ಪೆರೋಲ್ ಮುಕ್ತಾಯ: ಇಂದು ಶಶಿಕಲಾ ಮರಳಿ ಪರಪ್ಪನ ಅಗ್ರಹಾರ ಜೈಲಿಗೆ
ಬೆಂಗಳೂರು, ಅಕ್ಟೋಬರ್ 12 : ಅನಾರೋಗ್ಯದಿಂದ ಬಳಲುತ್ತಿರುವ ಪತಿ ನಟರಾಜನ್ ಯೋಗ ಕ್ಷೇಮ ವಿಚಾರಿಸಲು ಐದು ದಿನಗಳ ಪೆರೋಲ್ ಪಡೆದು ಚೆನ್ನೈಗೆ ತೆರಳಿದ್ದ ಶಶಿಕಲಾ ನಟರಾಜನ್ ಇಂದು (ಅ.12 ) ಮರಳಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಇಂದಿಗೆ ಶಶಿಕಲಾ ಪೆರೋಲ್ ಮುಗಿದ ಹಿನ್ನಲೆಯಲ್ಲಿ ಇಂದು ಸಂಜೆ 6 ಗಂಟೆಯೊಳಗೆ ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗಬೇಕಿದೆ.

ನಟರಾಜನ್ ಅನಾರೋಗ್ಯ ಹಿನ್ನಲೆಯಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಗೆ 5 ದಿನಗಳ ಪೆರೋಲ್ ಮಂಜೂರು ಮಾಡಲಾಗಿತ್ತು.
ಶಶಿಕಲಾ ಅವರು ತಮ್ಮ ಪತಿ ನಟರಾಜನ್ ಆರೋಗ್ಯ ವಿಚಾರಿಸುವುದರ ಹೊರತಾಗಿ ಯಾವುದೇ ಪಕ್ಷದ ಚಟುವಟಿಕೆ, ಸಭೆ, ಸಮಾಲೋಚನೆ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲವೆಂದು ಷರತ್ತು ವಿಧಿಸಲಾಗಿತ್ತು.
ಅದರಂತೆ ಶಶಿಕಲಾ ಐದು ದಿನ ಮನೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ನೋಡಲು ಬರುತ್ತಿದ್ದ ಬೆಂಬಲಿಗರತ್ತ ಕೈ ಬೀಸಿ ನಮಸ್ಕರಿಸುತ್ತಿದ್ದರು.












Click it and Unblock the Notifications