ದೆಹಲಿಯಿಂದ ವಿಮಾನದಲ್ಲಿ ಬರ್ತಿದ್ದ ಅರ್ಮಾನ್ ರಾತ್ರಿ ಏನ್ಮಾಡ್ತಿದ್ದ ನೋಡಿ!

ಬೆಂಗಳೂರು, ಅಕ್ಟೋಬರ್ 6: ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜೆಬಿನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ ಪೊಲೀಸರು 31.70 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅರ್ಮಾನ್ ಖಾನ್ ಬಂಧಿತ ಆರೋಪಿಯಾಗಿದ್ದಾನೆ. ಜೆಬಿ ನಗರ ಪೊಲೀಸರು ಪ್ರಕರಣವೊದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಈ ಆರೋಪಿಯ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ, ಈ ವಿಷಯ ಮುಂದಿಟ್ಟುಕೊಂಡು ಅರ್ಮಾನ್ ಖಾನ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಬಂಧನದಿಂದ ಹಲಸೂರು, ರಾಮಮೂರ್ತಿನಗರ, ರಾಜಾಜಿನಗರ, ಮೈಕೋ ಲೇಔಟ್, ಜೆ.ಬಿ.ನಗರ ಪೊಲೀಸ್ ಠಾಣೆಯ 5, ಬೈಯ್ಯಪ್ಪನಹಳ್ಳಿ ಠಾಣೆಯ 2, ಜೆ.ಪಿ.ನಗರಪೊಲೀಸ್ ಠಾಣೆಗಳ ತಲಾ ಒಂದೊಂದು ಕಳವು ಪ್ರಕರಣ ಸೇರಿ ಒಟ್ಟು 12 ಹಗಲು ಕನ್ನಗಳವು ಪ್ರಕರಣ ಪತ್ತೆಯಾಗಿವೆ.

Salesman from Delhi looted in Bengaluru

ಆರೋಪಿಯಿಂದ 31.70 ಲಕ್ಷ ರೂ. ಮೌಲ್ಯದ 1ಕೆಜಿ 40 ಗ್ರಾಂ ತೂಕದ ಚಿನ್ನ, 1ಕೆಜಿ 250 ಗ್ರಾಂ ತೂಕದ ಬೆಳ್ಳಿಒಡವೆ, 2 ಲ್ಯಾಪ್‍ಟಾಪ್, ರೇಷ್ಮೆ ಸೀರೆಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+