Reject KFC trending: ಟ್ವಿಟ್ಟರ್‌ನಲ್ಲಿ ಕರವೇ ಆಕ್ರೋಶ
ಬೆಂಗಳೂರು, ಅಕ್ಟೋಬರ್ 24: ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದಿದ್ದ ಜೊಮ್ಯಾಟೋ ವಿರುದ್ಧ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಟ್ವಿಟ್ಟರ್‌ನಲ್ಲಿ Reject KFC ಎಂದು ಟ್ರೆಂಟ್ ಆಗುತ್ತಿದೆ. ಹಾಗಾದರೆ ಈ ಟ್ರೆಂಡ್ ಯಾಕೆ ಆಗುತ್ತಿದೆ. ಈ ಬಗ್ಗೆ ಮಾಹಿತಿ ನಿಮಗೆ ಇಲ್ಲಿ ನೀಡಲಾಗಿದೆ.
ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ತನ್ನ ಗ್ರಾಹಕರಿಗೆ ಕೆಎಫ್‌ಸಿ ಸಿಬ್ಬಂದಿ ಹೇಳಿದ್ದು ಈಗ ಟ್ವಿಟ್ಟರ್‌ನಲ್ಲಿ Reject KFC ಎಂದು ಟ್ರೆಂಟ್ ಆಗಲು ಕಾರಣವಾಗಿದೆ. ಬೆಂಗಳೂರಿನಲ್ಲಿ ಕೆಎಫ್‌ಸಿಗೆ ತೆರಳಿದ ಗ್ರಾಹಕರೊಬ್ಬರು ಸುಮಾರು ಅರ್ಧ ಗಂಟೆ ಕಳೆದರೂ ಯಾವುದೇ ಕನ್ನಡ ಹಾಡನ್ನು ಹಾಕದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯೊಬ್ಬರು ಬೆಂಗಳೂರಿನ ಕೆಎಫ್‌ಸಿಯಲ್ಲಿ ಕನ್ನಡ ಹಾಡು ಹಾಕದ ಕಾರಣದಿಂದಾಗಿ ಇದನ್ನು ಸಿಬ್ಬಂದಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದ್ದು ನೆಟ್ಟಿಗರು ಈಗ ಕೆಎಫ್‌ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾವು ಭಾರತದಲ್ಲಿ ಇರುವುದು. ನಾವು ಎಲ್ಲಿ ಬೇಕಾದರೂ ಹೋಗಬಹುದು. ಕರ್ನಾಟಕಕ್ಕೆ ಬರಲು ಪಾಸ್‌ಪೋರ್ಟ್ ಬೇಕಾ?," ಎಂದು ಮಹಿಳೆಯನ್ನು ಪ್ರಶ್ನೆ ಮಾಡಿರುವ ಸಿಬ್ಬಂದಿಗಳು, "ನೀವು ಕರ್ನಾಟಕಕ್ಕೆ ಬಂದವರು ಕನ್ನಡ ಮಾತನಾಡಬೇಕು ಎಂದು ಹೇಳಿದರೆ ಯಾವುದೇ ಅರ್ಥವಿಲ್ಲ. ಹಿಂದಿ ನಮ್ಮ ರಾಷ್ಟ್ರ ಭಾಷೆ," ಎಂದು ಕೂಡಾ ಕೆಎಫ್‌ಸಿ ಸಿಬ್ಬಂದಿ ಹೇಳಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳೆ, "ನಮಗೆ ರಾಷ್ಟ್ರ ಭಾಷೆ ಯಾವುದು ಎಂಬುವುದು ಬೇಕಾಗಿಲ್ಲ. ನಮಗೆ ನಮ್ಮ ಭಾಷೆ ಮುಖ್ಯ. ನಮಗೆ ಕನ್ನಡ ಬರುತ್ತದೆ. ಕನ್ನಡ ಹಾಡು ಹಾಕಿ. ಕನ್ನಡ ಭಾಷೆಯನ್ನು ಉಳಿಸಿ," ಎಂದು ಆಗ್ರಹ ಮಾಡಿದ್ದಾರೆ. "ಒಬ್ಬೊಬ್ಬರು ಒಂದೊಂದು ಬಾಷೆಯ ಹಾಡು ಕೇಳಿದರೆ ನಾವು ಯಾವುದು ಹಾಕುವುದು," ಎಂದು ಈ ವೇಳೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಹಾಗೆಯೇ ನಾವು ಈಗ ಹಾಡನ್ನೇ ಆಫ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿರುವ ಕೆಎಫ್ ಸಿ ಗಳಲ್ಲಿ ಕನ್ನಡ ಹಾಡು ಹಾಕುವಂತಿಲ್ಲ ಅಂತ @KFC_India ನಿಯಮ ಮಾಡಿದೆಯಂತೆ!#ಇದೆಂತಹಗಾಂಚಲಿ #BanKFCinKarnataka @CMofKarnataka @karkalasunil @rajanna_rupesh pic.twitter.com/a8SMvRXXmJ
— ವಿನಯ್ 🇮🇳 (@meVinayRW) October 23, 2021
"ಯಾವ ಗ್ರಾಹಕರು ಬಂದು ಕೂಡಾ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಯ ಹಾಡನ್ನು ಹಾಕಿ ಎಂದು ಕೇಳುವುದಿಲ್ಲ. ನಮ್ಮ ಕನ್ನಡ, ನಮ್ಮ ದೇಶ, ನಮ್ಮ ಭಾಷೆಯನ್ನು ನಾವು ಉಳಿಸಿಕೊಳ್ಳಬೇಕು. ಬೇರೆ ಗ್ರಾಹಕರು ಏನು ಹೇಳುತ್ತಾರೋ ನಮಗೆ ತಿಳಿದಿಲ್ಲ. ನಾವು ಕನ್ನಡದ ಜನರು, ನಮಗೆ ಕನ್ನಡ ಭಾಷೆ ಬೇಕು ಅಷ್ಟೇ," ಎಂದು ಖಡಕ್ ಆಗಿ ಮಹಿಳೆ ನುಡಿದಿದ್ದಾರೆ.
ಇನ್ನು ಈ ನಡುವೆ ಮಹಿಳಾ ಸಿಬ್ಬಂದಿಯೊಬ್ಬರು, "ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿರುವುದಾ? ಇದಕ್ಕೆ ಮುಂಚೆ ಬಂದವರೂ ಇದೇ ರೀತಿ ಕೇಳಿದ್ರು, ಆಗ ಆಫಿಸರ್ ಬಂದು ಕೂತು ಮಾತನಾಡಿದರು. ಆ ಬಳಿಕ ಅವರಿಂದ ಏನು ಮಾಡಲು ಆಗಲಿಲ್ಲ. ನೀವು ಸುಮ್ಮನೆ ಯಾಕೆ ಮಾತನಾಡುತ್ತೀರಿ. ಕಂಪನಿ ರೂಲ್ಸ್ ಏನಿದೆ ಅದನ್ನು ನಾವು ಫಾಲೋ ಮಾಡುತ್ತೇವೆ," ಎಂದು ಹೇಳುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಕೆಎಫ್‌ಸಿ ಸಂಸ್ಥೆ ಗುರಿಯಾಗಲು ಕಾರಣವಾಗಿದ್ದಾರೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ವಿಟ್ಟರ್‌ನಲ್ಲಿ "Reject KFC ಹಾಗೂ ಕನ್ನಡ ಬೇಕು" ಎಂಬುವುದು ಟ್ರೆಂಟ್ ಆಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿನಯ್ ಎಂಬವರು, "ಕರ್ನಾಟಕದಲ್ಲಿರುವ ಕೆಎಫ್‌ಸಿ ಗಳಲ್ಲಿ ಕನ್ನಡ ಹಾಡು ಹಾಕುವಂತಿಲ್ಲ ಅಂತ ಕೆಎಫ್‌ಸಿ ನಿಯಮ ಮಾಡಿದೆಯಂತೆ," ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
"ಈ ಕೆಎಫ್‌ಸಿಯವರು ಶ್ರೀಲಂಕಾದಲ್ಲಿ ಸಿಂಹಳಿ, ಚೀನಾದಲ್ಲಿ ಮ್ಯಾಂಡರಿನ್, ಜೋರ್ಡಾನ್‌ನಲ್ಲಿ ಅರೇಬಿಕ್, ರಷ್ಯಾದಲ್ಲಿ ರಷ್ಯನ್ ಹೀಗೆ ಆಯಾ ನಾಡುಗಳಲ್ಲಿ ಅವರವರ ನುಡಿಗಳನ್ನೇ ಬಳಸಿದ್ದಾರೆ. ನಮ್ಮ ಕನ್ನಡದಲ್ಲಿ ಸೇವೆ ಕೊಡೊಕೆ ಆಗಿಲ್ಲ ಅಂದ್ರೆ ಕರ್ನಾಟಕದಿಂದ ಗಂಟು ಮೂಟೆ ಕಟ್ಟಿಕೊಂಡು ಹೋಗಿ," ಎಂದು ಮತ್ತೋರ್ವ ಟ್ವೀಟ್ಟಿಗರು ಕಿಡಿಕಾರಿದ್ದಾರೆ.
(ಒನ್‌ಇಂಡಿಯಾ ಸುದ್ದಿ)
-
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications