Sonu Gowda: ರೇಣುಕಾಸ್ವಾಮಿ ಕೊಲೆ ಕೇಸ್: ಬಿಗ್‌ಬಾಸ್ ಸೋನು ಗೌಡಗೆ ಪೊಲೀಸ್ ನೋಟಿಸ್
ಬೆಂಗಳೂರು, ಜುಲೈ 08: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಈ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಮೃತ ರೇಣುಕಾಸ್ವಾಮಿ, ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಕಾರಣ ಈ ಘಟನೆ ನಡೆಯಿತು ಎನ್ನುವ ಆರೋಪ ಕೂಡ ಇದೆ.
ಈ ಹಿನ್ನೆಲೆಯಲ್ಲಿ ಕೆಲವು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್‌ಗಳು ರೇಣುಕಾಸ್ವಾಮಿದ್ದು ಎನ್ನಲಾದ ಇನ್ಸ್ಟಾಗ್ರಾಮ್ ಖಾತೆಯಿಂದ ನನಗೂ ಮೆಸೇಜ್‌ಗಳು ಬಂದಿದೆ ಎಂದು ಆರೋಪಿಸಿದ್ದರು. ಇದೀಗ ಈ ರೀತಿ ಆರೋಪ ಮಾಡಿದ ಬಿಗ್‌ಬಾಸ್ ಖ್ಯಾತಿಯ ಸೋನುಗೌಡಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸ್ವತಃ ಸೋನು ಗೌಡ ಹೇಳಿಕೊಂಡಿದ್ದಾರೆ. "ರೇಣುಕಾಸ್ವಾಮಿ ನನಗೂ ಕೂಡ ಮೆಸೇಜ್ ಮಾಡಿದ್ದರು ಅಂತಾ ಹೇಳಿದ್ದೆ. ನಾನು ಈ ವಿಚಾರವಾಗಿ ಮಾತನಾಡಿರುವುದಕ್ಕೆ ನನಗೆ ಪೊಲೀಸರಿಂದ ನೋಟಿಸ್ ಬಂದಿದೆ. ಒಂದು ಹುಡುಗಿ ಅಂದ ಮೇಲೆ ನೂರು ಜನ ಕಮೆಂಟ್ ಪಾಸ್ ಮಾಡಿಯೇ ಮಾಡುತ್ತಾರೆ. ನನಗೂ ಈಗಾಗಲೇ ನೋಟಿಸ್ ಬಂದಿದೆ. ಹೋಗಿ ಮಾತನಾಡಬೇಕು ನಾನು.
ಯಾವೊಂದು ಅಕೌಂಟ್ ರೇಣುಕಾಸ್ವಾಮಿ ಅವರದ್ದೇ ಎನ್ನುತ್ತಿದ್ದಾರೆ, ಅದು ಅವರೇ ಆಗಿದ್ದರೆ, ರೇಣುಕಾಸ್ವಾಮಿ ಸರ್ ಅವರಿಂದಲೇ ನನಗೆ ಮೆಸೇಜ್ ಬಂದಿರುವಂತದ್ದು. ಅವರಲ್ಲ ಅಂದರೆ ಬೇರೆ ಅಕೌಂಟ್. ನನಗೆ ಸ್ಪಷ್ಟತೆ ಇಲ್ಲದೇ ನಾನು ಮಾತನಾಡಿರಬಹುದು. ಅವರದ್ದೇ ಅಕೌಂಟ್ ಅಂತಾ ಕೇಸ್ ದಾಖಲಾಗಿದೆಯಂತೆ ಎಂದರು.
ನನಗೂ ನೋಟಿಸ್ ಬಂದಿರುವ ಕಾರಣ ನಾನು ಹೋಗಿ ಮಾತನಾಡಬೇಕು ಏನು ಎತ್ತಾ, ಅದು ಅವರ ಅಕೌಂಟೇನಾ ಅಂತೆಲ್ಲಾ ಮಾತನಾಡಬೇಕಿದೆ. ಆದರೆ ನಾನು ಯಾವುದೇ ದೂರು ಕೊಟ್ಟಿಲ್ಲ. ನಾನು ಈ ವಿಷಯದ ಬಗ್ಗೆ ಮಾತನಾಡಿರುವುದಕ್ಕೆ ನೋಟಿಸ್ ಬಂದಿದೆ. ಇದ್ದಾಗ ಯಾಕೆ ಯಾರೂ ಧ್ವನಿ ಎತ್ತಿಲ್ಲ, ಸತ್ತ ಮೇಲೆಯೇ ಯಾಕೆ ಹೇಳುತ್ತಿದ್ದೀರಾ? ನಿಮಗೆ ಸರಿಯಾಗಿ ಗೊತ್ತಾ..? ನಿಮ್ಮ ಬಳಿ ಸಾಕ್ಷಿ ಇದೆಯಾ? ಎನ್ನುವ ಪ್ರಶ್ನೆಗಳ ದೃಷ್ಟಿಯಿಂದ ನೋಟಿಸ್ ನೀಡಿದ್ದಾರೆ.
ನಾಂನಂತ ಮಾತ್ರವಲ್ಲ ಈ ಬಗ್ಗೆ ಮಾತನಾಡಿರುವ ಎಲ್ಲರಿಗೂ ನೋಟಿಸ್ ಹೋಗಿಯೇ ಹೋಗುತ್ತದೆ. ಒಬ್ಬ ಪೊಲೀಸ್ ಅಧಿಕಾರಿ ಯಾರಿದ್ದಾರೆ. ಅವರು ಸರಿಯಾಗಿ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ನಾವು ಮಾತನಾಡಿರುವುದಕ್ಕೆ ನಮ್ಮನ್ನೂ ವಿಚಾರಣೆಗೊಳಪಡಿಸುತ್ತಾರೆ ಎಂದು ಹೇಳಿದರು.
ಇನ್ನು ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದ ಸೋನು ಗೌಡ, ನಾವೀಗ ಏನೇ ಮಾತನಾಡಿದರೂ ರೇಣುಕಾಸ್ವಾಮಿ ಕುಟುಂಬಕ್ಕೆ ನಾವೇನು ಮಾಡಲು ಆಗುವುದಿಲ್ಲ. ಅವರು ಐದು ತಿಂಗಳ ಗರ್ಭಿಣಿ ಅಂದರೆ ಅವರ ಬಗ್ಗೆಯೂ ಯೋಚನೆ ಮಾಡಬೇಕು ನೋಡೋಣ ಎಂದರು.












Click it and Unblock the Notifications