ದರ್ಶನ್‌ ಪರ ಅಖಾಡಕ್ಕೆ ಖ್ಯಾತ ವಕೀಲ ಎಂಟ್ರಿ: ಇವರ ಹಿಸ್ಟರಿ ಹೇಗಿದೆ ಗೊತ್ತಾ?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಅವರನ್ನು ಬಂಧಿಸಲಾಗಿದೆ. ನಟ ದರ್ಶನ್‌ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಪೊಲೀಸರು ಕೇಳುವ ಖಡಕ ಪ್ರಶ್ನೆಗಳಿಗೆ ದರ್ಶನ್ ಸೌಮ್ಯವಾಗಿ ಉತ್ತರ ನೀಡುತ್ತಿದ್ದಾರೆ. ದರ್ಶನ್‌ ಪೊಲೀಸ್‌ ಕಸ್ಟಡಿ ಅವಧಿ ಶನಿವಾರ ಮುಗಿಯಲಿದೆ.

ಗುರುವಾರ ದರ್ಶನ್‌ರನ್ನು ಎರಡು ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ನೀಡಿತ್ತು. ಅಲ್ಲದೆ ಪ್ರಕರಣದಲ್ಲಿ 9 ಜನರಿಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಿತ್ತು. ಶನಿವಾರ ನಟ ದರ್ಶನ್‌ ಅವರ ಅವಧಿಯು ಮುಗಿಯಲಿದೆ. ಹೀಗಾಗಿ ಅವರು ಜೈಲಿಗೆ ಸೇರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಅಂದಹಾಗೆ ಈ ಪ್ರಕರಣಕ್ಕೆ ಇನ್ನೊಬ್ಬ ಹಿರಿಯ ವಕೀಲ ಎಂಟ್ರಿ ನೀಡಲಿದ್ದಾರೆ.

Renuka Swamy murder Case CV Nagesh Senior Lawyer to Represent Darshan Thoogudeepa

ಸೆಲೆಬ್ರಿಟಿಗಳ ಫಸ್ಟ್‌ ಚಾಯ್ಸ್‌ ಲಾಯರ್

ದರ್ಶನ್‌ ಪ್ರಕರಣ ಬಯಲಿಗೆ ಬಂದಾಗಲೇ, ಇವರ ಪರ ವಾದ ಮಾಡುವುದು ಯಾರು ಎಂಬ ಪ್ರಶ್ನೆಗಳು ಓಡುತ್ತಿದ್ದವು. ಅಲ್ಲದೆ ಕೆಲವು ಖ್ಯಾತ ನಾಮ ವಕೀಲರ ಹೆಸರುಗಳು ಸಹ ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಈ ಪ್ರಕರಣವನ್ನು ಒಬ್ಬ ಹಿರಿಯ ವಕೀಲ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ವಕೀಲರು ಕರ್ನಾಟಕದ ಖ್ಯಾತ ಸೆಲೆಬ್ರಿಟಿಗಳ ಫಸ್ಟ್‌ ಚಾಯ್ಸ್‌ ಲಾಯರ್.

ದರ್ಶನ್‌ ಪರವಾಗಿ ಅನಿಲ್‌ ಬಾಬು ಹಾಗೂ ರಂಗನಾಥ್ ರೆಡ್ಡಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್‌ ಪರ ವಾದ ಮಾಡಲು ನುರಿತ ಕ್ರಿಮಿನಲ್‌ ವಕೀಲ ಸಿವಿ ನಾಗೇಶ್‌ ವಾದ ಮಂಡಿಸಲಿದ್ದಾರೆ.

ಹಿರಿಯ ವಕೀಲರ ಎಂಟ್ರಿ

ಶನಿವಾರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಸಿವಿ ನಾಗೇಶ್‌ ವಾದಮಂಡಿಸುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ. ಇನ್ನೊಂದು ಮಾಹಿತಿಯ ಪ್ರಕಾರ ಅನಿಲ್‌ ಬಾಬು ಹಾಗೂ ರಂಗನಾಥ್ ರೆಡ್ಡಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಾದ ಮಂಡಿಸಿದರೆ, ಸಿವಿ ನಾಗೇಶ್‌ ದರ್ಶನ್‌ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸುವ ಸಾಧ್ಯತೆ ಇದೆ. ಖ್ಯಾತ ವಕೀಲ ಸಿವಿ ನಾಗೇಶ್‌ ಸಹಾಯಕರು ಈಗಾಗಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಇದೆ. ಜಾಮೀನು ಅರ್ಜಿ ಹಾಕಲು ತಯಾರಿ ಭರದಿಂದ ನಡೆದಿದ್ದು, ಬೇಕಿದ್ದ ಎಲ್ಲ ಮಾಹಿತಿಯನ್ನು ನಟರಿಂದ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಿವಿ ನಾಗೇಶ್‌ ಹಿಸ್ಟರಿ ನೋಡಿದರೆ, ಇವರು ದಶಕಗಳಿಂದ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ನಡೆಸುತ್ತಾ ಬಂದಿದ್ದಾರೆ. ಇವರು ಮಾಜಿ ಸಚಿವ ಎಚ್‌ಡಿ ರೇವಣ್ಣ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ನಲಪಾಡ್ ಪ್ರಕರಣಗಳಂತ ಹತ್ತು ಹಲವು ಪ್ರಕರಣಗಳಲ್ಲಿ ತಮ್ಮ ವಾದವನ್ನು ಮಂಡಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ರೇವಣ್ಣರಿಗೆ ಜಾಮೀನು ಸಿಗುವಲ್ಲಿ ಸಿವಿ ನಾಗೇಶ್‌ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೊದಲೇ ಭೇಟಿ

ಪ್ರಕರಣ ಬಯಲಿಗೆ ಬರುತ್ತಿದ್ದಂತೆ ನಟ ದರ್ಶನ್‌ ಪತ್ನಿ ಒಳ್ಳೆಯ ವಕೀಲರನ್ನು ಸಂಪರ್ಕಿಸಿದ್ದರು. ಅದರಲ್ಲಿ ಸಿವಿ ನಾಗೇಶ್ ಅವರ ಸೇರಿದ್ದಾರೆ. ತಮ್ಮ ಗಂಡನ ಪರ ವಾದ ಮಂಡಿಸುವಂತೆ ಸಿವಿ ನಾಗೇಶ್‌ ಅವರಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದರು. ವಿಜಯಲಕ್ಷ್ಮಿ ಕಳೆದ ಕೆಲವು ದಿನಗಳಿಂದ ಖ್ಯಾತ ನಾಮ ವಕೀಲರು ಭೇಇ ಮಾಡಿ, ದರ್ಶನ್‌ ಪರ ವಾದಿಸುವಂತೆ ಕೇಳಿಕೊಳ್ಳುತ್ತಿದ್ದರು. ಈಗ ಈ ಪ್ರಕರಣದಲ್ಲಿ ಸಿವಿ ನಾಗೇಶ್‌ ದರ್ಶನ್‌ ಪರ ವಾದ ಮಂಡಿಸುವ ಸಾಧ್ಯತೆ ಇದೆ.

ಪರಪ್ಪನ ಅಗ್ರಹಾರಕ್ಕೆ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಪೊಲೀಸ್ಟ್‌ ಕಸ್ಟಡಿಯಲ್ಲಿದ್ದ ನಟ ದರ್ಶನ್‌ ಅವರನ್ನು ಶನಿವಾರ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ 12 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಗುರುವಾರ 9 ಜನರಿಗೆ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲದೆ ನಾಲ್ಕು ಜನರನ್ನು ಪೊಲೀಸ್ಟ್ ಕಸ್ಟಡಿಗೆ ಪಡೆಯಲಾಗಿತ್ತು. ಈಗ ದರ್ಶನ್ ಸೇರಿದಂತೆ ನಾಲ್ವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+