Renukaswamy Murder Case: ನಟ ದರ್ಶನ್ & ಗ್ಯಾಂಗ್ ಮತ್ತೆ 5 ಪೊಲೀಸ್ ಕಸ್ಟಡಿಗೆ
Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿತರಾಗಿದ್ದ ದರ್ಶನ್ ಗ್ಯಾಂಗ್ ಅನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ದರ್ಶನ್ ಗ್ಯಾಂಗ್ ಅನ್ನು 5 ದಿನ ಅಂದರೆ ಜೂನ್ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದ ಆರೋಪ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ಇಂದು ಪ್ರಕರಣದ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಅವರನ್ನು 9 ದಿನ ಕಸ್ಟಡಿಗೆ ಕೊಡುವಂತೆ ಪೊಲೀಸರು ಕೇಳಿದ್ದರು.

ಇದಕ್ಕೆ ದರ್ಶನ್ ಗ್ಯಾಂಗ್ ಪರ ವಾದ ಮಂಡಿಸಿದ ವಕೀಲ ಅನಿಲ್ ಬಾಬು ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಕೋರ್ಟ್ ಎಸ್‌ಪಿಪಿ ಮನವಿಯ ಮೇರೆಗೆ ಎ1 ಆರೋಪಿ ದರ್ಶನ್ & ಎ2 ಆರೋಪಿ ಪವಿತ್ರಾ ಸೇರಿದಂತೆ 13 ಜನ ಆರೋಪಿಗಳನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಆರೋಪಿಗಳನ್ನು ಕಸ್ಟಡಿಗೆ ಕೊಡುವಂತೆ ಕೋರ್ಟ್‌ಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರೆ, ದರ್ಶನ್ ಗ್ಯಾಂಗ್ ಪರ ಅನಿಲ್ ಬಾಬು ವಾದ ಮಂಡಿಸಿದ್ದಾರೆ.
"ಆರೋಪಿಗಳು ಎಲೆಕ್ಟ್ರಿಕ್ ಶಾಕ್ ಕೊಟ್ಟು ರೇಣುಕಾಸ್ವಾಮಿಯನ್ನು ಸಾಯಿಸಿದ್ದಾರೆ. ಆ ಎಲೆಕ್ಟ್ರಿಕ್ ಡಿವೈಸ್ ಅನ್ನು ವಶಕ್ಕೆ ಪಡೆಯಬೇಕಿದೆ," ಎಂದು ಎಸ್‌ಪಿಪಿ ಕೇಳಿಕೊಂಡಿದೆ. ಅಲ್ಲದೆ, ಮೈಸೂರಿನಲ್ಲೂ ಕೂಡ ಮಹಜರು ನಡೆಸಬೇಕಿದೆ ಎಂದು ಕೇಳಿಕೊಂಡಿದೆ.
ಇನ್ನು ಪ್ರಕರಣ ಎ2 ಆರೋಪಿಯಾದ ಪವಿತ್ರಾಗೌಡ ಪರ ವಾದ ಮಂಡಿಸಿದ ವಕೀಲ ನಾರಾಯಣಸ್ವಾಮಿ, "ಪವಿತ್ರಾ ಗೌಡರನ್ನು ಪೊಲೀಸರು 6 ದಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸುತ್ತಿದ್ದಾರೆ. ಯಾವುದೇ ರಿಮ್ಯಾಂಡ್ ಅರ್ಜಿ ನೀಡ್ತಿಲ್ಲ," ಎಂದು ವಾದ ಮಂಡಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಕೋರ್ಟ್ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ ಆದೇಶ ನೀಡಿದ್ದು, ಈ ಆದೇಶದಂತೆ, ಎ1 ನಟ ದರ್ಶನ್, ಎ2 ಪವಿತ್ರಾ ಗೌಡ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜು, ಎ12 ಲಕ್ಷ್ಮಣ್, ಎ13 ದೀಪಕ್ ಮತ್ತು ಎ14 ಪ್ರದೋಶ್, ಎ16 ಕೇಶವಮೂರ್ತಿ ಒಟ್ಟು 13 ಆರೋಪಿಗಳನ್ನು ಮತ್ತೆ ಪೊಲೀಸರು ನಗರದ ಅನ್ನಪೂರ್ಣೇಶ್ವರಿನಗರ ಠಾಣೆಗೆ ಕರೆದೊಯ್ದಿದ್ದಾರೆ.












Click it and Unblock the Notifications