟ ಕಾರ್ಯಕ್ರಮವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿತ್ತು. ಈ ವೇಳೆ ಕನ್ನಡದಲ್ಲಿ ತೀರ್ಪು ನೀಡಿದ 69 ನ್ಯಾಯಾಧೀಶರಿಗೆ ಹಾಗೂ 19 ಸರ್ಕಾರಿ ಅಭಿಯೋಜಕರಿಗೆ ಮುಖ್ಯಮಂತ್ರಿ ಸನ್ಮಾನ ಮಾಡಿದರು.

ಮುಖ್ಯಮಂತ್ರಿಗಳ ಜತೆ ಸಚಿವರುಗಳಾದ ಟಿ ಬಿ ಜಯಚಂದ್ರ, ಕೆ ಜೆ ಜಾರ್ಜ್, ಹೈಕೋರ್ಟು ನ್ಯಾಯಮೂರ್ತಿ ಬೋಪಣ್ಣ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪ್ರೊ ಎಸ್ ಜಿ ಸಿದ್ದರಾಮಯ್ಯ ಹಾಜರಿದ್ದರು.

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸಿಎಂ ಶಿಲಾನ್ಯಾಸ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ರಾಜರಾಜೇಶ್ವರಿ ವಿಧಾನ ಸಭೆ ಕ್ಷೇತ್ರದಲ್ಲಿ ಉದ್ಯಾನವನ, ಆಟದ ಮೈದಾನ ಮತ್ತು ಬೃಹತ್ ನೀರುಗಾಲುವೆ ಕಾಮಗಾರಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಸಚಿವರಾದ ಕೆ ಜೆ ಜಾರ್ಜ್ ಮತ್ತು ಗಣ್ಯರು ಮುಖ್ಯಮಂತ್ರಿಗಳ ಜತೆ ಹಾಜರಿದ್ದರು.













Click it and Unblock the Notifications