ವಿಡಿಯೋ; ಕೊರೊನಾ ಪೀಡಿತರಿಗೆ ಔಷಧಿ, ಆಹಾರ ಕೊಡುವ ರೋಬೋಟ್
ಬೆಂಗಳೂರು, ಏಪ್ರಿಲ್ 26 : ದೇಶದ ಜನರು ಕೊರೊನಾ ಜೊತೆ ಹೋರಾಡುವ ಜೊತೆಗೆ ಜನರ ಪ್ರಾಣಿ ಉಳಿಸಲು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿ ಬಗ್ಗೆಯೂ ಕಾಳಜಿ ಹೊಂದಿರಬೇಕು.
ಕೊರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವ ಹಲವು ವೈದ್ಯರು, ನರ್ಸ್ ಮತ್ತು ಆಸ್ಪತ್ರೆ ನರ್ಸ್‌ಗಳಿಗೆ ಸೋಂಕು ತಗುಲಿದೆ. ಬೆಂಗಳೂರು ನಗರದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಮೀಸಲಾಗಿಡಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ಸೋಂಕು ಹರಡದಂತೆ ತಡೆಯಲು ರೋಬೋಟ್ ಬಳಕೆ ಮಾಡಲಾಗುತ್ತಿದೆ. ಹೌದು, ರೋಗಿಗಳಿಗೆ ಬೇಕಾದ ಔಷಧಿ, ಆಹಾರವನ್ನು ರೋಬೋಟ್ ತಲುಪಿಸುತ್ತದೆ.
ಆಸ್ಪತ್ರೆಯಲ್ಲಿ ರೋಬೋಟ್ ಹೇಗೆ ಕೆಲಸ ಮಾಡುತ್ತದೆ? ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH Karnataka: Bengaluru's Victoria hospital has deployed robot to serve food and medicine to #Coronavirus patients, as a precautionary measure to mitigate the risk of infection to the hospital staff. pic.twitter.com/sQeT4wF0xq
— ANI (@ANI) April 25, 2020
ಕೊರೊನಾ ಸೋಂಕಿತರಿಗೆ ಆಹಾರ ಮತ್ತು ಔಷಧ ನೀಡುವಾಗ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ರೋಬೋಟ್ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ಕ್ಕೆ ತಲುಪಿದೆ. ಬೆಂಗಳೂರು ನಗರವೊಂದರಲ್ಲೇ 133 ಸೋಂಕಿತರು ಇದ್ದಾರೆ.












Click it and Unblock the Notifications