ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ರೌಡಿ ಶೀಟರ್ ನಾಗ ಜಾಮೀನು ಅರ್ಜಿ ವಿಚಾರಣೆ

ಕೋಟ್ಯಂತರ ಹಣವನ್ನು ಅಡಗಿಸಿಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ವಿಚಾರಣೆ ನಡೆಯಲಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 05: ಕೋಟ್ಯಂತರ ಹಣವನ್ನು ಅಡಗಿಸಿಟ್ಟಿದ್ದ ಆರೋಪದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ವಿಚಾರಣೆ ನಡೆಯಲಿದೆ.

ಬೆಂಗಳೂರಿನ 21 ನೇ ಸೆಶನ್ಸ್ ಕೋರ್ಟಿನಲ್ಲಿ ಜಾಮೀನು ವಿಚಾರಣೆ ನಡೆಯಲಿದ್ದು, ತಲೆಮರೆಸಿಕೊಂಡಿರುವ ವಿ.ನಾಗರಾಜ್ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.[ರೌಡಿ ಶೀಟರ್ ನಾಗ ಸಹಚರರ ಬಂಧನ: ರಾಜ್ಯದಲ್ಲಿ ಮತ್ತೊಂದು ಡೈರಿ ಸ್ಫೋಟ!]

Rowdy sheeter V.nagaraj's bail plea will be inqired today

ಶ್ರೀರಾಂಪುರದಲ್ಲಿರುವ ವಿ.ನಾಗರಾಜ್ ಮನೆಯ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಪೊಲಿಸರಿಗೆ ಕೋಟ್ಯಂತರ ರೂ. ಮೌಲ್ಯದ ಹಳೆ ನೋಟುಗಳು ಸಿಕ್ಕಿದ್ದವು. ಆದರೆ ದಾಳಿ ಸಂದರ್ಭದಲ್ಲಿ ಬಾಂಬ್ ನಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ನಂತರ ಅಜ್ಞಾತ ಸ್ಥಳದಲ್ಲಿ ಕೂತು ಪೊಲೀಸರಿಗೆ ವಿಡಿಯೋ ಸಂದೇಶ ಸಹ ಕಳಿಸುತ್ತಿದ್ದ.

ಇಂದು ನಾಗನ ಸಹಚರರನ್ನು ಬಂಧಿಸಲಾಗಿದ್ದು, ಅವರಿಂದಲೂ ನಾಗ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

English summary
Rowdy sheeter V.nagaraj's bail plea will be inqired today by a session court in bengaluru. Naga is an ex corporater.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X