ರಿಜ್ವಾನ್ ಅರ್ಷದ್ 'ಕೈ' ಹಿಡಿದ ಶಿವಾಜಿನಗರ ಕ್ಷೇತ್ರದ ಮತದಾರ

ಬೆಂಗಳೂರು, ಡಿಸೆಂಬರ್.09: ರಾಜ್ಯ ವಿಧಾನಸಭಾ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರವೂ ಒಂದು. ಐಎಂಎ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಕಾಂಗ್ರೆಸ್ ಹಿಡಿತದಲ್ಲಿದ್ದ ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಯಶಸ್ಸು ಕಂಡಿದ್ದಾರೆ. ಮುಸ್ಲಿಮರ ಭದ್ರಕೋಟೆಯನ್ನು ವಶಕ್ಕೆ ಪಡೆದುಕೊಳ್ಳಲು ಬಿಜೆಪಿ ಕೂಡಾ ಪ್ಲಾನ್ ಮಾಡಿಕೊಂಡಿತ್ತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬದಲಿಗೆ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಎಂ.ಸರವಣ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿತ್ತು. ಇನ್ನೊಂದೆಡೆ ಜೆಡಿಎಸ್ ನಿಂದ ಪಕ್ಷದ ರಾಷ್ಟ್ರೀಯ ವಕ್ತಾರ ತನ್ವೀರ್ ಅಹ್ಮದ್ ಉಲ್ಲಾರನ್ನು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಕಳೆದ ಡಿಸೆಂಬರ್.05ರಂದು ನಡೆದ ಮತದಾನ ಪ್ರಕ್ರಿಯೆ ವೇಳೆ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನ ನಡೆದಿತ್ತು. ಶೇ.48.05ರಷ್ಟು ಮತದಾನ ನಡೆದಿದ್ದು, ಡಿಸೆಂಬರ್.09ರಂದು ವಸಂತನಗರದ ಅರಮನೆ ರಸ್ತೆಯ ಮೌಂಟ್‌ ಕಾರ್ಮೆಲ್‌ ಪಿ.ಯು ಕಾಲೇಜಿನಲ್ಲಿ ಮತಎಣಿಕೆ ಕಾರ್ಯ ನಡೆಯಿತು.

Shivaji Nagar Assembly Constituency By-Election Result 2019

ಸೋಮವಾರ ನಡೆದ ಮತಎಣಿಕೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಆ ಮೂಲಕ ಶಿವಾಜಿನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಕಳೆದ ಬಾರಿ 2018ರಲ್ಲಿ ನಡೆದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರೋಷನ್ ಬೇಗ್ 59,742 ಮತಗಳನ್ನು ಪಡೆದಿದ್ದರು. ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು 44,702 ಮತಗಳನ್ನು ಪಡೆದಿದ್ದರೆ, ಜೆಡಿಎಸ್ ನ ಶಕಿ ಮುಸ್ತಾಕ್ ಅಲಿ ಕೇವಲ 1,313 ವೋಟ್ ಪಡೆದುಕೊಂಡಿದ್ದರು. 15,040 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೋಷನ್ ಬೇಗ್ ಗೆಲುವು ದಾಖಲಿಸಿದ್ದರು. ಈ ಬಾರಿ ರಿಜ್ವಾದ್ ಅರ್ಷದ್ ಬರೋಬ್ಬರಿ 19,357 ಮತಗಳ ಅಂತರದಿಂದ ದಿಗ್ವಿಜಯ ಸಾಧಿಸಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತ
ಕಾಂಗ್ರೆಸ್ - ರಿಜ್ವಾದ್ ಅರ್ಷದ್ - 19,357
ಬಿಜೆಪಿ - ಎಂ.ಸರವಣ - 11,981

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+