ಪ್ರಧಾನಿ ಮೋದಿಗೆ ಯಡಿಯೂರಪ್ಪ ಬಗ್ಗೆ ದ್ವೇಷವೇ? ಸಿದ್ದು ಪ್ರಶ್ನೆ

Recommended Video

      ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಮೋದಿ ಕಲ್ಲುಬಂಡೆ ಆಗಿದ್ದು ಯಾಕೆ? | Oneindia Kannada

      ಬೆಂಗಳೂರು, ಅಕ್ಟೋಬರ್ 01: ಬಿಹಾರದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಕೂಡಲೇ ಸ್ಪಂದಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೊದಿ ಅವರದು ತಾರತಮ್ಯದ ನಡೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

      "ಬಿಹಾರ ಪ್ರವಾಹದ ಬಗ್ಗೆ ಮಿಡಿದ ನರೇಂದ್ರ ಮೋದಿ ಅವರ 52 ಇಂಚಿನ ಎದೆ, ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ಕಲ್ಲುಬಂಡೆ ಆಗಿದ್ದು ಯಾಕೆ?
      ಇದು 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಬಗ್ಗೆ ತಾತ್ಸಾರವೇ?
      ಇಲ್ಲ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ದ್ವೇಷವೇ?" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

      ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೊದಿ ಅವರು ಟ್ವೀಟ್ ಮಾಡಿ, "ಬಿಹಾರದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಳಿ ಮಾತನಾಡಿದ್ದೇನೆ. ಸಂತ್ರಸ್ತರ ನೆರವಿಗೆ ಏಜೆನ್ಸಿಗಳು ಧಾವಿಸಿವೆ. ರಾಜ್ಯಕ್ಕೆ ಯಾವೆಲ್ಲ ಸೇವೆಯ ಅಗತ್ಯವಿದೆಯೇ ಅದನ್ನು ನೀಡಲು ಕೇಂದ್ರ ಸಿದ್ಧವಿದೆ" ಎಂದಿದ್ದರು.

      Siddaramaiah Blames Narendra Modi On Twitter

      ಕಳೆದ ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಸುರಿದ ಸತತ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಅನುದಾನ ಕೇಳಲು ತೆರಳಿದ್ದ ರಾಜ್ಯದ ನಿಯೋಗ ಬರಿಗೈಲಿ ವಾಪಸ್ಸಸಾಗಿತ್ತು. ರಾಜ್ಯದ ನಾಯಕರೇ ಖುದ್ದಾಗಿ ಹೋಗಿ ಮೋದಿ ಅವರನ್ನು ಭೇಟಿಯಾಗಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಈಗ ಬಿಹಾರದಲ್ಲಿ ಪ್ರವಾಹ ಉಂಟಾದಾಗ ಮಾತ್ರ ಸ್ವತಃ ಮೋದಿ ಅವರೇ ನಿತೀಶ್ ಕುಮಾರ್ ಅವರಿಗೆ ಫೋನಾಯಿಸಿದ್ದು ರಾಜ್ಯದ ನಾಯಕರಿಗೆ ಭಾರೀ ಬೇಸರವನ್ನುಂಟು ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+