Renuka Swamy Murder Case: ಪವಿತ್ರಾಗೌಡ & ಆರೋಪಿಗಳ ಸಂಭಾಷಣೆಯ ತಾಂತ್ರಿಕ ಸಾಕ್ಷ್ಯ ಲಭ್ಯ, ದಿನಕ್ಕೊಂದು ಟ್ವಿಸ್ಟ್..
ಬೆಂಗಳೂರು, ಆಗಸ್ಟ್ 15: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್, ಅವರ ಪ್ರೇಯಸಿ ನಟಿ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ 14ದಿನ ವಿಸ್ತರಣೆ ಆಗಿದೆ. ಇದರ ಬೆನ್ನಲ್ಲೆ 13 ಆರೋಪಿಗಳ ಕಾಲ್ ಡಿಟೇಲ್ಸ್ ರಿಪೋರ್ಟ್ (CDR) ಸೇರಿದಂತೆ ಮಹತ್ವದ ಸಾಕ್ಷ್ಯಗಳು ಇರುವ FSL ವರದಿಯು ಪೊಲೀಸ್ ತನಿಖಾಧಿಕಾರಿಗಳ ಕೈ ಸೇರಿದೆ. ಇದರಲ್ಲಿ ಎ1 ಆರೋಪಿ ಪವಿತ್ರಾ ಗೌಡ ಕೈವಾಡ ಬಯಲಾಗಿದೆ. ಆಕೆಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗುವುದು ಖಚಿತವಾಗಿದೆ.
ರೇಣುಕಾಸ್ವಾಮಿ ಕೊಲೆ ವೇಳೆ ನಡೆದ 'ಪಿನ್ ಟು ಪಿನ್' ಕಾಲ್ ಡಿಟೇಲ್ ವರದಿ ಪೊಲೀಸರ ಕೈಗೆ ಸಿಕ್ಕಿದೆ. ಇದರ ಪ್ರಕಾರ, ಪವಿತ್ರಾ ಗೌಡ ಹಾಗೂ ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ರಘು ಅಣತಿಯಂತೆ 13 ಆರೋಪಿಗಳು ಕೃತ್ಯ ನಡೆಸಿರುವುದು ಬಯಲಾಗಿದೆ.

ಪೊಲೀಸರಿಗೆ ಸಿಕ್ಕ ತಾಂತ್ರಿಕ ಸಂತ್ಯಾಂಶಗಳು
ಚಿತ್ರದುರ್ಗದಿಂದ ಆತನನ್ನು ಕರೆತಂದು ಶೆಡ್‌ನಲ್ಲಿ ಕೂಡಿಹಾಕಿ, ಹಿಂಸಿಸುವುದು, ಕೊಲೆ ಬಳಿಕ ಮೃತ ದೇಹ ವಿಲೇವಾರಿ ಮಾಡುವ ಬಗ್ಗೆ ದೂರವಾಣಿ ಮೂಲಕ ಆರೋಪಿಗಳ ಮಧ್ಯೆ ಮಾತುಕತೆ ನಡೆದಿದೆ. ಇದೆಲ್ಲ ಸತ್ಯಾಂಶಗಳು CDR ಅನಾಲಿಸಿಸ್‌ನಿಂದ ಹೊರ ಬಿದ್ದಿದೆ.
ಇದರಲ್ಲಿ ಪವಿತ್ರಾ ಗೌಡ ಅವರು ಯಾರಿಗೆಲ್ಲ, ಎಷ್ಟು ಬಾರಿ ಕರೆ ಮಾಡಿದ್ದಾರೆ. ಎಷ್ಟು ಹೊತ್ತು ಮಾತನಾಡಿದ್ದಾರೆ. ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಈ 13 ಆರೋಪಿಗಳ ಮಧ್ಯೆ ಕೃತ್ಯಕ್ಕೆ ಸಂಬಂಧಿಸಿದಂತೆ ಎಷ್ಟೊತ್ತು ಸಂಭಾಷಣೆ ನಡೆದಿದೆ. ವಾಟ್ಸಾಪ್ ಅನ್ನು ಆರೋಪಿಗಳು ಎಷ್ಟು ನಿಮಿಷ ಬಳಕೆ ಮಾಡಿದ್ದಾರೆ? ಎಂಬೆಲ್ಲ ಸಾಕ್ಷ್ಯಗಳು ಪೊಲೀಸರ ಕೈಸೇರಿವೆ.
ಎಫ್‌ಎಸ್‌ಎಲ್ ವರದಿಯಲ್ಲಿ ಪವಿತ್ರಾ ಗೌಡ ಅವರ ವಿರುದ್ಧ ಅನೇಕ ಸಾಕ್ಷ್ಯಗಳು ಲಭವಿಸಿವೆ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರಕರಣದಲ್ಲಿ ಪವಿತ್ರಾಗೌಡಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.

ಪ್ರಕರಣದಲ್ಲಿ ಹಂತ ಹಂತವಾಗಿ ಹೇಳಿಕೆಗಳು, ಸಿಸಿಟಿವಿ ದೃಶ್ಯಾವಳಿಗಳು, ಫೋನ್ ಕಾಲ್ ಡಿಟೇಲ್, ನೆಟ್‌ವರ್ಕ್ ಸ್ಥಳ, ಇದೆಲ್ಲ ಪರೀಕ್ಷೆ ನಡೆಸಿ ಸಾಬೀತಾಗಿರುವ ವಿಧಿ ವಿಜ್ಞಾನ ಪ್ರಯೋಗಾಲಯ (FSL) ವರದಿಗಳು ಪೊಲೀಸರು ಪಡೆದಿದ್ದಾರೆ. ಈ ಮೂಲಕ ಪ್ರಮುಖ ತಾಂತ್ರಿಕ ಸಾಕ್ಷ್ಯಾಧಾರಗಳು ಪೊಲೀಸರಿಗೆ ಸಿಕ್ಕಂತಾಗಿದೆ.
ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾದ ತಾಂತ್ರಿಕ ಮಾಹಿತಿ ಆಧಾರದಲ್ಲಿ ಆರೋಪಿಗಳಿಂದ 164 ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಮುಂದಿನ ಕೆಲವೇ ವಾರಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗುವ ನಿರೀಕ್ಷೆ ಇದೆ.
ನ್ಯಾಯಾಂಗ ಬಂಧನ ವಿಸ್ತರಣೆ ಆಗಲು ಕಾರಣಗಳೇನು?
ಇನ್ನು ಆರೋಪಿಗಳು ನೇರವಾಗಿ ಪ್ರಕರಣದಲ್ಲಿ ಭಾಗಿಯಾಗಿರುವುದು ಪೊಲೀಸರಿಗೆ ಗೊತ್ತಾಗಿದೆ. ಅಲ್ಲದೇ ಕೊಲೆಗೆ ಸಂಬಂಧಿಸಿದಂತೆ ಅನೇಕ ಮಂದಿ ವಿಚಾರಣೆ ಬಾಕಿ ಇದೆ. ನಟ ದರ್ಶನ್, ಪವಿತ್ರಾ ಗೌಡ ಹಣಬಲದ ಪ್ರಭಾವ ಹೊಂದಿದ್ದು, ಪ್ರಭಾವಿ ವ್ಯಕ್ತಿಗಳ ಪರಿಚಯ ಇದೆ.
ಹೀಗಾಗಿ ಇವರು ಹೊರ ಹೋದರೆ ಮೃತರ ಕುಟುಂಬಸ್ಥರಿಗೆ, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಹುದು, ಸಾಕ್ಷ್ಯ ನಾಶ ಮಾಡಬಹುದು. ಇದೆಲ್ಲ ಕಾರಣದಿಂದಲೇ ಅವರ ನ್ಯಾಯಾಂಗ ಬಂಧನ ವಿಸ್ತರಣೆಗೆ ಕೋರಲಾಗಿತ್ತು. ಅದರಂತೆ ಎರಡು ವಾರ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.












Click it and Unblock the Notifications